ಕುವೆಂಪು ಜಯಂತಿಯಂದು ನಮ್ಮೂರು ಕವನ ಸಂಕಲನ ಕೃತಿ ಬಿಡುಗಡೆ

ಕುಣಿಗಲ್

        ಕುವೆಂಪುರವರ ಆಶಯದಂತೆ ಯುವ ಸಾಹಿತಿಗಳನ್ನು ಬೆಳೆಸಲು ಪ್ರತಿ ತಿಂಗಳು ವಿವಿಧ ಸಾಹಿತ್ಯ ಲೋಕದ ಮಹನೀಯರ ಹೆಸರಿನಲ್ಲಿ ಕವಿಗೋಷ್ಠಿಯನ್ನ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಕಸಾಪ ಅಧ್ಯಕ್ಷ ದಿನೇಶ್‍ಕುಮಾರ್ ತಿಳಿಸಿದರು.
ಪಟ್ಟಣದ ದೊಡ್ಡಕೆರೆ ಏರಿ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕುವೆಂಪು ಜನ್ಮ ಜಯಂತಿ ಅಂಗವಾಗಿ ಕವಿಗೋಷ್ಠಿ ,ಕುವೆಂಪು ಗೀತೆಗಳ ಗಾಯನಗಳು ಹಾಗೂ ವೈ.ಜಿ.ವೆಂಕಟೇಶಯ್ಯ ರಚಿಸಿರುವ ನಮ್ಮೂರು ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,

          ವಿಶ್ವ ಮಾನವ ಕುವೆಂಪುರವರು ಹುಟ್ಟಿದ ದಿನದಂದು ತಾಲ್ಲೂಕಿನಲ್ಲಿ ಹಲವಾರು ಸಾಹಿತಿಗಳು ಇರುವುದರಿಂದ ಯುವ ಸಾಹಿತಿಗಳು ಲೋಕಕ್ಕೆ ಬರಬೇಕೆಂಬ ಅಭಿಪ್ರಾಯದಿಂದ,ಇಂತಹ ಸುಂದರ ಪರಿಸರದಲ್ಲಿ ಕವಿಗೋಷ್ಠಿ,ಗಾಯನಗಳು ಹಾಗೂ ನಮ್ಮೂರು ಕವನ ಸಂಕಲನ ಕೃತಿಯನ್ನ ಬಿಡುಗಡೆ ಮಾಡುತ್ತಿದ್ದು,ಈ ಕಾರ್ಯಕ್ರಮವನ್ನ ಪ್ರತಿ ತಿಂಗಳು ಹೆಸರಾದಂತಹ ಒಬ್ಬ ಸಾಹಿತಿ ಹೆಸರಿನಲ್ಲಿ ಕವಿಗೋಷ್ಠಿಯನ್ನ ನಡೆಸಲಾಗುವುದು ಎಂದರು.

          ವೈ.ಜಿ.ವೆಂಕಟೇಶಯ್ಯರವರು ನಮ್ಮೂರು ಕವನ ಸಂಕಲನವನ್ನ ಸಾಹಿತಿ ಕುಣಿಗಲ್ ದಿವಾಕರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್, ಪತ್ರಕರ್ತರಾಮಚಂದ್ರಯ್ಯ ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನ ಕಸಾಪ ಅಧ್ಯಕ್ಷ ಕ.ಚಾ.ಕೃಷ್ಣಪ್ಪ ವಹಿಸಿದ್ದರು.ನಿರೂಪಣೆ ಕು.ವಿಜಯಲಕ್ಷ್ಮೀ,ನಾಡಗೀತೆ,ರೈತಗೀತೆಯನ್ನ ಸೋಮಶೇಖರ್ ನಡೆಸಿಕೊಟ್ಟರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link