ತಿಪಟೂರು :
ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಪ್ರಕೃತಿಯ ಒಂದು ಕೌತುಕ ಇದನ್ನು ಸುರಕ್ಷಿತವಾಗಿ ನೋಡಿ ಅನುಭವಿಸಬೇಕೆ ವಿನಹ ಇಲ್ಲದ ಮೌಡ್ಯತೆಗೆ ಒಳಗಾಗಬಾರದೆಂದು ಪರಿಸರ ಪ್ರೇಮಿ ಗುಂಗರಮಳೆ ಮುರಳೀಧರ್ ತಿಳಿಸಿದರು.
ಇಂದು ಸೂರ್ಯ ಗ್ರಹಣದ ನಿಮಿತ್ತ ಪರಿಸರ ಪ್ರೇಮಿ ಹಾಗೂ ನೊಣವಿನಕೆರೆ ಲಯನ್‍ಕ್ಲಬ್‍ನ ಅಧ್ಯಕ್ಷ ಮುರುಳೀಧರ್ ಸಾರಥ್ಯಾದಲ್ಲಿ ಗ್ರಹಣ ವೀಕ್ಷಣೆ ಮತ್ತು ಟ್ರಕ್ಕಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಲಯನ್ಸ್ ಬಂಧುಗಳು ಜೊತೆಗೂಡಿ ಬೆಳಗ್ಗೆ 10.30ಕ್ಕೆ ಮಲ್ಲಾಘಟ್ಟ ಗಂಗಾಧರೇಶ್ವರ ದೇವಸ್ಥಾನದ ಬಳಿಯ ಬೆಟ್ಟವನ್ನು ಏರಿಗ್ರಹಣದ ಸಂದರ್ಭದಲ್ಲಿ ಮಕ್ಕಳೊಂದಿಗೆ ಗ್ರಹಣವನ್ನು ವೀಕ್ಷಿಸುತ್ತಾ ಆಹಾರವನ್ನು ಸೇವಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೂರ್ಯ ಮತ್ತು ಚಂದ್ರ ಗ್ರಹಣಗಳು ಪ್ರಕೃತಿಯ ಕೌತವಾಗಿದೆಯೇ ಹೊರತು ಬೇರೇನು ಅಲ್ಲ ಇಂತಹ ವಿದ್ಯಮಾನಗಳನ್ನು ನಾನು ಇದ್ದಾಗ ನೋಡಿ ಖುಷಿಪಡಬೇಕು ಅದನ್ನು ಬಿಟ್ಟು ಮೌಡ್ಯಕ್ಕೆ ಒಳಗಾಗಿ ಮನೆಯೊಳಗೆ ಕೂರಬಾರದು ಇದನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಸೂಕ್ತವಾದ ಕನ್ನಡಕಗಳೊಂದಿಗೆ ಗ್ರಹಣವನ್ನು ವೀಕ್ಷಣೆ ಮಾಡಿದೆವು ಎಂದು ತಿಳಿಸಿದರು.ಜೊತೆಯಲ್ಲಿ ನೊಣವಿನಕೆರೆ ಲಯನ್ಸ್ ಕ್ಲಬ್ ಸದಸ್ಯರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
