ಮರವೇರಿದ ವಿದ್ಯುತ್ ದೀಪ

ಹೊನ್ನವಳ್ಳಿ

     ಸಾರ್ವಜನಿಕರಿಗೆ ಬೆಳಕಾಗಬೇಕಿದ್ದ ಬೀದಿಯ ವಿದ್ಯುತ್ ದೀಪವೊಂದು ಸ್ಥಳೀಯರ ಮನೆಯ ಮುಂದೆ ಬೆಳಕಾಗಲಿ ಎನ್ನುವ ಉದ್ದೇಶದಿಂದ ವಿದ್ಯುತ್ ಕಂಬವನ್ನು ಬಿಟ್ಟು ಮರವೊಂದಕ್ಕೆ ಅಳವಡಿಸಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆರೆಬಂಡಿ ಪಾಳ್ಯದಲ್ಲಿ ಮೂಲೆಮನೆ ಹತ್ತಿರ ಬೀದಿ ದೀಪವನ್ನು ರಾಜಕೀಯದ ಒತ್ತಡಕ್ಕೆ ಮಣಿದ ಅಧಿಕಾರಿ ವರ್ಗದವರು ಬೃಹತ್ ಮರವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ದೀಪವನ್ನು ಹಾಕಿರುತ್ತಾರೆ.

      ಸಾಮಾನ್ಯವಾಗಿ ಕೆ.ಪಿ.ಟಿ.ಸಿ.ಎಲ್‍ನವರು ಇಂತಹ ಕೃತ್ಯಗಳನ್ನು ಮಾಡುವುದು ಕಡಿಮೆ. ಅವರೇನಿದ್ದರು ವಿದ್ಯುತ್ ತಂತಿಗೆ ಅಡ್ಡ ಬರುವ ಮರಗಳ ಕೊಂಬೆಗಳನ್ನು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ಕತ್ತರಿಸುತ್ತಾರೆ. ಆದರೆ ಕೆರೆಬಂಡಿಪಾಳ್ಯದಲ್ಲಿ ಮಾತ್ರ ಇದಕ್ಕೆ ತದ್ವಿರುದ್ದವಾಗಿ ಮರಕ್ಕೆ ವಿದ್ಯುತ್ ದೀಪವನ್ನು ಅಳವಡಿಸಿದ್ದಾರೆ. ಇದಕ್ಕೆ ಸ್ವಲ್ಪ ಹೆಚ್ಚುಕಡಿಮೆಯಾದರು ಜನ ಜಾನುವಾರುಗಳ ಪ್ರಾಣಕ್ಕೆ ಎರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೂ ಅಧಿಕಾರಿಗಳ ಒತ್ತಡಕ್ಕೋ ಇಲ್ಲಾ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದು ಎಷ್ಟು ಸರಿ? ಶೀಘ್ರವೇ ಈ ವಿದ್ಯುತ್ ದೀಪವನ್ನು ಪಕ್ಕದಲ್ಲೇ ಇರುವ ವಿದ್ಯುತ್ ಕಂಬಕ್ಕೆ ಹಾಕಿ, ಅನುಕೂಲ ಮಾಡಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap