ತಿಪಟೂರು :
ಜನಸಾಮಾನ್ಯರನ್ನು ಮೇಲೆತ್ತುವ ಕೆಲಸವನ್ನು ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಮಾಡಬೇಕು, ಹುಟ್ಟುಸಾವಿನ ಮದ್ಯೆ ಒಳ್ಳೆಯ ಕೆಲಸಮಾಡುವ ಮೂಲಕ ಸಮಾಜವಾಹಿನಿಯಲ್ಲಿ ಪ್ರತಿಯೊಬ್ಬರು ತೊಡಗಬೇಕು ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹೇಳಿದರು.
ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕರ್ನಾಟಕ ಮಾನಹಕ್ಕುಗಳ ಜನಾಜಾಗೃತಿ ಸಮಿತಿ (ರಿ), ತಾಲ್ಲೂಕು ಘಟಕದ, ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಆಶಿರ್ವಚನ ನೀಡಿದ ಅವರು ಜನಸಾಮಾನ್ಯರನ್ನು ಮೇಲೆತ್ತುವ ಕೆಲಸವನ್ನು ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಮಾಡಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಮೊಬೈಲ್ ಬಳಕೆಯಿಂದ ದೂರವಿಟ್ಟು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಪೋಷಕರು ಮಾಡಬೇಕು. ಕರ್ನಾಟಕ ಮಾನವ ಹಕ್ಕು ಜಾಗೃತಿ ಸಮಿತಿಯು ಯಶಸ್ಸಿನತ್ತ ಹೆಜ್ಜೆಯನ್ನಿಡಲಿ ಎಂದು ಆಶಿಸಿದರು.
ಕರ್ನಾಟಕ ಮಾನವ ಹಕ್ಕು ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಜ್ಞಾನಪ್ರಕಾಶ್ ಮಾತನಾಡಿ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಜನಜಾಗೃತಿ ಸಮಿತಿಯು ರಾಜ್ಯದ 19 ಜಿಲ್ಲೆಗಳಲ್ಲಿ ಕಾರ್ಯರ್ವಹಿಸುತ್ತಿದ್ದು ದೇಶಕ್ಕೆ ಸ್ವಾತಂತ್ರ್ಯಬಂದು 70 ವರ್ಷಕಳೆದರೂ ಪ್ರತಿಯೊಬ್ಬರು ಹಕ್ಕುಗಳಿಂದ ವಂಚಿತರಾಗಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬ್ರಿಟೀಷರಂತೆ ಲೂಟಿಕೋರರಾಗಿದ್ದು ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಬೇಕು. ಮೂಲಭೂತ ಸೌಕರ್ಯಪಡೆಯಲು ಪ್ರತಿಯೊಬ್ಬರು ಬದ್ಧರಾಗಿರಬೇಕೆಂದು ಕೆರೆನೀಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಯೋಗೇಶ್ ಮಾತನಾಡಿ ಕಳೆದ ಒಂದು ವರ್ಷದಿಂದ ಕರ್ನಾಟಕ ಮಾನವ ಹಕ್ಕು ಜಾಗೃತಿ ಸಮಿತಿಯ ತಾಲ್ಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ನಮ್ಮ ಸಮಿತಿಯು ರಾಜಕೀಯ ಹೊರತುಪಡಿಸಿ ಸಂಘಟನೆಯ ಮೂಲಕ ಪ್ರತಿಯೊಬ್ಬರಿಗೂ ವಿಚಾರಗಳನ್ನು ತಿಳಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಇದಕ್ಕೆ ಜನತೆಯ ಬೆಂಬಲ ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕು ಜಾಗೃತಿ ಸಮಿತಿಯ ರಾಜ್ಯ ಉಪಾಧ್ಯಕ್ಷ ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿನೋದ್‍ಕುಮಾರ್, ರಾಜ್ಯ ಮಹಿಳಾ ಅಧ್ಯಕ್ಷೆ ಶಾಂತಾಮೋಹನ್, ಉಪಾಧ್ಯಕ್ಷೆ ಜಯ ಪ್ರಕಾಶ್, ತಿಪಟೂರು ಘಟಕದ ಗೌರವಾಧ್ಯಕ್ಷ ಯೋಗೀಶ್, ಎ.ಎನ್.ಶಾಂತಕುಮಾರ್, ಜಯರಾಂ, ಜಿತೇಂದ್ರ, ರವೀಶ್ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ