ಕಾಂಗ್ರೆಸ್ ಬಲ ತಂದ ಲಿಂಗಾಯತ ವಿಷಯ

ಹರಪನಹಳ್ಳಿ:

       ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದರಿಂದಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಿದೆ ಎಂದು ಗದುಗಿನ ಯಡಿಯೂರು-ಡಂಬಳದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

      ತಾಲ್ಲೂಕಿನ ಅರಸಿಕೇರಿ ಗ್ರಾಮದ ಕೋಲಶಾಂತೇಶ್ವರ ಮಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಲ್ಲಿ ಉತ್ತರ ಕರ್ನಾಟದಲ್ಲಿ 6 ಜನ ಇದ್ದ ಕಾಂಗ್ರೆಸ್ ಶಾಸಕರು 2018ರ ಚುನಾವಣೆಯಲ್ಲಿ 10ಕ್ಕೆ ಏರಿಕೆಯಾಗಿದೆ. ಆಡಳಿತ ವಿರೋಧಿ ಅಲೆ ಇದ್ದಾಗಲೂ 40 ಸೀಟುಗಳಿಗೆ ಬರಬೇಕಾಗಿದ್ದ ಕಾಂಗ್ರೆಸ್ ಪಕ್ಷ 80 ಸೀಟು ಪಡೆದು ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿ ಆಡಳಿತ ನಡೆಸಲು ಲಿಂಗಾಯುತ ಧರ್ಮ ವಿಚಾರವೇ ಹೊರತು ಬೇರೆನು ಅಲ್ಲ. ಎಂದು ಅಭಿಪ್ರಾಯ ಪಟ್ಟರು.

       ಸಚಿವ ಡಿ.ಕೆ. ಶಿವಕುಮಾರ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಶಿಪಾರಸ್ಸಿನ ಕುರಿತು ಎರಡು ಬಾರಿ ಕ್ಷಮೆ ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಡಿ.ಕೆ.ಶಿವಕುಮಾರ ಬಗ್ಗೆ ಮಾತನಾಡುವುದಿಲ್ಲ. ಕಾರಣ ಅವರು ಲಿಂಗಾಯಿತರಲ್ಲ. ಅದೇ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಲಿಂಗಾಯತ ಧರ್ಮದ ಹೋರಾಟದಲ್ಲಿ ಬದ್ಧತೆಯಿಂದ ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿದಿಲ್ಲ ಎಂದರು.

      ಗದುಗಿನ ಲಿಂಗೈಕ್ಯ ಸಿದ್ದಲಿಂಗ ಶ್ರೀಗಳ ಹಾಗೂ ಮಾತೇ ಮಹಾದೇವಿ ಅವರುಗಳ ಅಗಲಿಕೆಯಿಂದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಹಿನ್ನಡೆಯಾಗಿಲ್ಲ. ಅವರ ಆದರ್ಶಗಳನ್ನು ಇಟ್ಟುಕೊಂಡು ಹೋರಾಟ ಮುಂದುವರೆದಿದೆ ಎಂದು ನುಡಿದರು.

     ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಕಾವು ಕಡಿಮೆಯಾಗಿಲ್ಲ. ಸಂದರ್ಭ, ಸನ್ನಿವೇಶದ ಮೇಲೆ ಹಾಗನ್ನಿಸಿದೆ, ಗ್ರೌಂಡ್ ವರ್ಕ ನಡೆಯುತ್ತಾ ಇದೆ. ಜನಜಾಗೃತಿ ಆಗುತ್ತಾ ಇದೆ. ಜಾಗತಿಕ ಲಿಂಗಾಯತ ಮಹಾಸಭಾ ಮೂಲಕ ಹೋರಾಟ ನಡೆದಿದೆ. ಜೈನ ಧರ್ಮ ಹಾಗೂ ಸಿಕ್ ಧರ್ಮಗಳು ಸಹ 40-50 ವರ್ಷಗಳ ಹೋರಾಟದ ಫಲವಾಗಿ ಪ್ರತ್ಯೇಕ ಧರ್ಮಗಳಾಗಿವೆ. ಅದೇ ರೀತಿ ನಮ್ಮ ಲಿಂಗಾಯತ ಧರ್ಮ ಸಹ ಪ್ರತ್ಯೇಕ ಧರ್ಮವಾಗುತ್ತದೆ. ಅಲ್ಲಿಯವರೆಗೂ ನಿರಂತರ ಹೋರಾಟ ಇರುತ್ತದೆ ಎಂದು ಅವರು ಹೇಳಿದರು. ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link