ಲಕ್ಕಿಡಿಪ್‍ನಲ್ಲಿ ಕರಗಿದ ಪೋಷಕರ ಸರ್ಕಾರಿ ಎಲ್‍ಕೆಜಿ ಕನಸು

ಹುಳಿಯಾರು:

   ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಎಲ್‍ಕೆಜಿಗೆ ತಮ್ಮ ಮಗುವನ್ನು ಸೇರಿಸಬೇಕೆನ್ನುವ ನೂರಾರು ಪೋಷಕರ ಕನಸು ಗುರುವಾರ ಲಕ್ಕಿ ಡಿಪ್‍ನಲ್ಲಿ ಕರಗಿ ಹೋಯಿತು.

    ಹುಳಿಯಾರಿನಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ಸರ್ಕಾರಿ ಎಲ್‍ಕೆಜಿ ಆರಂಭಿಸುವುದಾಗಿ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ಇದರಿಂದ ಪ್ರೇರಿತಗೊಂಡ ಪೋಷಕ ಸಮುದಾಯ ಶಾಲೆಗೆ ಸೇರಿಸಲು ನಾ ಮುಮದು, ತಾಮುಂದು ಎಂದು ನೂಕು ನುಗ್ಗಲಿನಲ್ಲಿ ಅರ್ಜಿ ಸಲ್ಲಿಸಿದ್ದರು. 30 ಸೇಟಿಗೆ ಬರೋಬ್ಬರಿ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು.

   ನಿರೀಕ್ಷೆಗಿಂತ ಹೆಚ್ಚು ಅರ್ಜಿಗಳು ಬಂದಿದ್ದರಿಂದ ಸಕಾರದ ನಿಯಮದಂತೆ ಲಾಟರಿ ಮೂಲಕ ಮಕ್ಕಳನ್ನು ಆಯ್ಕೆ ಮಾಡಲಾಯಿತು. ಪೋಷಕರ ಸಮ್ಮುಖದಲ್ಲಿ, ಪೋಷಕರಿಂದಲೇ ಲಕ್ಕಿ ಡಿಪ್ ಎತ್ತುವ ಮೂಲಕ ಪಾರದರ್ಶಕ ವ್ಯವಸ್ಥೆಯಡಿ ಆಯ್ಕೆ ಮಾಡಲಾಯಿತು. ಈ ವಿಧಾನದಲ್ಲಿ ಆಯ್ಕೆಯಾದವರು ಖುಷಿ ಪಟ್ಟರೆ ಆಯ್ಕೆಯಾಗದವರು ನಿರಾಸೆಯಿಂದ ಹಿಂದಿರುಗುವಂತ್ತಾಯಿತು.

    ಲಾಟರಿ ಮೂಲಕ ಆಯ್ಕೆ ಮುಗಿದ ನಂತರ ಅನೇಕ ಪೋಷಕರು ಮತ್ತೊಂದು ವಿಭಾಗ ತೆರೆದು ನಮ್ಮ ಮಕ್ಕಳಿಗೂ ಪ್ರವೇಶ ಕೊಡಿ ಎಂದು ಪ್ರಾಚಾರ್ಯ ಪ್ರಸನ್ನಕುಂಆರ್ ಅವರನ್ನು ಒತ್ತಾಯಿಸಿದರು. ಸರ್ಕಾರಿ ಆದೇಶದಂತೆ 30 ಮಂದಿಗೆ ಮಾತ್ರ ದಾಖಲಾತಿಗೆ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಅಭಿಪ್ರಾಯದಂತೆ ಎಲ್ಲ ಮಕ್ಕಳ ದಾಖಲಾತಿಗೆ ಅವಕಾಶ ಮಾಡಿಕೊಡುವಂತೆ ಇಲಾಖೆಗೆ ಪತ್ರ ಬರೆಯುತ್ತೇನೆ ಅವರು ಒಪ್ಪಿದರೆ ಖಂಡಿತಾ ದಾಖಲಾತಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಪೋಷಕರನ್ನು ಸಮಾಧಾನಪಡಿಸಿದರು.

     ಈ ಸಂದರ್ಭದಲ್ಲಿ 1 ನೇ ತರಗತಿಗೂ ಸಹ ಲಾಟರಿ ಮೂಲಕ ಆಯ್ಕೆ ಮಾಡುವಂತೆ ಪೋಷಕರು ಒತ್ತಾಯಿಸಿದರು. ಇಲಾಖೆ ಮೌಖಿಕ ಆದೇಶದಂತೆ 60 ಮಂದಿ ದಾಖಲಾತಿ ನಂತರ ಸ್ಥಗಿತಗೊಳಿಸಲಾಗಿದೆ. ಈಗ 30 ಮಂದಿಗೆ ಮಾತ್ರ ಪುಸ್ತಕ, ಬಟ್ಟೆ, ಊಟ ಮತ್ತಿತರ ಇಲಾಖೆ ಸೌಲಭ್ಯ ಸಿಗಲಿದ್ದು ಉಳಿದವರಿಗೆ ಪೋಚಕರೇ ವೆಚ್ಚ ಭರಿಸಬೇಕೆನ್ನುತ್ತಿದ್ದಾರೆ. ಹಾಗಾಗಿ 1 ನೇ ತರಗತಿಯ ಬಗ್ಗೆ ಇನ್ನೂ ಸ್ಪಷ್ಠವಾದ ಆದೇಶ ಬಂದಿಲ್ಲ. ಬಂದ ನಂತರ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

    ಒಟ್ಟಾರೆ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ದಂಡು ಶಾಲೆಯ ಮುಂದೆ ಜಮಾಯಿಸಿದುದ್ದು ಅಚ್ಚರಿ ಮೂಡಿಸುವಂತಿತ್ತು. ಆದರೆ ಸರ್ಕಾರದ 30 ಮಂದಿಗೆ ಮಾತ್ರ ಅವಕಾಶ ಎನ್ನುವುದು ಬೇಸರದ ಸಂಗತಿಯಾಗಿತ್ತು. ಸರ್ಕಾರಿ ಎಲ್‍ಕೆಜಿಗೆ ತಮ್ಮ ಮಕ್ಕಳನ್ನು ಸೇರಿಸುವ ಪೋಷಕರ ಆಸೆಗೆ ತಣ್ಣಿರೆರಚಿದಂತ್ತಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap