ಚಳ್ಳಕೆರೆ
ಕಳೆದ 64 ವರ್ಷಗಳಿಂದ ರಾಷ್ಟ್ರದ ಕೋಟಿ, ಕೋಟಿ ಜನರ ಆರ್ಥಿಕ ಮತ್ತು ಜೀವನಕ್ಕೆ ಭದ್ರತೆಯನ್ನು ಒದಗಿಸಿದ ಏಕೈಕ ಸಂಸ್ಥೆ ಎಂದರೆ ಜೀವ ವಿಮಾ ನಿಗಮ. ತನ್ನದೇಯಾದ ಪ್ರಾಮಾಣಿಕತೆ, ದಕ್ಷತೆ ಆಡಳಿತದಿಂದ ಸಾವಿರಾರು ಕೋಟಿ ಹಣವನ್ನು ಉಳಿತಾಯ ಮಾಡಿ ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಇಂತಹ ವಿಶ್ವಮೆಚ್ಚಿದ ಜೀವ ವಿಮಾನಿಗಮ ಸಂಸ್ಥೆಯ ಶೇರುಗಳ್ನನು ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವುದು ನಾಚಿಗೆಗೇಡಿಗ ವಿಚಾರವೆಂದು ಇಲ್ಲಿನ ಶಾಖಾ ಸಿಬ್ಬಂದಿ, ಏಜೆಂಟ್ ಹಾಗೂ ಪಾಲಿಸಿದಾರರು ಕೇಂದ್ರ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಜೀವವಿಮಾ ನಿಗಮದ ನಿರ್ದೇಶನದಂತೆ ಮಂಗಳವಾರ ಕಚೇರಿ ಮುಂದೆ ಒಂದುಗಂಟೆ ಕಾಲ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಯಾವುದೇ ಕಾರಣಕ್ಕೂ ಜೀವ ವಿಮಾ ನಿಗಮದ ಶೇರುಗಳು ಖಾಸಗಿಯವರ ಪಾಲಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜೀವವಿಮಾ ನಿಗಮದ ವ್ಯವಸ್ಥಾಪಕ ಜಿ.ರಮೇಶ್ ಮಾತನಾಡಿ, ರಾಷ್ಟ್ರದಲ್ಲಿ1.20 ಲಕ್ಷ ಸಿಬ್ಬಂದಿ ವರ್ಗ 1.80 ಲಕ್ಷ ಶೇರುದಾರರನ್ನು ಹೊಂದಿರುವ ಈ ಸಂಸ್ಥೆಯ ಶೇರುಗಳು ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಇರಬೇಕು. ಇವು ಸಾರ್ವಜನಿಕರ ಹಣವಾಗಿದ್ದು, ಇದು ಖಾಸಗಿಯವರ ಪಾಲಾಗದೆ ಸಾರ್ವಜನಿಕರಿಗೆ ತಪ್ಪು ಸಂದೇಶ ತಲುಪುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಶೀಲನೆ ನಡೆಸಿ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಬಿ.ತಿಪ್ಪೇಸ್ವಾಮಿ, ಕೃಷ್ಣಾನಾಯ್ಕ, ಸಿ.ಚಿತ್ರಲಿಂಗಪ್ಪ, ಶ್ರೀನಾಥ, ಕುಮಾರ್, ಸುಮಾ ಮುಂತಾದವರು ಭಾಗವಹಿಸಿದ್ದರು.