ಹುಳಿಯಾರು
ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯ ಗ್ರಾಮದ ಸಮೀಪ ಹುಳಿಯಾರಿನ ತ್ಯಾಜ್ಯ ತಂದು ಹಾಕದಂತೆ ಇಲ್ಲಿನ ನಿವಾಸಿ ನಾಗರಾಜು ಮನವಿ ಮಾಡಿದ್ದಾರೆ.
ಲಿಂಗಪ್ಪನಪಾಳ್ಯದ ಸಮೀಪ ಕೋಳಿ ತ್ಯಾಜ್ಯ, ಹುಳಿಯಾರಿನ ಚರಂಡಿಯ ಕೊಳಚೆ ತ್ಯಾಜ್ಯ ಸುರಿಯುತ್ತಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಬೀತಿ ಎದುರಾಗಿದೆ. ಅಲ್ಲದೆ ತ್ಯಾಜ್ಯ ಸುರಿಯುತ್ತಿರುವ ಪ್ರದೇಶದ ಸಮೀಪದಲ್ಲೇ ಪ್ರೌಢಶಾಲೆ, ಕಾಲೇಜಿದ್ದು ನಿತ್ಯ ಸಾವಿರಾರು ವಿದ್ಯಾರ್ಥಿಗಳು ತ್ಯಾಜ್ಯದ ದುರ್ನಾತ ಸಹಿಸಿಕೊಂಡು ಓಡಾಡುವ ಅನಿವಾರ್ಯತೆ ಸೃಷ್ಠಿಯಾಗಿದೆ.
ಕಾನೂನು ಪ್ರಕಾರ ಜನವಸತಿ ಪ್ರದೇಶದಿಂದ ಇಂತಿಷ್ಟು ದೂರ ತ್ಯಾಜ್ಯ ವಿಲೇವರಿ ಘಟಕ ಸ್ಥಾಪಿಸಬೇಕೆಂನ ನಿಯಮವಿದೆ. ಈ ನಿಯಮ ಉಲ್ಲಂಘಿಸಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಎಲ್ಲೋ ಖಾಲಿ ಬಿದ್ದಿರುವ ಸರ್ಕಾರಿ ಜಾಗಕ್ಕೆ ಸುರಿದು ಕೈ ತೊಳೆದುಕೊಳ್ಳುತ್ತಿದ್ದಾರೆ. ಪಟ್ಟಣ ಪಂಚಾಯ್ತಿಯಾಗಿ 1 ವರ್ಷಗಳೇ ಕಳೆದಿದ್ದರೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳ ಗುರುತಿಸದಿರುವುದು ಇಲ್ಲಿನ ಅಧಿಖಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತೆಗೆ ಹಿಡಿದ ಕನ್ನಡಿಯಾಗಿದೆ.
ಇನ್ನಾದರೂ ಎಚ್ಚೆತ್ತುಕೊಂಡು ಲಿಂಗಪ್ಪನಪಾಳ್ಯದ ಸಮೀಪ ತ್ಯಾಜ್ಯ ಹಾಕುವುದನ್ನು ನಿಲ್ಲಿಸಿ ಬದಲಿ ಸ್ಥಳ ಗುರುತಿಸಿ ಅಲ್ಲಿ ವಿಲೆ ಮಾಡುವ ಮೂಲಕ ಇಲ್ಲಿನ ನಿವಾಸಿಗಳ ನೆಮ್ಮದಿಯಿಂದ ಬಾಳಲು ಹಾಗೂ ಕಾಲೇಜು ವಿದ್ಯಾರ್ಥಿಗಳು ನೆಮ್ಮದಿಯಿಂದ ಸಂಚರಿಸುವಂತೆ ಮಾಡಬೇಕು. ಇಲ್ಲವಾದರೆ ಊರಿನರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿ ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದಯ ಎಚ್ಚರಿಸಿದ್ದಾರೆ.