ಹೊಸದುರ್ಗ:
ಎಣ್ಣೆ ಇಲ್ದೆ ಕೈ ನಡುಗ್ತಿತ್ತು, ಬಾಡಿ ಶೇಕ್ ಆಗ್ತಿತ್ತು. ರಾತ್ರಿ ನಿದ್ದೆ ಬರ್ತಿರ್ಲಿಲ್ಲ. ಎಣ್ಣೆ ಇಲ್ದೆ ತಿಂಗ್ಲು ಬದುಕಿದ್ದೇ ಪವಾಡ, ದೇವ್ರು ಕಣ್ ಬಿಟ್ಬಿಟ್ಟ ಸರ್ ಎಂದು ಮದ್ಯ ಪ್ರಿಯರು ಹೇಳಿದ ಮಾತಿದು.
ಹೌದು.. ಹೊಸದುರ್ಗದ ಮದ್ಯದ ಅಂಗಡಿಗಳ ಮುಂದೆ ಮದ್ಯ ಪ್ರಿಯರ ಜನಜಂಗುಳಿ ಮತ್ತು ನೂಕು ನುಗ್ಗಲಿನ ಕಸರತ್ತು ನೋಡಲು ಎರಡು ಕಣ್ಣು ಸಾಲದಾಗಿತ್ತು. ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ ಎಂಬ ಸುದ್ದಿ ತಿಳಿದ ತಕ್ಷಣ ಹೊಸದುರ್ಗದಲ್ಲಿ ವೈನ್ ಸ್ಟೋರ್ ಗಳು ಒಂದಕ್ಕಿಂತ ಒಂದು ಭಾನುವಾರವೇ ಮದುವೆಯ ಹೆಣ್ಣಿನಂತೆ ಸಿಂಗಾರಗೊಂಡಿದ್ದವು.
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಹಾಕಿರುವುದರಿಂದ ಬಾರ್ ಮಾಲೀಕರು ವೈನ್ ಶಾಪ್?ಗಳ ಎದರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿದ್ದರು. ಸೋಮವಾರ ಮದ್ಯದಂಗಡಿ ಓಪನ್ ಮಾಡುವ ಮುನ್ನವೇ ಎಣ್ಣೆಪ್ರಿಯರು ಮದ್ಯದಂಗಡಿ ಮುಂದೆ ಸರತಿ ಸಾಲಿನಲ್ಲಿ ಕ್ಯೂ ನಿಂತು ಮದ್ಯ ಖರೀದಿ ಮಾಡಿ ಸವಿದಿದ್ದಾರೆ. ಇದರಿಂದ ಮದ್ಯ ಪ್ರಿಯರಿಗೆ ಐಸ್ ಇಟ್ಟಂತಾಗಿತ್ತು.
ಮಾಸ್ಕ್ ಹಾಕಿದವರಿಗೆ ಮಾತ್ರ ಎಣ್ಣೆ:
ತಾಲ್ಲೂಕಿನ ವೈನ್ ಶಾಪ್ ಗಳ ಎದುರು ಕಟ್ಟಿಗೆ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಲಾಗಿತ್ತು. ಒSIಐ 6 ಮದ್ಯ ದಂಗಡಿಗಳು ತೆರೆದಿದ್ದು, ನೂಕು ನುಗ್ಗಲು, ಗದ್ದಲ, ಗಲಾಟೆ ಮಾಡುತ್ತಲೇ ಸಾಮಾಜಿಕ ಅಂತರ ಮರೆತು ಎಣ್ಣೆ ಖರೀದಿಗೆ ಮುಗಿ ಬಿದ್ದಿದ್ದರು. ಇದನ್ನು ಗಮನಿಸಿದ ಅಬಕಾರಿ ನಿರೀಕ್ಷಕರಾದ ಶ್ರೀಮತಿ ಪ್ರಮೀಳಾ ಹಾಗೂ ಪಿಎಸ್‍ಐ ಶಿವಕುಮಾರ್ ನೂಕು ನುಗ್ಗಲನ್ನು ಬೆತ್ತ ಹಿಡಿದು ಚದುರಿಸಲು ಹರಸಾಹಸ ಪಡಬೇಕಾಯಿತು. ಒಟ್ಟಾರೆ ಮಾಸ್ಕ್ ಹಾಕಿದವರಿಗೆ ಮಾತ್ರ ಎಣ್ಣೆ ಖರೀದಿಗೆ ಅವಕಾಶ ನೀಡಬೇಕು ಎಂಬ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಪೆÇಲೀಸ್ ಮತ್ತು ಆರೋಗ್ಯ ಇಲಾಖೆಯ ಶ್ರಮ ನೀರಲ್ಲಿ ಹೋಮ ಮಾಡಿದಂತೆ ಆಗಿ ಬಿಟ್ಟಿತ್ತು.
ಪೋಲೀಸರ, ಅಬಕಾರಿ ಇಲಾಖೆ ಹರಸಾಹಸ :
ಮದ್ಯದಂಗಡಿ ತೆರೆದ ಬೆನ್ನಲ್ಲೇ ನಗರದಲ್ಲಿ ವಾಹನಗಳ ಸಂಚಾರ ದುಪ್ಪಟ್ಟು ಆಗಿತ್ತು. ಎಲ್ಲಿ ನೋಡಿದರೂ ಜನಜಂಗುಳಿಯಿಂದ ಕೂಡಿತ್ತು. ಈಗಾಗಲೇ ಬೆಣ್ಣೆ ನಗರಿಯಲ್ಲಿ ಕೋರೋನಾ ಸೋಂಕು 21 ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಹೊಸದುರ್ಗ ಪಟ್ಟಣಕ್ಕೆ ಬರುವ ಸರ್ಕಾರಿ ನೌಕರರನ್ನು ತಡೆಯಲು ಪೊಲೀಸರು ತನಿಖೆ ಮಾಡುವುದು ಒಂದೆಡೆಯಾದರೆ ಮತ್ತೊಂದೆಡೆ ಬಾರ್ ಗಳ ಮುಂದೆ ಸಾಮಾಜಿಕ ಅಂತರ ಕಾಪಾಡದೆ ಇರುವ ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಗಿತ್ತು.
ಒಟ್ಟಾರೆ ಇದೇ ರೀತಿ ಜನ ಜಂಗುಳಿ ಪ್ರತಿ ದಿನ ಇದ್ದರೆ ಸೋಂಕು ತಗುಲುವುದರಲ್ಲಿ ಯಾವುದೇ ಸಂದೇಹ ಇಲ್ಲ. ಸಾಮಾಜಿಕ ಅಂತರ ಕಾಯ್ದು ಕೊಂಡು ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಮದ್ಯ ಬಾಟಲು ಕೊಡಿ ಎಂದು ಪಿಎಸ್‍ಐ ಶಿವಕುಮಾರ್ ಮತ್ತು ಅಬಕಾರಿ ನಿರೀಕ್ಷಕರಾದ ಶ್ರೀಮತಿ ಪ್ರಮೀಳಾ ಬಾರ್ ಮಾಲೀಕರಿಗೆ ಖಡಕ್ಕಾಗಿ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
