ಲೋಕಕಲ್ಯಾಣಕ್ಕಾಗಿ ದುರ್ಗ ಹೋಮ

ಚಿತ್ರದುರ್ಗ:

       ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದಲ್ಲಿ ಪ್ರತಿ ಅಮಾವಾಸೆ ಹಾಗೂ ಹುಣ್ಣಿಮೆಯಂದು ಪ್ರಸಾದ ವಿತರಣೆ ಆರಂಭಗೊಂಡು ಮೂರು ವರ್ಷಗಳಾಗಿರುವ ಪ್ರಯುಕ್ತ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ಮೂರ್ತಿ ಮತ್ತು ಕುಟುಂಬದವರಿಂದ ಶುಕ್ರವಾರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ದುರ್ಗ ಹೋಮ ಹಾಗೂ ಗಣ ಹೋಮ ಏರ್ಪಡಿಸಲಾಗಿತ್ತು.

       ಹೊಸದುರ್ಗ ಭಗೀರಥಪೀಠದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಹೋಮದಲ್ಲಿ ಭಾಗವಹಿಸಿ ಲೋಕಕಲ್ಯಾಣಾರ್ಥವಾಗಿ ನಡೆಸಿದ ಗಣ ಹೋಮ ಮತ್ತು ದುರ್ಗ ಹೋಮದಿಂದ ಸಕಾಲಕ್ಕೆ ಮಳೆ ಬೆಳೆಯಾಗಿ ಸಕಲ ಜೀವ ರಾಶಿಗೂ ನೆಮ್ಮದಿ ಸಿಗುವಂತಾಗಲಿ ಎಂದು ಕಣಿವೆಮಾರಮ್ಮನಲ್ಲಿ ಪ್ರಾರ್ಥಿಸಿದರು.ನಾಗಭೂಷಣ್, ಎಸ್.ಜಿ.ಪುರುಷೋತ್ತಮನಾಯಕ, ಪ್ರಶಾಂತ, ರೈತ ಸಂಘದ ಧನಂಜಯ ಸೇರಿದಂತೆ ನೂರಾರು ಭಕ್ತರು ಹೋಮದಲ್ಲಿ ಪಾಲ್ಗೊಂಡಿದ್ದರು.ಹೋಮದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link