ನಾಡ ಹಬ್ಬ ದಸರಾವನ್ನು ಎಲ್ಲರೂ ಸೇರಿ ವೈಭವದಿಂದ ಆಚರಿಸೊಣ : ಜಿ. ಪರಮೇಶ್ವರ್

ಬೆಂಗಳೂರು

        ನಾಡ ಹಬ್ಬ ದಸರಾವನ್ನು ಎಲ್ಲರೂ ಸೇರಿ ವೈಭವದಿಂದ ಆಚರಿಸುವುದಾಗಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

        ಮೈಸೂರಿನಲ್ಲಿಂದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಆಯೋಜನೆ ಮಾಡಿರುವ ಸಾಂಸ್ಕತಿಕ ಮೆರವಣಿಗೆಗೆ ಅರಮನೆ ಆವರಣದಲ್ಲಿ ಚಾಲನೆ ನೀಡಿದ ಬಳಿಕೆ ಅವರು ಈ ವಿಷಯ ತಿಳಿಸಿದರು.

        ಕಾಂಗ್ರೆಸ್‍ನ ಸಚಿವರು, ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವುದರಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ, ಇದಕ್ಕೆ ಬೇರೆ ಅರ್ಥ ಕಲ್ಪಿಸಬಾರದು, ಸಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

        ಕೋಟೆ ಆಂಜನೆಯಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಸ್ಕತಿಕ ಮೆರವಣೆಗೆಗೆ ಅವರು ಚಾಲನೆ ನೀಡಿದರು.

        ಈ ಸಾಂಸ್ಕತಿಕ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಆನೆ ಅರ್ಜುನ ಅಲ್ಲದೇ ಜಾನಪದ ನ್ಯತ್ಯ ತಂಡಗಳು, ಪೊಲೀಸ್ ಬ್ಯಾಂಡ್, ಅಶ್ವರೋಹಿ ದಳ ಭಾಗಿಯಾಗಲಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link