ದಾವಣಗೆರೆ:
ಪಶ್ವಿಮ ಘಟ್ಟಗಳಲ್ಲಿ ಅನೇಕ ಜೀವ ಸಂಕುಲ ಕಣ್ಮರೆಯಾಗುತ್ತಿದೆ ಎಂದು ಬೆಂಗಳೂರಿನ ರಾಷ್ಟ್ರೀಯ ವಿಜ್ಞಾನ ಸಂಸ್ಧೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ತಿಳಿಸಿದರು.ದಾವಣಗೆರೆ ವಿಶ್ವವಿದ್ಯಾಲಯದ ಸುಕ್ಷ್ಮಾಣು ಜೀವಶಾಸ್ತ್ರ ವಿಭಾಗ ಸೆಂಟ್ರಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸುಸ್ಧಿರ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವುದು ಜೀವ ಸಂಕುಲ ನಾಶಗೊಂಡು ವಿನಾಶ ಹತ್ತಿರವಾಗುತ್ತಿದೆ. ಮನುಷ್ಯನ ದುರಾಸೆಯಿಂದ ಪಶ್ಚಿಮ ಘಟ್ಟಗಳಲ್ಲಿ ಆಪತ್ತು ಎದುರಾಗಿದೆ. ಪರಿಸರ ನಾಶ, ಕಾಳಜಿ ಇಲ್ಲದಿರುವುದೇ ಕಾರಣ ಎಂದರು.1992ರ ಬಳಿಕ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯವಾಗಿದ್ದು, ಇದು ಜೀವ ಸಂಕುಲಕ್ಕೆ ಮಾರಕವಾಗಿದೆ. ಶೇ.30 ಹಸಿರು ವಾತಾವರಣ ಇರುವುದು ಆರೋಗ್ಯಕರ ಮಾನದಂಡವಾಗಿದ್ದು, ಇದು 4 ದಶಕಗಳ ಬಳಿಕ ಶೇ.10ರಷ್ಟು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕುಲಪತಿ ಪ್ರೋ.ಎಸ್.ವಿ.ಹಲಸೆ ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದರೆ ವಿಜ್ಞಾನಿಗಳು, ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು. ಪರಿಸರ ಸಂರಕ್ಷಣೆಗೆ ಹೊಸ ಮಾರ್ಗಸೂಚಿ ರಚಿಸಿ ಜಾರಿಗೆ ತರಲು ಶಿಫಾರಸು ಮಾಡಬೇಕಿದೆ ಎಂದರು.
ಕುಲಸಚಿವ ಪ್ರೋ.ಪಿ.ಕಣ್ಣನ್ ಮಾತನಾಡಿ, ಈ ಪ್ರಪಂಚದಲ್ಲಿ ಮನುಷ್ಯನಂತೆ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಯಾವುದೇ ಜೀವಿ ನಾಶವಾದರೂ ಪರಿಸರ ವ್ಯವಸ್ಥೆಗೆ ಧಕ್ಕೆ ಬಂದು ಮಾನವನ ಅಸ್ತಿತ್ವಕ್ಕೆ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.
ಪ್ರೋ.ಜೆ.ಕೆ.ರಾಜು, ಪ್ರೋ.ಶಿಶುಪಾಲ, ಪ್ರೋ.ರಾಮಲಿಂಗಪ್ಪ, ಡಾ.ಶಿವವೀರ ಕುಮಾರ, ಡಾ.ವಿರೂಪಾಕ್ಷಯ್ಯ ಇದ್ದರು.
ವಿವಿಧೆಡೆಯಿಂದ 250ಕ್ಕೂ ಅಧಿಕ ವಿಜ್ಞಾನಿಗಳು, ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಧ್ಯಾಪಕರು ಉಪನ್ಯಾಸ ಹಾಗೂ ಸಂಶೋಧನಾರ್ಥಿಗಳು ಪ್ರಬಂಧ ಮಂಡಿಸಿದರು. ಅತ್ಯುತ್ತಮ ಪ್ರಬಂಧ ಮಂಡನೆಗೆ ಪ್ರಶಸ್ತಿ ವಿತರಿಸಲಾಯಿತು.