ಸಾಹಿತ್ಯ ಕೇವಲ ಮನೋರಂಜನೆಯಲ್ಲ, ಜೀವನದ ಮೌಲ್ಯಗಳಿಗೆ ದಾರಿದೀಪ: ಬ್ರಹ್ಮದೇವ ಹದಳಗಿ

ಹರಪನಹಳ್ಳಿ:

     ಸಾಹಿತ್ಯ ಕೇವಲ ಮನೋರಂಜನೆಗಾಗಿ ಅಲ್ಲ, ಅದೊಂದು ಉತ್ತಮ ಜೀವನ ಮೌಲ್ಯಗಳನ್ನು ನೀಡುವ ಮಾರ್ಗ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದೆ ಉಪನ್ಯಾಸಕ ಬ್ರಹ್ಮದೇವ ಹದಳಗಿ ಅಭಿಪ್ರಾಯ ವ್ಯಕ್ತಪಡಿಸಿದರು.

   ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಭರವಸಾ ಕೋಶದ (ಐಕ್ಯೂಎಸಿ) ಅಡಿಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ವಿಭಾಗದ ವತಿಯಿಂದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಚಾರವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ತಾನೂ ಬದುಕಿ ಇತರರನ್ನು ಬದುಕಲು ಬಿಡವುದು ನಿಜವಾದ ಮನುಷ್ಯನ ಗುಣಗಳಾಗಿವೆ. ಇಂತಹ ವಿಶೇಷ ಗುಣಗಳು ಬರಲು ಸಾಹಿತ್ಯ ಪ್ರೇಮ ಬೆಳಸಿಕೊಳ್ಳಿ ಎಂದರು.

     ಗ್ರಂಥಪಾಲಕಿ ನಾಗರತ್ನಮ್ಮ ಹೊಸಮನಿ ಮಾತನಾಡಿ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಜ್ಞಾನವೃದ್ದಿಯ ಜೊತೆಯಲ್ಲಿ ಬದುಕಿನ ಮೌಲ್ಯಗಳು ಸಂಬಂಧಗಳ ಬೆಲೆ ಅರಿಯಲು ಸಹಕಾರಿಯಾಗುತ್ತದೆ ಎಂದರು.

     ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಹುಚ್ಚುರಾಯಪ್ಪ, ಓಬಳೇಶ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪುನಿತ್‍ರಾಜ್, ಸಹಾಯಕ ಪ್ರದ್ಯಾಪಕರಾದ ರೀಮಾ.ಎಲ್.ಕೋಟ್ಯಾನ್, ವೀರೇಶ್.ಎಸ್.ಎಂ, ಮೆಹಬೂನ್ ಭಾಷಾ, ದಿವ್ಯಶ್ರೀ, ಹಾಗೂ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link