ಸೈನೇಡ್ ಮೋಹನ್ ಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್..!!!

ಮಂಗಳೂರು:
     ಕೆಲ ವರ್ಷಗಳ ಹಿಂದೆ ಸೈನೇಡ್ ಎಂದಾಕ್ಷಣ ನೆನಪಿಗೆ ಬರುತ್ತಿದ್ದುದು ಮೋಹನ ಎಂಬ ನಟೋರಿಯಸ್ ಕ್ರಮಿನಲ್ ಆತನಿಗೆ ನಿನ್ನೆ ನ್ಯಾಯಾಲಯವೂ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ .
              ಈತ ಅವವಿವಾಹಿತ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಅವರ ಬಳಿ ಇರುವ ಆಭರಣ ಮತ್ತು ಇನ್ನಿತರೆ ಅಮೂಲ್ಯ ವಸ್ತುಗಳನ್ನು ದೋಚಿ ಅವರನ್ನು ಲೈಂಗಿಕವಾಗಿ ಹಿಂಸಿಸಿ ನಂತರ ಸೈನೈಡ್ ನೀಡಿ ಅವರನ್ನು ಕೊಲ್ಲುತ್ತಿದ್ದ. ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ಕುಮಾರ್ ಗೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ನಿನ್ನೆ ತೀರ್ಪು ನೀಡಿದೆ. 
      ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. 
       ಈತನ ವಿರುದ್ದ ಸುಮಾರು 20 ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಹಿಂದೆ  ನ್ಯಾಯಾಲಯ 3 ಪ್ರಕರಣಗಳಲ್ಲಿ ಈತನಿಗೆ ಮರಣದಂಡನೆ ಶಿಕ್ಷೆ ಸಹ ವಿಧಿಸಿದೆ. 
ಹಲವು ಹೆಸರುಗಳಿಂದ ಕರೆಲ್ಪಡುತ್ತಿದ್ದ:
      ಮೋಹನ್ ಕುಮಾರ್ ತನ್ನನ್ನು ಸುಂದರ ರೈ, ಆನಂದ, ಸುಧಾಕರ್ ಕುಲಾಲ್, ಸುಧಾಕರ ಆಚಾರ್ಯ, ಶಶಿಧರ ಪೂಜಾರಿ, ಮನೋಹರ.ಜಿ, ಶಶಿಧರ ಭಂಡಾರಿ, ಆನಂದ.ಎಸ್ ಹೀಗೆ ವಿವಿಧ ಹೆಸರುಗಳಿಂದ ಪರಿಚಯಿಸಿಕೊಂಡು ರಾಜ್ಯಾದ್ಯಂತ 20 ಜನ ಅವಿವಾಹಿತ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮಾಡುತ್ತಿದ್ದ. 
      ಅವರಿಗೆ ಮನೆಯಲ್ಲಿರುವ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ತರುವಂತೆ ಹೇಳಿ ಅವರಿಗೆ ಮದುವೆಯಾಗುವ ಆಮಿಷ ಒಡ್ಡಿ, ಬೇರೆಡೆಗೆ ಕರೆದುಕೊಂಡು ಹೋಗಿ ಅವರ ಇಚ್ಚೆಗೆ ವಿರುದ್ದವಾಗಿ ಹಠ ಸಂಭೋಗ ಮಾಡುತ್ತಿದ್ದ. ನಂತರ ಅವರನ್ನು ನಂಬಿಸಿ ವಂಚಿಸಿ, ಗರ್ಭ ನಿರೋಧಕ ಔಷಧಿ ಎಂದು ಸೈನೈಡ್ ವಿಷಯುಕ್ತ ರಾಸಾಯನಿಕ ವಸ್ತು ನೀಡಿ ಹತ್ಯೆ ಮಾಡುತ್ತಿದ್ದ. ಬಳಿಕ ಅವರ ಬೆಲೆಬಾಳುವ ಆಭರಣಗಳನ್ನು ಅಪಹರಿಸುವ ಚಾಳಿ ಮೈಗೂಡಿಸಿಕೊಂಡಿದ್ದ. 
      ಈತ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮಕ್ಕೆ ಸೇರಿದವನು ಎಂದು ತಿಳಿದು ಬಂದಿದೆ, ಪ್ರಸ್ತುತ  ಆರೋಪಿ ಬೆಳಗಾವಿ ಜಿಲ್ಲೆ, ಹಿಂಡಲಗಾ ಕಾರಾಗೃಹದಲ್ಲಿದ್ದಾನೆ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link