ಶ್ರೀ ಲಕ್ಷ್ಮೀದೇವಿ (ಲಕ್ಕಮ್ಮದೇವಿ) ಆಲಯದಲ್ಲಿ ಕಾರ್ತಿಕ ಮಹೋತ್ಸವ ಆಚರಣೆ

ಮಿಡಿಗೇಶಿ

         ಮಿಡಿಗೇಶಿ ಬೆಟ್ಟದ ತಪ್ಪಲ್ಲಲ್ಲಿರುವ, ಕಳೆದ ಒಂದು ನೂರ ಎಂಭತ್ತು ವರ್ಷಗಳ ಐತಿಹ್ಯವಿರುವ, ಶ್ರೀ ಲಕ್ಷ್ಮೀ ದೇವಿಗೆ (ಲಕ್ಕಮ್ಮ ದೇವಿ), ಕುಂಚಿಟಿಗ ಒಕ್ಕಲಿಗರ 48 ಗೋತ್ರಗಳಲ್ಲಿ ಒಂದಾದ ಸೆಟ್ಟೇನೋರು ಗೋತ್ರದ ಸಹೋದರ, ಸಹೋದರಿಯರು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಕಾರ್ತಿಕ ಮಾಸದ ಕೊನೆ ಸೋಮವಾರದ ಪ್ರಯುಕ್ತ ಎಲ್ಲರೂ ಸೇರಿ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿದರು.

        ಸುಮಾರು ಎರಡೂವರೆ ಸಾವಿರ ಮಂದಿಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸದರಿ ಕಾರ್ಯಕ್ರಮದಲ್ಲಿ ಕೆ.ವಿ.ನಾಗಪ್ಪನವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ಮಾತನಾಡಿ, ಜನಾಂಗದವರು ವಿದ್ಯಾರ್ಜನೆಯ ಮೂಲಕ ಸಮಾಜ ಹಾಗೂ ಸರ್ಕಾರದ ನಾನಾ ಸ್ಥರದ ಹುದ್ದೆಗಳನ್ನು ಹೊಂದಿ ಸಮಾಜ ಹಾಗೂ ಜನಾಂಗದ ಅಭಿವೃದ್ಧಿಗೆ ಸಹಕರಿಸಿ ಸಮಾಜದ ಋಣ ತೀರಿಸಬೇಕು. ಉನ್ನತ ಹುದ್ದೆಗಳಲ್ಲಿರುವವರು ಬಡ ವಿದ್ಯಾವಂತ ಮಕ್ಕಳ ವಿದ್ಯಾಭಿವೃದ್ದಿಗೆ ಸಹಕರಿಸಬೇಕು. ವಿದ್ಯಾರ್ಜನೆಯಿಂದ ಸಮುದಾಯ ಹಾಗೂ ಸಮಾಜದ ಬೆಳವಣಿಗೆ ಸಾಧ್ಯವಾಗಲಿದೆ. ಶ್ರೀ ಲಕ್ಷ್ಮೀದೇವಿ ದೇವಸ್ಥಾನವನ್ನು ಇನ್ನೂ ಅಭಿವೃದ್ಧಿ ಪಡಿಸಬೇಕಿದೆ ಎಂದು ತಿಳಿಸಿದರು.

         ಇದೇ ಸಂದರ್ಭದಲ್ಲಿ ಜನಾಂಗದ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಕೆ. ಎಂ. ರಂಗಧಾಮೇಗೌಡರು ಕಾರ್ಯಕ್ರಮ ನೆರವೇರಿಸಿ ಕೊಟ್ಟರು.

         ಸಮಾರಂಭದಲ್ಲಿ ಕೆ.ರಂಗ, ಹನುಮಂತರಾಯಪ್ಪ, ನಾರಾಯಣಪ್ಪ, ಡಾ. ನಂದೀಶ್, ಕೆ ಜಿ ಸಿದ್ದಪ್ಪ, ಬಸವರಾಜು, ಮಲ್ಲೇಶಯ್ಯ ಎಂ ಇದ್ದರು. ಎಲ್. ನಾಗರಾಜಯ್ಯ ನಿರೂಪಿಸಿ, ನಾರಾಯಣಪ್ಪ ಸ್ವಾಗತಿಸಿದರು. ಕೆ.ಜಿ. ನಾಗರಾಜು ವಂದಿಸಿದರು. ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳ ವ್ಯವಸ್ಥೆಯ ಖರ್ಚನ್ನು ಸಂಬಂಧಿಸಿದ ಗೋತ್ರದ ಸಹೋದರರು ನೀಡಿದ ಕಾಣಿಕೆಯಿಂದ ನೆರವೇರಿಸುತ್ತಿರುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link