ಅರಿಷಡ್ವರ್ಗ ತ್ಯಜಿಸಿ ದೇವಿಗೆ ಹತ್ತಿರವಾಗಿ..!

ತಿಪಟೂರು

    ಅರಿಷಡ್ವರ್ಗಗಳನ್ನು ತ್ಯಜಿಸಿ, ನಾನು ನನ್ನದು ಎನ್ನದೆ ಎಲ್ಲರನ್ನು ಪ್ರೀತಿಸಿ. ಯಾರನ್ನೂ ದ್ವೇಷಿದವರೆಂದರೆ ದೇವಿಗೆ ಅತ್ಯಂತ ಪ್ರಿಯರಾದವರು ಎಂದು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದ ಶ್ರೀಗಳು ತಿಳಿಸಿದರು.

    ತಾಲ್ಲೂಕಿನ ಶಕ್ತಿದೇವತೆಗಳಲ್ಲಿ ಒಂದಾದ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಸಂಸಾರವೆಂಬುದು ಒಂದು ನೌಕೆಯಿದ್ದಂತೆ. ಒಂದು ಬಾರಿ ನೌಕೆ ಸಮುದ್ರಕ್ಕೆ ಇಳಿದರೆ ಎಲ್ಲಾ ಅಡಚಣೆಗಳನ್ನು ಎದುರಿಸಿ ದಡ ಸೇರಿದಾಗಲೇ ನೆಮ್ಮದಿ. ನಮ್ಮ ಜೀವನವು ಹಾಗೆಯೆ. ಇಲ್ಲಿ ಬಂದಿರುವ ಭಕ್ತರೆಲ್ಲರೂ ಸಹ ಮುಳ್ಳನ್ನು ತುಳಿಯುತ್ತಿದ್ದಾರೆ.

    ಅವರಿಗೆ ಮುಳ್ಳು ಚುಚ್ಚುವುದಿಲ್ಲವೆಂದೇನಲ್ಲ. ಅವರು ಭಕ್ತಿಯಿಂದ ಹರಕೆ ತೀರಿಸುವಾಗ ಯಾವುದೆ ನೋವು ಕಾಣುವುದಿಲ್ಲ. ನಿಜವಾದ ಭಕ್ತಿಯಿಂದ ನಾವು ಎಲ್ಲಿದ್ದರೂ ಸಹ ದೇವಿಯನ್ನು ಬೇಡಿಕೊಂಡರೆ, ನಮ್ಮ ಸಕಲ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ. ಇದೇ ಎಲ್ಲ ಧರ್ಮದ ಸಾರವಾಗಿದೆ ಎಂದು ತಿಳಿಸಿದ ಅವರು, ಜೀಸಸ್ ಸಹ ಇದನ್ನೇ ಹೇಳಿದ್ದು.

     ತನನ್ನು ಹೊಡೆದು ಶೀಲುಬೆಗೇರಿಸುತ್ತಿರುವುದನ್ನು ಕಂಡು ದೇವರೆ ಇವರಿಗೆ ಏನು ತಿಳಿದಿಲ್ಲ. ಇವರನ್ನೆಲ್ಲಾ ಕ್ಷಮಿಸಿಬಿಡು ಎಂದು ದೇವರಲ್ಲಿ ಕೋರಿಕೊಂಡಿದ್ದರು. ನೀವು ಸಹ ಯಾರನ್ನು ದ್ವೇಷಿಸಬೇಡಿ. ನಾವು ಯಾರನ್ನಾದರು ದ್ವೇಷಿಸಲು ಪ್ರಾರಂಭಿಸಿದರೆ ಆ ದ್ವೇಷ ಮೊದಲು ನಮ್ಮನ್ನು ಸುಡುತ್ತದೆ ಎಂದು ತಿಳಿಸಿದರು.

    ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ನಾಡಿನಲ್ಲಿ ದೇವಿಯ ಕೃಪೆಯಿಂದ ಉತ್ತಮ ಮಳೆಯಾಗುತ್ತಿದ್ದು, ಕೆಲವು ಕಡೆ ಅತಿವೃಷ್ಟಿಯಿಂದ ಹಲವಾರು ಹಾನಿಯಾಗಿದೆ. ನಮ್ಮ ಕಡೆ ಪರವಾಗಿಲ್ಲ. ಈ ಬಾರಿ ಬೆಳೆÀಯು ರೈನಿಗೆ ಸಿಗುವಂತೆ ಮಾಡಲು ದೇವಿ ಕೃಪೆ ಅಗತ್ಯ. ಆಧುನಿಕತೆ ಎಷ್ಟೆ ಮುಂದುವರೆದಿದ್ರೂ ಸಹ ಸ್ವಲ್ಪ ಸಮಯ ದೇವರ ಪ್ರಾರ್ಥನೆಯಿಂದ ನೆಮ್ಮದಿ ಪಡೆಯಬಹುದು. ಗುರುಗಳ ಆಶೀರ್ವಾದ ನಮಗೆಲ್ಲಾ ಮುಖ್ಯ. ಆದಿಚುಂಚನಗಿರಿಮಠ ಸಾವಿರಾರು ಮಕ್ಕಳಿಗೆ ಅನ್ನ-ವಿದ್ಯೆ ನೀಡುತ್ತಿದೆ. ಈ ಬಾರಿ ಚೌಡೇಶ್ವರಿದೇವಿ ಕೃಪೆಯಿಂದ ನಾಡಿಗೆ ಉತ್ತಮ ಮಳೆಯಾಗಿ ರೈತನ ಬಾಳು ಬಂಗಾರವಾಗಲಿ ಎಂದರು.

    ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ನವರಾತ್ರಿಯ ಸಂದರ್ಭದಲ್ಲಿ ಮನುಷ್ಯನಲ್ಲಿರುವ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಉತ್ತಮ ಜೀವನವನ್ನು ನಡೆಸಲು ದೇವಿಯ ಆಶೀರ್ವಾದ ಅತ್ಯವಶ್ಯವಾಗಿದೆ. ಮುಂದಿನ ದಿನಗಳಲ್ಲಿ ಶ್ರೀಗಳ, ದೇವಿಯ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಮಳೆ-ಬೆಳೆ ಆಗಲಿ ಎಂದು ಕೋರಿಕೊಂಡರು.

     ಸಮಾರಂಭದಲ್ಲಿ ದಸರೀಘಟ್ಟ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಕುಂಬಳಗೋಡಿನ ಶ್ರೀಪ್ರಕಾಶನಾಥಸ್ವಾಮೀಜಿ, ನಾರಾಯಣನಾಥ ಸ್ವಾಮೀಜಿ, ವಿದ್ಯಾಧರನಾಥ ಸ್ವಾಮೀಜಿ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್, ಯುವ ಕಾಂಗ್ರೆಸ್ ಘಟಕದ ತಾಲ್ಲೂಕು ಅಧ್ಯಕ್ಷ ಕಲ್ಲೇಗೌಡನಪಾಳ್ಯದ ಶರತ್, ಸಮಾಜ ಸೇವಕ ಶಾಂತ್‍ಕುಮಾರ್, ಮಠದ ಟ್ರಸ್ಟಿಗಳಾದ ರಾಮಕೃಷ್ಣಪ್ಪ, ಡಾ. ಜಿತೇಂದ್ರ, ಬಾಲಕೃಷ್ಣ, ಲಕ್ಕಣ್ಣ, ಸಿದ್ದಪ್ಪ, ದೇವೇಗೌಡ ಸೇರಿದಂತೆ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link