ಚಿತ್ರದುರ್ಗ;
ಚಾಲಕರು ಮತ್ತು ವಿವಿಧ ವಾಹನಗಳ ಮಾಲೀಕರ ಬೇಡಿಕಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಚಿತ್ರದುರ್ಗ ಜಿಲ್ಲಾ ಕೋಟೆನಾಡು ಲಘು ವಾಹನ ಚಾಲಕರ ಮತ್ತು ಮಾಲಿಕರ ಕ್ಷೇಮಾಬೀವೃದ್ದಿ ಸಂಘದಿಂದ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಲಾಯಿತು.
ಚಾಲಕರಿಗೆ ಉಚಿತ ಸಿಲಿಂಡರ್, ಬಿಪಿಎಲ್ ಕಾರ್ಡ್, ಪ್ರವಾಸೋದ್ಯಮ ಇಲಾಖೆವತಿಯಿಂದ ವಾಹನ ಸೌಲಭ್ಯ ಕೊಡಿಸಬೇಕು. ಚಾಲಕರ ಮಕ್ಕಳಿಗೆ ಶಿಕ್ಷಣ ಉಚಿತ ಸೌಲಭ್ಯ ನೀಡಬೇಕು. ಕಾರ್ಮಿಕ ಇಲಾಖೆಯ ಸೌಲತ್ತು ಅನ್ವಯವಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಚಾಲಕರಿಗೆ ಸರ್ಕಾರದಿಂದ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಆಗ್ರಹಿಸಲಾಯಿತು.
ಚಿತ್ರದುರ್ಗ ನಗರದ ಮಧ್ಯ ಭಾಗದಲ್ಲಿ ಒಂದು ಎಕೆರೆ ಜಮೀನಿನನ್ನು ಕಾರು ನಿಲ್ದಾಣಕ್ಕಾಗಿ ನೀಡಬೇಕು. ಎಲ್ಲಾ ಚಾಲಕರಿಗೂ ಬ್ಯಾಡ್ಜ್ ನೀಡುವಂತೆ ಸಾರಿಗೆ ಇಲಾಖೆಗೆ ಸೂಚಿಸಬೇಕು. ಕಾರು ಚಾಲಕರು ಅಪಘಾತದಲ್ಲಿ ಮೃತಪಟ್ಟರೆ 5 ಲಕ್ಷ ಪರಿಹಾರ ಕೊಡಬೇಕು ಹಾಗೂ ಸರ್ಕಾರಿ ಕೆಲಸವನ್ನು ಅವರ ಕೊಟುಂಬದವರಿಗೆ ಕೊಡಬೇಕು. ಅಪಘಾತದ ಚಿಕಿತ್ಸೆಗೆ 50 ಸಾವಿರ ಹಣವನ್ನು ಜಿಲ್ಲಾಡಳಿತ ಭರಿಸಬೇಕು. ಚಾಲಕರ ವಿಮೆಯನ್ನು 2 ರಿಂದ 5 ಲಕ್ಷಕ್ಕೆ ಏರಿಸಬೇಕು ಎಂದು ಒತ್ತಾಯಿಸಲಾಯಿತು.
50 ವರ್ಷ ದಾಟಿದ ಚಾಲಕರಿಗೆ 2 ಸಾವಿರ ಪಿಂಚಣಿಯನ್ನು ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಚಾಲಕರುಗಳಿಗೆ ಅನುದಾನವನ್ನು ನೀಡಬೇಕು. ವಾಹನಗಳ ವಿಮೆ ಯನ್ನು ಕಡಿಮೆ ಮಾಡಿಬೇಕು. ಚಾಲಕರಿಗಾಗಿ ಬಜೆಟ್ ನಲ್ಲಿ ಹಣವನ್ನು ಮೀಸಲಿಡಬೇಕು. ಚಾಲಕರ ಭವನ ಕಟ್ಟಬೇಕು. ಬ್ಯಾಂಕ್ ಹಾಗೂ ಫೈನಾನ್ಸ್ ರವರು ವಾಹನದ ಮಾಲೀಕರುಗಳಿಗೆ ಸಾಲ ಕಟ್ಟುವಂತೆ ಕಿರುಕುಳ ನೀಡದಂತೆ ತಡೆಯಬೇಕು. ಟೋಲ್‍ಗಳಲ್ಲಿ ಸಂಚರಿಸುವ ಹಳದಿ ಬೋರ್ಡ್ ವಾಹನಗಳಿಗೆ ಶೇಕಡ 50 ರಷ್ಟು ವಿನಾಯಿತಿ ನೀಡಬೇಕು ಎನ್ನುವ ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ನೀಲಕಂಠೇಶ್ವರ ದೇವಾಲಯದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೂ ತಮ್ಮ ವಾಹನಗಳ ಸಮೇತ ಮೆರವಣಿಗೆ ನಡೆಸಿದ ಚಿತ್ರದುರ್ಗ ಜಿಲ್ಲಾ ಕೋಟನಾಡು ಲಘು ವಾಹನ ಚಾಲಕರ ಮತ್ತು ಮಾಲಿಕರ ಕ್ಷೇಮಾಬೀವೃದ್ದಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಾಣ ಮಾಡಿದರು.
ರಾಜ್ಯ ಉಪಾಧ್ಯಕ್ಷ ರಾಜಣ್ಣ, ನಿಂಗೇಗೌಡ, ಮೋಹನ್ ರೆಡ್ಡಿ, ಹಿರಿಯೂರು ಅಧ್ಯಕ್ಷ ಶಶಿಕಾಂತ್, ಉಪಾಧ್ಯಕ್ಷ ದಾದಾಸಿಂಗ್, ಚಳ್ಳಕೆರೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ತಿಪ್ಪೇಶ್, ಗೋಷಿ ಸೇರಿದಂತೆ ಇತರರು ಭಾಗವಹಿಸಿದ್ದರು.
