ಹರಪನಹಳ್ಳಿ,
ಪಟ್ಟಣದ ಹಾಸ್ಟೆಲ್ ಹಾಗು ಶಾಲೆಗಳಿಗೆ ಹೊಸಪೇಟೆ ಲೋಕಾಯುಕ್ತ ಇನ್ಸೆಪೆಕ್ಟರ ವಸಂತ ವಿ.ಅಸೋದೆ ಅವರು ಗುರುವಾರ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
ಇಲ್ಲಿಯ ಗುರುಭವನದ ಬಳಿ ಇರುವ ಬಿಸಿಎಂ ಇಲಾಖೆಯ ¨ಹಾಸೆಲ್ ಪರಿಶೀಲಿಸಿದ ಅವರು ಹಾಸ್ಟೆಲ್ ನಲ್ಲಿ ಸುಸಜ್ಜಿತ ಗ್ರಂಥಾಲಯ ಇರುವುದು, ಉತ್ತಮ ಕೈ ತೋಟ, ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ , ಒಟ್ಟಿನಲ್ಲಿ ಉತ್ತಮ ವಾತಾವರಣ ವಿದ್ದು, ಮಾದರಿ ಹಾಸ್ಟೆಲ್ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಾಂಬಾರು ಸೇವಿಸಿ ರುಚಿ ನೋಡಿದರು. ಎಲ್ಲಾ ರೂಂಗಳ ನ್ನು ಪರಿಶೀಲಿಸಿದರು. ಶೃಂಗಾರತೋಟ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಚರಂಡಿ ಸ್ವಚ್ಚತೆಗೆ ಆದ್ಯತೆ ನೀಡಲು ಸೂಚ್ಸಿದರು. ಪಠ್ಯ ಪುಸ್ತಕ ಸರಬರಾಜು ಆಗಿರುವ ಬಗ್ಗೆ ಖಚಿತ ಪಡಿಸಿಕೊಂಡರು.ಈ ಸಂದರ್ಭದಲ್ಲಿ ಹಾಸ್ಚೆಲ್ ಮೇಲ್ವಿಚಾರಕ ಬಿ.ಎಚ್ .ಚಂದ್ರಪ್ಪ, ಲೋಕಾ.ಯುಕ್ತ ಸಿಬ್ಬಂದಿ ಹನುಮಂತಪ್ಪ, ನಾಗರಾಜ ಉಪಸ್ಥಿತರಿದ್ದರು.