ಜಗಳೂರು
ಬಿರು ಬೇಸಿಗೆ ಇರುವು ದರಿಂದ ನಾಡಲ್ಲೇ ನೀರಿಗೆ ಬರ ಇರಬೇ ಕಾದರೇ ಇನ್ನೂ ಕಾಡಿನಲ್ಲಿ ಕೇಳಬೇಕೇ. ಕಾಡಿನ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಉದ್ದೇಶದಿಂದ ಅರಣ್ಯ ಇಲಾಖೆ ವತಿಯಿಂದ ರಂಗಯ್ಯನದುರ್ಗ ಕೊಂಡುಕುರಿ ವನ್ಯ ಜೀವಿಧಾಮದಲ್ಲಿ ಕೃತಕ ನೀರಿನ ಕೊಳಗ ಳನ್ನು (ಜಲಹೊಂಡ) ನಿರ್ಮಿಸಲಾಗಿದ್ದು, ಕೊಂಡುಕುರಿ, ಚಿರತೆ, ಕರಡಿಗಳು, ಕಾಡುಹಂದಿಗಳು ಸೇರಿದಂತೆ ವಿವಿಧ ಪ್ರಾಣಿಗಳು ನೀರು ಕುಡಿಯಲು ಆಗಮಿಸಿರುವುದು ಅರಣ್ಯ ಇಲಾಖೆಯವರು ಹಾಕಿರುವ ಸಿಸಿ ಟಿವಿ ಯಲ್ಲಿ ಸೆರೆಯಾಗಿವೆ.
ಹೆಸರೇ ಹೆಳುವಂತೆ ಯಾವುದೇ ನದಿಮೂಲಗಳಿಲ್ಲದ ಬರ ಪೀಡಿತ ಜಗಳೂರು ತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ಮಳೆ ಬರುವುದೇ ಅಪರೂಪವಾಗಿದೆ. ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದರೂ ವರುಣ ಕೃಪೆ ತೋರದೆ ಕಾಡು -ನಾಡು ಎಲ್ಲೆಲ್ಲೂ ನೀರಿಗೆ ಹಾಹಾಕಾರ ಉಂಟಾಗಿದೆ. ಕಾಡು ಪ್ರಾಣಿಗಳು ತಮ್ಮ ನೀರಿನ ದಾಹ ಇಂಗಿಸಿಕೊಳ್ಳಲು ನಾಡಿನತ್ತ ಮುಖ ಮಾಡಿವೆ. ಈಗಾಗಲೇ ರೈತರ ಕೊಳವೆ ಬಾವಿಗಳಲ್ಲೂ ನೀರು ಬಾರದ ಕಾರಣ ಪ್ರಾಣಿಗಳಿಗೆ ನೀರು ಕಾಣದಂತಾ ಗಿದೆ. ಇದರಿಂದ ಬೇಸತ್ತ ಕಾಡು ಪ್ರಾಣಿಗ ಳು ರೈತರು ನೀರಾವರಿಗೆ ಅಳವಡಿಸಿರುವ ಪೈಪ್‍ಗಳನ್ನು ಹಾಳು ಮಾಡುತ್ತಿವೆ. ಈಗಾಗಲೇ ನೀರು ಸಿಗದೆ ಎಷ್ಟೋ ಪಕ್ಷಿಗ ಳು, ಸಣ್ಣ ಸಣ್ಣ ಪ್ರಾಣಿಗಳು ಜೀವ ಕಳೆದುಕೊಂಡಿವೆ.
ಕಾಡು ಪ್ರಾಣಿಗಳ ನಾಡಿನ ಪ್ರವೇಶ ತಡೆಯುವ ಉದ್ದೇಶ ಹಾಗೂ ಕಾಡು ಪ್ರಾಣಿಗಳಿಗೆ ಕಾಡಿನಲ್ಲಿಯೇ ನೀರು ದೊರಕಿಸುವ ದೃಷ್ಟಿಯಿಂದ ರಂಗಯ್ಯನ ದುರ್ಗ ಅರಣ್ಯ ಪ್ರದೇಶದಲ್ಲಿ ಜಲಹೊಂಡಗಳ ನಿರ್ಮಾಣಕ್ಕೆ ಮುಂದಾಗಿದೆ. ಸುಮಾರು 78 ಚ.ಕಿ.ಮೀ. ರಂಗಯ್ಯನ ದುರ್ಗ ಕೊಂಡುಕುರಿ ವನ್ಯ ಜೀವಿಧಾಮ ದಲ್ಲಿ 2018-19ನೇ ಸಾಲಿನಲ್ಲಿ ಸಿಮೆಂಟ್ ಬಳಸಿ 06 ಕೃತಕ ನೀರಿನ ಕೊಳಗಳನ್ನು ನಿರ್ಮಾಣ ಮಾಡಿದೆ.
ನೀರಿನ ಕೊಳಗಳು ಎಲ್ಲ ತರಹದ ಪ್ರಾಣಿ-ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಿಂದ ಕಾಡು ಪ್ರಾಣಿಗಳು, ಪಕ್ಷಿಗಳು, ಸರಿಸೃಪಗಳು ಸೇರಿದಂತೆ ಮತ್ತಿತರ ಜೀವಿಗಳಿಗೆ ನೀರು ಒದಗಿಸುವ ಕೆಲಸ ಮಾಡಿದೆ. ಕೊಳದಲ್ಲಿ ನೀರು ಮುಗಿದರೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ. ಸಾಕಷ್ಟು ಪ್ರಾಣಿಗಳು ಅಲ್ಲಿಯೇ ನೀರು ಕುಡಿದು ರೈತರ ಜಮೀನಿನತ್ತ ಲಗ್ಗೆಯಿಡುವುದಕ್ಕೆ ತಡೆಯೊಡ್ಡಿದಂತಾಗಿದೆ. ಈ ಅರಣ್ಯ ಪ್ರದೇಶ ದಲ್ಲಿ ವಿಶೇಷ ಪ್ರಾಣಿಯಾದ ಕೊಂಡುಕುರಿ ಸೇರಿದಂತೆ ಚಿರತೆ, ಕರಡಿ, ಕಾಡುಹಂದಿಗಳು ಕಂಡು ಬರುವುದರಿಂದ ನೀರಿನ ಕೊಳಗಳು ಸಹಾಯಕವಾಗಿವೆ.
ಹಲವು ವರ್ಷಗಳಿಂದ ಮಳೆ ಅಭಾವ ಎದುರಿಸುತ್ತಿರುವ ಈ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಳ್ಳ-ಕೊಳ್ಳಗಳು ನಿಸರ್ಗದತ್ತವಾಗಿ ನಿರ್ಮಾಣವಾಗಿವೆ. ಕಾಡಿನಲ್ಲಿ ಬೃಹತ್ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡಲು ಸುಮಾರು ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಳೆದ ವರ್ಷ ಸೆಪ್ಟಂಬರ್ ಅಂತ್ಯದ ವೇಳೆ ಹದ ಮಳೆ ಬಂದಿದ್ದು ಬಿಟ್ಟರೆ ಮತ್ತೆ ಮಳೆಯೇ ಆಗಿಲ್ಲ. ಇದರಿಂದ ಈ ಭಾಗದಲ್ಲಿ ದೊಡ್ಡಮಟ್ಟದ ನೀರಿನ ಅಭಾವ ಎದುರಿಸುವಂತಾಗಿದೆ.
ವಲಯ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಚೆಕ್ ಡ್ಯಾಂಗಳ ನಿರ್ಮಾಣ ಮಾಡಲಾಗಿದೆ. ಆದರೆ ತೀವ್ರ ಮಳೆ ಅಭಾವದಿಂದ ಚೆಕ್ ಡ್ಯಾಂಗಳಲ್ಲಿ ಹನಿ ನೀರಿಲ್ಲದಂತಾಗಿದೆ. ಇದನ್ನು ಮನಗಂಡು ಅರಣ್ಯದಲ್ಲಿ ಕೃತಕ ಕೊಳಗಳನ್ನು ನಿರ್ಮಿಸಿ ನೀರನ್ನು ತುಂಬಿಸಲಾಗಿದೆ. ಕೊಳಗಳು ಕೃತಕವಾಗಿ ನಿರ್ಮಿಸಿದ್ದರೂ ಭೌತಿಕವಾ ಗಿಯೇ ಕಾಣುವುದರಿಂದ ಕಾಡಿನ ಪ್ರಾಣಿ-ಪಕ್ಷಿಗಳಿಗೆ ನೀರು ಕುಡಿಯಲು ಸಹಾಯ ಕವಾಗಿದೆ.