ಶಿರಾ

ನಗರದ ಸಂತೇಪೇಟೆಯ ಕೊಳದಪ್ಪಲೇಶ್ವರಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಮೀಪದಲ್ಲಿನ ಬಡಾವಣೆಯಲ್ಲಿ ಚರಂಡಿ ಇಲ್ಲದೆ ಮನೆಗಳ ಅನೈರ್ಮಲ್ಯದ ನೀರು ರಸ್ತೆಗೆ ಹರಿಯುತ್ತಿದ್ದು, ಈ ಕೂಡಲೇ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಸಂತೇಪೇಟೆಯ ಈ ರಸ್ತೆಯಲ್ಲಿನ ಮನೆಗಳ ಚರಂಡಿಯ ನೀರು ರಸ್ತೆಗೆ ಹರಿಯುತ್ತಿರುವ ಪರಿಣಾಮ, ಸೊಳ್ಳೆಗಳ ಕಾಟದಿಂದ ರೋಗ ರುಜಿನಗಳಿಗೂ ಕಾರಣವಾಗುತ್ತಿದ್ದು, ಈ ಕೂಡಲೇ ನಗರಸಭೆಯಿಂದ ಚರಂಡಿ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
