ತಿಪಟೂರು :
ನಗರಸಭೆಯಿಂದ 2018-19ನೇ ಸಾಲಿನ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಶೇಕಡ 28, ಹಿಂದುಳಿದ ವರ್ಗದ 7.25% ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಲಾಯಿತು.
ಶಾಸಕ ನಾಗೇಶ್ ಮಾತನಾಡಿ ತಂತ್ರಜ್ಞಾನವೆಂಬುದು ಇತ್ತೀಚಿನ ಕಾಲಮಾನದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದ್ದು ಯಾವುದೇ ವಿಷಯವನ್ನು ಕಂಡುಕೊಳ್ಳಲು ಅಂತರ್ಜಾಲದ ಮೊರೆಹೋಗುವುದು ಸರ್ವೇಸಾಮಾನ್ಯವಾಗಿದ್ದು ಅದಕ್ಕೆ ಪೂರಕವೆಂಬಂತೆ ಇಂದು ಕಂಪ್ಯೂಟರ್ ಮತ್ತು ಮೊಬೈಲ್‍ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದ್ದು ಅದರಂತೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಲ್ಯಾಪ್‍ಟಾಪ್‍ಗಳನ್ನು ಕೊಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದರು.
ಕಾರ್ಯಕ್ರದಲ್ಲಿ ನಗರಸಭಾಧ್ಯಕ್ಷ ಟಿ.ಎನ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ್, ಪೌರಾಆಯುಕ್ತೆ ಡಾ. ಮಧು ಪಾಟೀಲ್, ನಗರಸಭಾ ಸದ್ಯರುಗಳು, ವಿದ್ಯಾರ್ಥಿಗಳು ಪೋಷಕರು ಹಾಗೂ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








