ಕುವೆಂಪು ಅವರ ವೈಚಾರಿಕ ಚಿಂತನೆಗಳು ಜನಮಾಸಕ್ಕೆ ತಲುಪುವಂತಾಗಬೇಕು

ಶಿರಾ:

        ಕುವೆಂಪು ಈ ಶತಮಾನದ ಬಹು ದೊಡ್ಡ ಸಾಂಸ್ಕøತಿಕ ನಾಯಕನಾಗಿದ್ದು, ಅವರನ್ನು ಜಾತಿ ಕೇಂದ್ರದಿಂದ ದೂರವಿರಿಸಿ ಅವರ ವೈಚಾರಿಕ ಚಿಂತನೆಗಳನ್ನು ಜನ ಮಾನಸಕ್ಕೆ ಬಿತ್ತಬೇಕಾಗಿರುವುದು ತುರ್ತಿನ ಕೆಲಸ ಎಂದು ಪ್ರೊ. ಕಟಾವೀರನಹಳ್ಳಿ ನಾಗರಾಜು ತಿಳಿಸಿದರು.

         ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಏರ್ಪಡಿಸಿದ್ದ ರಾಷ್ಟ್ರ ಕವಿ “ಕುವೆಂಪು ನಮನ-ಮನನ” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು. ಕುವೆಂಪು ವೈಚಾರಿಕ ಜಾಗೃತಿಯ ಹರಿಕಾರನಾಗಿದ್ದು, “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯವು ವೈಚಾರಿಕ ಚಿಂತನೆಯ ರೂಪವಾಗಿದೆ. ಹಲವಾರು ಶೋಷಿತ ಪಾತ್ರಗಳಿಗೆ ಧ್ವನಿ ರೂಪ ನೀಡುವ ಮೂಲಕ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ವೈಚಾರಿಕ ತತ್ವದಡಿ ನಿರೂಪಿಸಿದ ಕೀರ್ತಿ ಕುವೆಂಪು ರವರಿಗೆ ಸಲ್ಲುತ್ತದೆ ಎಂದುರು.

        ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ರವರು ವಿದ್ಯಾರ್ಥಿಗಳಿಗೆ ಅಧ್ಯಾಪಕರೇ ಮಾದರಿ ಆಗಿರುವಂತೆ ಅಧ್ಯಾಪಕರೂ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಆಗಿಸುವುದರ ಕಡೆ ಪ್ರಭಾವ ಬೀರಬೇಕು ಕುವೆಂಪು ಈ ತತ್ವದಲ್ಲಿ ನಂಬಿಕೆ ಇಟ್ಟವರು ಹಾಗಾಗಿಯೇ ಕುವೆಂಪು ರವರ ಬಹುತೇಕ ಸಾಹಿತ್ಯ ವೈಚಾರಿಕ ನೆಲೆಯಿಂದ ತುಂಬಿದೆ. ಮಾತ್ರವಲ್ಲ ನಿತ್ಯವು ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದರು.

        ಇಂದಿನ ಮತೀಯ ತಾರತಮ್ಯದ ಪ್ರಸ್ತುತ ವಾತಾವರಣದಲ್ಲಿ ಜಲಗಾರ, ಏಕಲವ್ಯ, ಶೂದ್ರ ತಪಸ್ವಿ ಈ ಬಗೆಯ ಪಠ್ಯಗಳು ಕುವೆಂಪು ರವರ ವಿಶ್ವ ಮಾನವ ಪ್ರಜ್ಷೆಗೆ ಸಂಕೇತವಾಗಿವೆ ಎಂದು ವೇಣುಗೋಪಾಲ್ ಕುವೆಂಪು ಅವರ ಕೃತಿಗಳನ್ನು ಕುರಿತು ಯುವ ಪೀಳಿಗೆಗೆ ಅವರ ಚಿಂತನೆಗಳನ್ನು ಅಭ್ಯಸಿಸುವಂತೆ ಕರೆ ನೀಡಿದರು.

       ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನಾಗಭೂಷಣಯ್ಯ ಮಾತನಾಡಿ, ಮಾನವೀಯತೆಗೆ ಮತ್ತೊಂದು ಮಾದರಿಯಾಗಿರುವ ಕುವೆಂಪು ನಿತ್ಯ ನೆನೆಕೆಗೆ ಪಾತ್ರರಾದವರು, ಎಂದು ಕುವೆಂಪು ರವರ ಸಾಹಿತ್ಯದ ಹಿನ್ನಲೆಯನ್ನು ವಿವರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಚಿಕ್ಕಣ್ಣ ರವರು ಕುವೆಂಪು ವಿಶ್ವ ಪ್ರಜ್ಞೆಯ ಸಂಕೇತ, ಮಾನವೀಯತೆಗೆ ನಿತ್ಯವೂ ಮಾದರಿ ಅವರ ನೆನೆಪು ನಮನ ಕನ್ನಡ ವಿಭಾಗಕ್ಕೆ ಸ್ಪೂರ್ತಿ ಎಂದು ವಿವರಿಸಿ ಕಾರ್ಯಕ್ರಮದ ಸ್ವರೂಪವನ್ನು ಪರಿಚಯಿಸಿದರು.ಕನ್ನಡ ಪ್ರಾಧ್ಯಾಪಕ ಕೆ. ಮುನಿರಾಜು ಕಾರ್ಯಕ್ರಮವನ್ನು ನಿರೂಪಿಸಿದರು . ಅಧ್ಯಾಪಕ ಗಂಗಾಧರ ವಂದಿಸಿದರು. ವಿದ್ಯಾರ್ಥಿನಿಯರಾದ  ಹೇಮ ತಂಡದವರು ಕುವೆಂಪು ಗೀತೆಗಳನ್ನು ಹಾಡಿದರು. ಕಾಲೇಜಿನ ಅಧ್ಯಾಪಕರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap