ಕಾನೂನು ಅರಿವು ಕಾರ್ಯಕ್ರಮ

ಚಿತ್ರದುರ್ಗ

         ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದಲ್ಲಿ ಕಾಯ್ದೆಯಡಿ ದೂರನ್ನು ಸಲ್ಲಿಸುವುದರ ಮೂಲಕ ನ್ಯಾಯವನ್ನು ಪಡೆಯಬಹುದಾಗಿದೆ ಎಂದು ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ತಿಳಿಸಿದರು.

         ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಘವೇಂದ್ರ ನರ್ಸಿಂಗ್ ಕಾಲೇಜ್, ಚಿತ್ರದುರ್ಗ, ಭಾರತೀಯ ಮಾನವಹಕ್ಕುಗಳ ಸಮಿತಿ, (ನವದೆಹಲಿ), ಚಿತ್ರದುರ್ಗ ಶಾಖೆ ಇವರ ಸಹಯೋಗದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ರಘುನಂದನ್ ನರ್ಸಿಂಗ್ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನಿಗೆ ಗೌರವ ನೀಡುವುದಾದರೆ ಮೊದಲು ನಾವುಗಳು ಬೇರೆಯವರ ಹಕ್ಕುಗಳನ್ನು ಗೌರವಿಸಬೇಕು. ಯಾರಿಂದಲಾದರೂ ತೊಂದರೆಯಾದರೆ ಪೆಲೀಸ್ ಇದ್ದಾರೆ ದೂರು ನೀಡಿ. ನೀವುಗಳೇ ಕಾನೂನುನನ್ನು ಕೈಗೆ ತೆಗೆದುಕೊಳ್ಳಬಾರದು ಆಗ ನಿಮ್ಮ ರಕ್ಷಣೆಗೆ ಕಾನೂನು ನೆರವಾಗಲಿದ್ದು, ನ್ಯಾಯ ದೊರಕಲಿದೆ ಎಂದು ನ್ಯಾಯಾಧೀಶರು ಕಿವಿ ಮಾತು ಹೇಳಿದರು.

         ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಮಾನವ ಹಕ್ಕುಗಳನ್ನು ಕಾಪಾಡುವಲ್ಲಿ ಅರಿವನ್ನು ಬೆಳೆಸಿಕೊಳ್ಳಬೇಕು ದೇಶದಲ್ಲಿ ಪ್ರತಿ ವರ್ಷ 50 ಲಕ್ಷ ಭ್ರೂಣ ಹತ್ಯೆ ಆಗುತ್ತಿವೆ. ಇದರಿಂದ ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರಲ್ಲಿ ಅರಿವು ಮೂಡಬೇಕಿದೆ. ದೇಶದ 125 ಕೋಟಿ ಜನಸಂಖ್ಯೆಯಲ್ಲಿ 400ಕೋಟಿ ಜನತೆ ಕಡುಬಡವರು ಇದ್ದಾರೆ ಅವರುಗಳಿಗೆ ಆಹಾರ, ನಾಗರೀಕ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಲ್ಲಿ ನಾವುಗಳು ಮುಂದಾಗಬೇಕಿದೆ ಎಂದರು.

         ಮಾನವ ಹಕ್ಕುಗಳು ಬರೀ ಮಾನಸಿಕ ಮತ್ತು ದೈಹಿಕವಾಗಿ ಮಾತ್ರವಲ್ಲದೆ ಬೇರೆ ಕಡೆಯಿಂದಲೂ ತೊಂದರೆಯಾದ್ದಲ್ಲಿ ದೂರು ನೀಡಬಹುದಾಗಿದೆ,. ಪೋಲಿಸರು ಸಹಾ ಏಕಾಏಕಿ ವಿಚಾರಣಾಧೀನ ಖೈದಿಗಳ ಮೇಲೆ ದೌರ್ಜನ್ಯವನ್ನು ನಡೆಸುವಂತಿಲ್ಲ ಅದಕ್ಕೆ ಆದ ನಿಯಮಗಳು ಇದೆ ಅವುಗಳನ್ನು ಪಾಲಿಸಬೇಕು ತದ ನಂತರ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

          ತಲಾಖ್ ಪದ್ದತಿ ಬಗ್ಗೆ ಸರಿಯಾದ ಕ್ರಮವಲ್ಲ ಇದರಿಂದ ಮಹಿಳೆ ಪರಿಸ್ಥಿತಿ ಶೋಚನೀಯವಾಗುತ್ತದೆ ಒಬ್ಬ ಪುರುಷ ಮದುವೆಯಾಗಿ ಮಹಿಳೆಗೆ ಮೂರು ಭಾರಿ ತಲಾಖ್ ಎಂದು ಹೇಳಿದರೆ ಅವರಿಗೆ ವಿಚ್ಚೇದನ ನೀಡಿದಂತೆ ಎನ್ನುತ್ತಾರೆ.ಆದರೆ ವಿಚ್ಚೇದನಕ್ಕೆ ಒಳಗಾದ ಮಹಿಳೆಯ ಪರಿಸ್ಥಿತಿ ಎನಾಗುತ್ತೆ ಎಂಬುದನ್ನು ಯಾರು ತಿಳಿಯಲ್ಲ. ಇದು ಸಹ ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಪಡುತ್ತದೆ ಎಂದು ತಿಳಿಸಿದರು.

          ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ದಿಂಡಾಲ ಕೊಪ್ಪ ಮಾತನಾಡಿ, ಮನುಷ್ಯ ಹುಟ್ಟಿದ ಮೇಲೆ ಸಾಯಲೇ ಬೇಕು. ಈ ನಡುವಿನ ಸಮಯದಲ್ಲಿ ನಾವುಗಳು ನಡೆಸುವ ಜೀವನ ಮಾನವ ಹಕ್ಕುಗಳನ್ನು ಗೌರವದಿಂದ ಕಾಣುತ್ತಾ ನಡೆಯಬೇಕು ಎಂದರು.

         ಯಾರಿಗೆ ಕಾನೂನಿ ಬಗ್ಗೆ ಅರಿವು ಇರಿವುದಿಲ್ಲವೋ ಅವರಲ್ಲೂ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದ ಅವರು ಪ್ರಕರಣಗಳನ್ನು ಬಹು ಬೇಗ ಇತ್ಯರ್ಥ ಪಡಿಸುವ ಹಿನ್ನೆಲೆಯಲ್ಲಿ ಕಾನೂನು ಪ್ರಾಧಿಕಾರವನ್ನು ತೆರೆದಿದ್ದು ಇಲ್ಲಿ ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿ ಜನರಿಗೆ ನ್ಯಾಯಾಲಯದ ಬಗ್ಗೆ ಗೌರವದ ಭಾವನೆ ಮೂಡಿಸಲಾಗುತ್ತಿದೆ.

          ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ನರ್ಸಿಂಗ್ ಕಾಲೇಜಿನ ಕಾರ್ಯದರ್ಶಿ ವಿಷ್ಣು ವಿ. ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಶಿವುಯಾದವ್, ಚಿತ್ರದುರ್ಗ ಜಿಲ್ಲಾ ಭಾರತೀಯ ಮಾನವ ಹಕ್ಕುಗಳ ಸಮಿತಿಅಧ್ಯಕ್ಷ ಎನ್.ವಿ.ವೆಂಕಟೇಶಮೂರ್ತಿ, ಕಾರ್ಯದರ್ಶಿ ರವೀಶ್ವರ ಎಸ್.ಇ, ಹೆಚ್.ವಿ. ಪ್ಯಾರಾ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ವಜಾದುಲ್ಲಾ, ಭಾಗವಹಿಸಿದ್ದರು.ಭಾರತೀಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಬಿ.ಗುರಪ್ಪ ಮಾನವ ಹಕ್ಕುಗಳ ಬಗ್ಗೆ ಮತ್ತು ಪ್ಯಾನಲ್ ವಕೀಲರಾದ ಹೆಚ್.ಎಸ್.ಮಹೇಶ್ವರಪ್ಪ ಇವರಿಂದ ಮೂಲ ಕಾನೂನುಗಳ ವಿಷಯದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link