ಲಿಂಕ್ ಲೈನ್ ಮಾರ್ಗಕ್ಕೆ ಚಾಲನೆ

ಹುಳಿಯಾರು

         ಹುಳಿಯಾರು ಹೋಬಳಿಯ ಬೆಸ್ಕಾಂ ವಿಭಾಗದ ಎಫ್3-ಯಳನಾಡು ಮತ್ತು ಎಫ್5-ಕೋರಗೆರೆ ಪೂರಕಗಳ ಅಧಿಕ ಹೊರೆಯನ್ನು ಕಡಿಮೆ ಮಾಡಲು ನಿರ್ಮಿಸಿದ್ದ ಲಿಂಕ್ ಲೈನ್ ಮಾರ್ಗಗಳಿಗೆ ಚಾಲನೆ ನೀಡಲಾಯಿತು.ಈ ಪೂರಕಗಳಲ್ಲಿ ಅಧಿಕ ಹೊರೆ ಇದ್ದರಿಂದ ರಾತ್ರಿಯ ಸಮಯದಲ್ಲಿ ದಿನ ಬಿಟ್ಟು ದಿನ 3 ಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಹಾಗಾಗಿ ಈಗ ಈ ಪೂರಕವನ್ನು ಎರಡು ಭಾಗಗಳಾಗಿ ವಿಂಗಡಿಸಿ ಕೇಶವಪುರ ಫೀಡರ್ ಮತ್ತು ಕೋರಗೆರೆ ಫೀಡರ್, ತಮ್ಮಡಿಹಳ್ಳಿ ಫೀಡರ್ ಮತ್ತು ಯಳನಾಡು ಫೀಡರ್ ಎಂದು ಪ್ರತ್ಯೇಕವಾಗಿ ವಿಭಜಿಸಿ ಪ್ರತಿ ದಿವಸ ಹಗಲು ಮತ್ತು ರಾತ್ರಿ ವೇಳೆಯಲ್ಲಿ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತದೆ.

        ಪೂರಕಗಳನ್ನು ಚಾರ್ಜ್ ಅಥವಾ ಚಾಲನೆಗೊಳಿಸುವ ಸಮಯದಲ್ಲಿ ಬೆಸ್ಕಾಂ ಎಇಇ ಗವಿರಂಗಯ್ಯ, ಶಾಖಾಧಿಕಾರಿ ಉಮೇಶ್ ನಾಯಕ್, ಉಪಸ್ಥಾವರ ಎಇ ವೆಂಕಟೇಶ್, ಶಾಖಾಧಿಕಾರಿ ಎಚ್.ಜಿ. ಮೂರ್ತಿ, ಪಾಳಿಯ ಕಿರಿಯ ಎಂಜಿನಿಯರ್ ಚಂದ್ರಶೇಖರಯ್ಯ, ಟಿಜಿಪಿಎಲ್ ಕಂಪನಿಯ ಸೂಪರ್ ವೈಸರ್ ವೀರೇಶ್, ಹುಳಿಯಾರು ಶಾಖೆಯ ಎಲ್ಲಾ ನೌಕರ ವೃಂದದವರು ಉಪಸ್ಥಿತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap