ಬೆಂಗಳೂರು:
ನಾಟಕ ಅಕಾಡೆಮಿ ಪ್ರತಿ ವರ್ಷ ನೀಡುವ ಪ್ರಶಸ್ತಿಯಂತೆ ಈ ವರ್ಷವು ಸಹ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು.ಹಿರಿಯ ರಂಗಕರ್ಮಿ ಬಿ.ವಿ.ಕಾರಂತರ ಆತ್ಮೀಯ ಸ್ನೇಹಿತ ಹಾಗು ಸ್ವಯಂ ರಂಗಕರ್ಮಿಯಾದ ಶ್ರೀ ಪಿ.ಗಂಗಾಧರಸ್ವಾಮಿ ಅವರಿಗೆ ಜೀವಮಾನ ಸಾಧನೆ ಗೌರವ ನೀಡಿಇ ಪುರಸ್ಕರಿಸಿದೆ.ಉಡುಪಿಯ ಹಿರಿಯ ರಂಗಸಾಧಕ ಟಿ.ಪ್ರಭಾಕರ್ ಕಲ್ಯಾಣಿ, ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಾಸಿ ರಂಗನಿರ್ದೇಶಕಿ ಮತ್ತು ನಟಿ ಉಷಾ ಭಂಡಾರಿ ಸೇರಿ 24 ಮಂದಿಗೆ ಅಕಾಡಮಿಯ ವಾರ್ಷಿಕ ಪ್ರಶಸ್ತಿ ಲಭಿಸಿದೆ.
ನಿನ್ನೆ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಪ್ರಶಸ್ತಿ ಪುರಸ್ಕೃತರ ಹೆಸರನ್ನ್ಯು ಘೋಷಿಸಿದ್ದಾರೆ.