ಕೇರಳ:
ಶ್ರೀಲಂಕಾದಲ್ಲಿ ವಿಧ್ವಂಸ ಸೃಷ್ಠಿಸಿದ ಬಳಿಕ ಐಸ್ಸಿಸ್ ಉಗ್ರರು ಈಗ ಭಾರತದ ಮೇಲೆ ಕಣ್ಣಿಟ್ಟಿದ್ದಾರೆ ಇದಕ್ಕಾಗಿ 15 ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಲಕ್ಷದ್ವೀಪದ ದ್ವೀಪ ಸಮೂಹದ ಮುಖೇನ ಭಾರತ ಪ್ರವೇಶ ಮಾಡಲು ಮುಂದಾಗಿರುವ ವರದಿಗಳು ಬಂದ ಹಿನ್ನಲೆಯಲ್ಲಿ ಕೇರಳದ ಕರಾವಳಿಯಲ್ಲಿ ರಕ್ಷಣಾ ಪಡೆ, ಕರಾವಳಿ ಠಾಣೆಗಳ ಪೊಲೀಸ್ ಅಧಿಕಾರಿಗಳು ಜಾಗೃತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ರೀತಿಯಲ್ಲಿ ಎಚ್ಚರಿಕೆಗಳು ಸಾಮಾನ್ಯವಾಗಿ ಬರುತ್ತವೆ ಆದರೆ ಈ ಬಾರಿ ನಾವು ಹೆಚ್ಚು ಜಾಗೃತರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಏನಾದರೂ ಸಂಶಯಾಸ್ಪದವಾಗಿ ಕಂಡು ಬಂದಲ್ಲಿ ತಪಾಸಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮೇ 23 ರಂದು ಶ್ರೀಲಂಕಾದ ಅಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.