ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ-ಬಿ.ಜಿ.ದಿನೇಶ್

ಹೊಸದುರ್ಗ:

         ಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ ಎಂದು ಇಲ್ಲಿನ ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ದಿನೇಶ್ ತಿಳಿಸಿದರು.ಪಟ್ಟಣದ ಆರೋಗ್ಯಾಧಿಕಾರಿಗಳ ನಡೆದ ತಾಲ್ಲೂಕು ಕನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆರೋಗ್ಯಾಧಿಕಾರಿಗಳ ಸಂಘ ಮತ್ತು ಶಿಶು ಅಭಿವೃದ್ದಿ ಯೋಜನೆ ಇವರ ಸಂಯುಕ್ತಶ್ರಾಯದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ತಂತ್ರ ವಿದಾನಗಳ ಲಿಂಗ ಆಯ್ಕೆಯ ನಿಷೇಧ ಕಾರ್ಯಕ್ರಮದಲ್ಲಿ ಮಾತನಾಡಿದರು.

         ದೌರ್ಜನ್ಯ, ಹಿಂಸೆ, ಅತ್ಯಾಚಾರ ಪ್ರಥಮವಾಗಿ ಆಗುತ್ತಿರುವುದು ಮಹಿಳೆಯ ಮೇಲೆ. ಒಂದಲ್ಲ ಒಂದು ರೀತಿ ಹೆಣ್ಣು ಶೋಷಣೆಗೆ ಒಳಾಗಾಗುತ್ತಿದ್ದಾಳೆ. ಸೆಕ್ಸ್ ಎನ್ನುವುದು ಭಾರತದ ಸಂವಿಧಾನಕ್ಕೆ ವಿರುದ್ದವಾಗಿದೆ. 1994 ರಲ್ಲಿ ಬಂದಂತ ಸೆಕ್ಸ್ ಎಂಬ ಖಾಯಿಲೆ ಹೆಣ್ಣಿನ ಮೇಲೆ ಅತಿ ಹೆಚ್ಚಾಗಿ ಪರಿಣಾಮಕಾರಿ ಬೀರುತ್ತಿದೆ. ಅನಾದಿ ಕಾಲದಿಂದಲೂ ಹೆಣ್ಣು ಶೋಷಣೆಗೆ ಒಳಾಗಾಗುತ್ತಿರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ ಎಂದು ಹೇಳಿದರು.

       ಒಂದು ಗಂಡು ಮಗು ಹುಟ್ಟಿದರೆ ಪ್ರೀತಿ ಮಾಡುತ್ತಾ  ಆದರೆ ಒಂದು ಹೆಣ್ಣು ಮಗು ದ್ವೇಶ ಮಾಡುತ್ತಾರೆ. ಸಂಸಾರದಲ್ಲಿ ಹೆಣ್ಣು ಹುಟ್ಟಿದರೆ ಮೊದಲು ಗೌರವಿಸಬೇಕು. ಭೇದ ಭಾವ ತೊರೆದು ಹೆಣ್ಣನ್ನು ಪ್ರೀತಿಸಬೇಕು. ಹೆಣ್ಣನ್ನು ಕೇವಲವಾಗಿ ನೋಡಬಾರದು ಎಂದು ಹೇಳಿದರು.

        ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪುರ ಮಾತನಾಡಿ ಭ್ರೂಣ ಆಯ್ಕೆಯನ್ನು ಸ್ವತಂತ್ರವಗಿ ಯಾರಿಗೂ ಕೊಡುವುದಿಲ್ಲ. ಹೆಣ್ಣು ಭ್ರೂಣ ಪತ್ತೆ ಮಾಡಿಸುತ್ತಾಳೆಂದರೆ ಆಕೆ ಒತ್ತಡದಿಂದ ಇದ್ದಾಳೆ ಎಂದರ್ಥ. ಹಿಂಸೆಯಿಂದ ಹೆಣ್ಣು ಶೋಷಿತಳಾಗುತ್ತಿದ್ದಾಳೆ.
ವರದಕ್ಷಿಣೆ ಕಿರುಕುಳ, ಮಾನಸಿಕ ದೌರ್ಜನ್ಯ, ಅತ್ಯಾಚಾರಕ್ಕೆ ಹೆಣ್ಣು ಬಲಿಯಾಗುತ್ತಿದ್ದಾಳೆ. ಈ ರೀತಿ ಹಿಂಸೆ ಕೊಡುವವರನ್ನು ಕಾನೂನಿನ ಚೌಕಟ್ಟು ಬಿಡುವುದಿಲ್ಲ. ಅಂತವರಿಗೆ ಕಠಿಣ ಶಿಕ್ಷೆ ನೀಡಲು ಕಾನೂನಲ್ಲಿದೆ ಎಂದು ಹೇಳಿದರು.ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ತಾ.ಪಂ. ಮುಖ್ಯ ಕಾರ್ಯ ನಿರ್ವಾಹಕ ಮಹಮದ್ ಮುಬೀನ್, ಆರೋಗ್ಯಾಧಿಕಾರಿ ಕವಿತಾ, ಆಡಳಿತಾಧಿಕಾರಿ ರಾಧ, ಶಿಶು ಅಭಿವೃದ್ದಿ ಸಂರಕ್ಷಾಣಾಧಿಕಾರಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap