ಪುರಸಭೆ ಆಡಳಿತ ಪಕ್ಷದಿಂದ ಕೊನೆಯ ಉಳಿತಾಯ ಬಜೆಟ್ ಮಂಡನೆ…!!

ಹರಪನಹಳ್ಳಿ:

        ಪುರಸಭೆ ಆಡಳಿತಾವಧಿಯ ಕೊನೆಯ ಬಜೆಟ್ ಸೋಮವಾರ ಮಂಡನೆ ಆಗಿದ್ದು, 2019-20ನೇ ಸಾಲಿಗೆ 57.51 ಲಕ್ಷಗಳ ಉಳಿತಾಯ ಬಜೆಟ್‍ಗೆ ಸಭೆ ಒಪ್ಪಿಗೆ ಸೂಚಿಸಿದೆ.

     ಪುರಸಭಾ ಅಧ್ಯಕ್ಷ ಎಚ್.ಕೆ. ಹಾಲೇಶ್ ಅವರು ಮಂಡಿಸಿದ ಬಜೆಟ್ ನಲ್ಲಿ ಆರಂಭಿಕ ನಗದು ಮತ್ತು ಬ್ಯಾಂಕ್ ಶುಲ್ಕ 60.68 ಲಕ್ಷ, ನಿರೀಕ್ಷಿತ ಆದಾಯ – 55.18 ಕೋಟಿ ಎರಡು ಸೇರಿ ಒಟ್ಟು ನಿರೀಕ್ಷಿತ ಆದಾಯ- 55.79 ಕೋಟಿ ಇದ್ದು, ನಿರೀಕ್ಷಿತ ಖರ್ಚು – 55.21 ಕೋಟಿ ಆಗಿದ್ದು, 57.51 ಲಕ್ಷ ಗಳ ಉಳಿತಾಯ ಬಜೆಟ್ ಮಂಡನೆಯಾಗಿ ಅನುಮೋದನೆಗೊಂಡಿತು.

ನಿರೀಕ್ಷಿತ ಆದಾಯ:

       ವೇತನ ಅನುದಾನ (ಎಸ್.ಎಫ್.ಸಿ)- 3.50 ಕೋಟಿ, ಎಸ್ ಎಪ್ ಸಿ ಮುಕ್ತ ನಿಧಿ ಅನುದಾನ 4 ಕೋಟಿ, ಎಸ್.ಎಫ್.ಸಿ ವಿಶೇಷ ಅನುದಾನ 3 ಕೋಟಿ, ನಗರೋತ್ಥಾನ ಅನುದಾನ 5 ಕೋಟಿ, ಕೇಂದ್ರ ಸರ್ಕಾರದ 14ನೇ ಹಣಕಾಸು ಯೋಜನೆ ಅನುದಾನ 5.28 ಕೋಟಿ, ಕೇಂದ್ರ ಸರ್ಕಾರದ ಸಲ್ಮಾ ಯೋಜನೆ ಅನುದಾನ 10 ಲಕ್ಷ, ರಾಜ್ಯ ಸರ್ಕಾರದ ಹೈದರಾಬಾದ್ ಕರ್ನಾಟಕದ ವಿಶೇಷ ಅನುದಾನ 1 ಕೋಟಿ, ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕಾಗಿ ನಿರೀಕ್ಷಿಸಬಹುದಾದ ಅನುದಾನ 1 ಕೋಟಿ ಹೀಗೆ ಒಟ್ಟು ಆದಾಯ ನಿರೀಕ್ಷೆ 55,18,36,639 ಇದೆ.

ನಿರೀಕ್ಷಿತ ಖರ್ಚು:

      ಅತಿವೃಷ್ಟಿ ಹಾನಿಗೊಳಗಾದವರಿಗೆ ಸಹಾಯ ಧನ 2.50 ಲಕ್ಷ, ಸಿಬ್ಬಂದಿ ವೇತನ 3.50 ಕೋಟಿ, ರಸ್ತೆ ಬದಿ ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆ 5 ಲಕ್ಷ, ಬೀದಿ ದೀಪ ಖರೀದಿಗಾಗಿ 98 ಲಕ್ಷ, ಅನಾಥ ಶವ ಸಂಸ್ಕಾರಕ್ಕಾಗಿ 25 ಸಾವಿರ, ಪೌರಕಾರ್ಮಿಕರಿಗೆ ವಿಶೇಷ ಭತ್ಯೆ ಪಾವತಿಗೆ 5.50 ಲಕ್ಷ, ವಿಕಲಚೇತನನರ ಅಭಿವೃದ್ಧಿ ನಿಧಿ 17.50 ಲಕ್ಷ, ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕಾಗಿ 25ಲಕ್ಷ, ಸ್ವಚ್ಛ ಭಾರತ ಅಭಿಯಾನಕ್ಕೆ 60 ಲಕ್ಷ, ಡಿವೈಡರ್ ನಿರ್ಮಾಣ ಮತ್ತು ಗ್ರಿಲ್ ಅಳವಡಿಕೆ 25 ಲಕ್ಷ, ಈಜುಕೊಳ ನಿರ್ಮಾಣ ಉದ್ಯಾನವನಕ್ಕೆ 50 ಲಕ್ಷ, ರಸ್ತೆ ಚರಂಡಿ ಸೇತುವೆ ಕಾಮಗಾರಿ 5 ಕೋಟಿ, ಘನತ್ಯಾಜ್ಯ ವಿಲೇವಾರಿ ಹಾಗೂ ಮುಕ್ತಿ ವಾಹನ ಖರೀದಿಗಾಗಿ 35 ಲಕ್ಷ, ಕೊಳಚೆ ಪ್ರದೇಶ ಅಭಿವೃದ್ಧಿಗೆ 12 ಲಕ್ಷ, ಹೀಗೆ 55.21 ಕೋಟಿಗಳ ಆದಾಯ ನಿರೀಕ್ಷಿಸಲಾಗಿದೆ.

        ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಅಧ್ಯಕ್ಷ ಎಚ್.ಕೆ.ಹಾಲೇಶ್, ‘ಸುಮಾರು 2.70 ಕೋಟಿ ವೆಚ್ಚದಲ್ಲಿ ನಾಗರಿಕರಿಗಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಪುರಸಭೆ ಮುಂದಾಗಿದೆ. ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗಿದೆ. ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ಪುರಸಭೆ ಶ್ರಮಿಸಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಪಾರ್ಕ್, ಈಜುಕೊಳ, ಚರಂಡಿ ವ್ಯವಸ್ಥೆ, ರಸ್ತೆ, ಬೀದಿದೀಪ, ಕ್ರೀಡಾಂಗಣ ಅಭಿವೃದ್ಧಿಗೆ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

       ‘ಕೇಂದ್ರ ಸರ್ಕಾರದ ಮಹತ್ತರ್ ಯೋಜನೆಯಾದ ಗುಡಿಸಲು ಮುಕ್ತ ನಗರಕ್ಕೆ ಮುಂದಾಗಿದ್ದು, ಸುಮಾರು ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲು ಶಾಸಕರು ಶೀಘ್ರವೇ ಚಾಲನೆ ನೀಡಲಿದ್ದಾರೆ. ಒಟ್ಟಾರೆ ಪಟ್ಟಣದ ಸರ್ವಾಗೀಣ ಅಭಿವೃದ್ಧಿಗೆ ಎಲ್ಲ ಸದಸ್ಯರು ಸಹಾಕರ ನೀಡಿದ್ದಾರೆ. ನನ್ನ ಆಡಳಿತಾವಧಿಯಲ್ಲಿ ಸರ್ವಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ತೃಪ್ತಿಯಿದೆ. ಮುಂಬರುವ ಪುರಸಭೆ ಅಧ್ಯಕ್ಷರು ಹರಪನಹಳ್ಳಿಯನ್ನು ನಗರಸಭೆಗೆ ಮೇಲ್ದರ್ಜೆಗೆ ಏರಿಸಲು ಮುಂದಾಗಬೇಕು’ ಎಂದರು.ಉಪಾಧ್ಯಕ್ಷ ಸತ್ಯನಾರಾಯಣ, ಮುಖ್ಯಾಧಿಕಾರಿ ನಾಗರಾಜನಾಯ್ಕ ಪುರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap