ಜಗಳೂರು:
ಕುಷ್ಠ ರೋಗ ನಿವಾರಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಹಶೀಲ್ದಾರ್ ಶ್ರೀಧರ್‍ಮೂರ್ತಿ ಹೇಳಿದರು
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ತಾಲೂಕು ಆರೋಗ್ಯಧಿಕಾರಿಗಳ ಕಛೇರಿ ಹಾಗೂ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಕೊಳ್ಳಲಾಗಿದ್ದ ಸ್ಪರ್ಷ ಕುಷ್ಠ ರೋಗ ಅರಿವು ಆಂದೋಲನ ಕಾರ್ಯ ಕ್ರಮದ ಪೂರ್ವ ಸಿದ್ದತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಕ್ಬೋಬರ್ 22 ರಿಂದ ನ. 04 ವರೆಗೆ ಈ ಆಂದೊಲನ ನಡೆಯಲಿದೆ. ತಾಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಕುಷ್ಠ ರೊಗಕ್ಕೆ ಸಂಭಂದಿಸಿದ ಆಂದೋಲನ ನಡೆಯಲಿದೆ. ಆಯಾ ಗ್ರಾಮಗಳಲ್ಲಿ ಟಾಂ ಟಾಂ ಹೊಡೆಸಬೇಕು ಹಾಗೂ ಬಿತ್ತಿ ಪತ್ರಗಳನ್ನು ವಿತರಿಸಿ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಶಿಶು ಅಭಿವೃದ್ದಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಾರುವಂತ ಅಂಗನವಾಡಿ ಕೇಂದ್ರಗಳಲ್ಲಿರುವ ಮಕ್ಕಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಬೇಕು ಅದೇ ರಿತಿ ಸಮಾಜ ಕಲ್ಯಾಣ ಇಲಾಖೆಯವರು ಸಹ ವಿದ್ಯಾರ್ಥಿ ನಿಲಯಗಳಲ್ಲಿರು ಮಕ್ಕಳ ಬಗ್ಗೆ ನಿಗಾವಹಿಸಿ ಆಂದೊಲಕ್ಕೆ ಸಹಕಾರ ನೀಡಬೇಕು ಎಂದರು ಹೇಳಿದರು
ತಾಲೂಕು ಆರೋಗ್ಯಧಿಕಾರಿ ಜಿ.ಓ.ನಾಗರಾಜ್ ಮಾತನಾಡಿ ಕುಷ್ಠರೋಗ ಗುಣಪಡಿಸಬಹುದಾದ ಖಾಯಿಲೆಯಾಗಿದ್ದು ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ. ಸರಕಾರ ಇಂತ ರೋಗಿಗಳಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡುವುದರೊಂದಿಗೆ ವಿವಿಧ ಕ್ಷೇತ್ರ ಗಳಲ್ಲಿ ಮಿಸಲಾತಿಯನ್ನು ಸಹ ನೀಡುತ್ತಿದೆ. ತಮ್ಮ ಮನೆಗಳಿಗೆ ಸಿಬ್ಬಂದಿಗಳು ಬಂದ ಸಂಧರ್ಭದಲ್ಲಿ ಸಂಕೊಚಪಡದೇ ಇರವು ಮಾಹಿತಿಯನ್ನು ಸಾರ್ವಜನಿಕರು ನೀಡಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಆರ್ ಐ ಅಜ್ಜಪ್ಪ ಪತ್ರಿ , ಸಮಾಜ ಕಲ್ಯಾಣ ಇಲಾಖೆಯ ಶಿವಣ್ಣ , ಶಿಶು ಅಭಿವೃದ್ದಿ ಅಧಿಕಾರಿ ಭಾರತಿ ಬಣಕಾರ್, ಶಿಕ್ಷಣ ಇಲಾಖೆಯ ಬಿಆರ್ ಪಿ ರವಿಕುಮಾರ್, ಶಶಿಕಲಾ, ಆರೋಗ್ಯ ಇಲಾಖೆಯ ಪರಶುರಾಮ ಸೇರಿದಂತೆ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
