ಸ್ವಚ್ಚತೆ ಓಕೆ, ಅಸುರಕ್ಷತೆ ಏಕೆ?

ಹುಳಿಯಾರು:

     ಕೊರೊನಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪಟ್ಟಣವನ್ನು ಸ್ವಚ್ಚ ಮಾಡುತ್ತಿರುವುದು ಓಕೆ. ಆದರೆ ಅಸುರಕ್ಷತೆಯಿಂದ ಸ್ವಚ್ಚ ಮಾಡಿಸುತ್ತಿರುವುದಾದರೂ ಏಕೆ ಎಂದು ಹುಳಿಯಾರು ಪಪಂ ಮುಖ್ಯಾಧಿಕಾರಿ ಮುಂಜುನಾಥ್ ಅವರನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    ಕರೋನಾ ಹರಡುವಿಕೆ ಮುಂಜಾಗ್ರತೆ ಕ್ರಮವಾಗಿ ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ಪಟ್ಟಣದ ಕೆಲವಡೆ ಸ್ವಚ್ಛತಾ ಕಾರ್ಯ ನಡೆದಿದ್ದು ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರು ಈ ಸ್ವಚ್ಚತೆಯಲ್ಲಿ ತೊಡಗಿದ್ದು ರಸ್ತೆ ಪಕ್ಕದ ತಿಪ್ಪೆ, ಚರಂಡಿ ತ್ಯಾಜ್ಯ, ಅನಗತ್ಯ ಗಿಡಗಂಟೆಗಳನ್ನು ಇವರು ಕಳೆದ ಎರಡ್ಮೂರು ದಿನಗಳಿಂದ ಕ್ಲೀನ್ ಮಾಡುತ್ತಿದ್ದಾರೆ.

     ಆದರೆ ಪೌರಕಾರ್ಮಿಕರು ಆರೋಗ್ಯದ ಸುರಕ್ಷೆತೆಯ ದೃಷ್ಠಿಯಿಂದ ಕನಿಷ್ಠ ಸಮವಸ್ತ್ರ, ಮಾಸ್ಕ್, ಹ್ಯಾಂಡ್ ಗ್ಲೌವ್ಸ್, ಶೂ ಕೂಡ ಧರಿಸಿ ಸ್ವಚ್ಚತೆ ಮಾಡಬೇಕಿದೆ. ಆದರೆ ಇದಾವೂವೂ ಇಲ್ಲದೆ ಸುಡು ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದು, ಪಟ್ಟಣದ ಸ್ವಚ್ಛತೆ ಕಾಪಾಡುವ, ಪಟ್ಟಣವನ್ನು ಸದಾ ಆರೋಗ್ಯವಾಗಿರುವ ಮಹತ್ವ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಆರೋಗ್ಯಕ್ಕೆ ರಕ್ಷಣೆ ಇಲ್ಲದಾಗಿದೆ.

      ಪಪಂ ಮುಖ್ಯಾಧಿಕಾರಿಗಳಿಗೆ ಈ ಬಗ್ಗೆ ಪ್ರಶ್ನಿಸಿದರೆ ಪೌರಕಾರ್ಮಿಕರ ಸುರಕ್ಷತೆಯ ದೃಷ್ಠಿಯಿಂದ ಮಾಸ್ಕ್, ಶೂ, ಹ್ಯಾಂಡ್ ಗ್ಲೌವ್ಸ್ ಕೊಟ್ಟಿರುವುದಾಗಿ ಹೇಳುತ್ತಾರೆ. ಆದರೆ ಅವರ ಸಮ್ಮುಖದಲ್ಲೇ ಇದಾವುದನ್ನೂ ಧರಿಸದೆ ಸ್ವಚ್ಚತೆಗೆ ಇಳಿದಿದ್ದರೂ ಸಹ ಈ ಬಗ್ಗೆ ಪ್ರಶ್ನೆ ಮಾಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಗುರಿಯಾಗಿದೆ.

     ಪೌರಕಾರ್ಮಿಕರು ಆರೋಗ್ಯವಾಗಿದ್ದರಷ್ಟೆ ಹುಳಿಯಾರು ಪಟ್ಟಣ ಸ್ವಚ್ಛವಾಗಿರಲು ಸಾಧ್ಯ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಈಗಲಾದರೂ ಅವರಿಗೆ ಕನಿಷ್ಠ ಮಾಸ್ಕ್, ಹ್ಯಾಂಡ್ ಗ್ಲೌಸ್, ಶೂ, ಸ್ಯಾನಿಟೈಸರ್ ಸಹಿತ ಸ್ವಚ್ಚತೆಗೆ ಮುಂದಾಗುವಂತೆ ಕಟ್ಟುನಿಟ್ಟಿನ ಆದೇಶ ಮಾಡಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link