ಕಾಂಗ್ರೆಸ್ ಸೇವಾದಳಕ್ಕೆ ದೊಡ್ಡ ಇತಿಹಾಸವಿದೆ

ಚಿತ್ರದುರ್ಗ:

      ಕಾಂಗ್ರೆಸ್ ಪಕ್ಷದ ಶಕ್ತಿ ಯೋಜನೆ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸೇವಾದಳದ ಸಭೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್‍ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಶಕ್ತಿ ಯೋಜನೆಯಡಿ ನಿಮಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಧಾರ್‍ಗುರುತಿನ ಚೀಟಿ ಸಂಖ್ಯೆ ನಮೂದಿಸಿದರೆ ಶಕ್ತಿ ಯೋಜನೆಯಡಿ ನಿಮ್ಮ ನೊಂದಣಿಯಾಗುತ್ತದೆ. ಇದರಿಂದ ರಾಷ್ಟ್ರ ಮಟ್ಟದಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ನೀವುಗಳು ತಿಳಿದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಲು ನೆರವಾಗಲಿದೆ. ಹಾಗಾಗಿ ಪ್ರತಿಯೊಬ್ಬರು ಶಕ್ತಿ ಯೋಜನೆಯಡಿ ನೊಂದಾಯಿಸಿಕೊಳ್ಳಿ ಎಂದು ಸೇವಾದಳದ ಕಾರ್ಯಕರ್ತರಿಗೆ ಕರೆ ನೀಡಿದರು.

        ಸೇವಾದಳ ಎಂದರೆ ಶಿಸ್ತಿಗೆ ಹೆಸರುವಾಸಿಯಾದುದು. ಎನ್.ಎಸ್.ಹರ್ಡೆಕರ್‍ರವರು ಸ್ಥಾಪಿಸಿದ ಸೇವಾದಳಕ್ಕೆ ತನ್ನದೆ ಆದ ಇತಿಹಾಸವಿದೆ. ಸೇವಾದಳದಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ಯಾರು ಸೇವೆ ಸಲ್ಲಿಸುತ್ತಾರೋ ಅಂತಹವರಿಗೆ ಒಂದಲ್ಲ ಒಂದು ದಿನ ಅಧಿಕಾರ ಹುಡುಕಿಕೊಂಡು ಬರುತ್ತದೆ. ರಾಷ್ಟ್ರಪಿತ ಮಹಾತ್ಮಗಾಂಧಿರವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ಅ.2 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

      ಜಿಲ್ಲಾ ಕಾಂಗ್ರೆಸ್ ಸೇವಾದಳದ ಜಿಲ್ಲಾ ಮುಖ್ಯ ಸಂಘಟಕ ಅಶ್ರಫ್‍ಆಲಿ ಮಾತನಾಡಿ ನಿಮಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಆಧಾರ್ ಸಂಖ್ಯೆ ನಮೂದಿಸಿದರೆ ಪಕ್ಷ ಸಂಘಟನೆ ಹಾಗೂ ಕಾರ್ಯಕ್ರಮಗಳ ಬಗ್ಗೆ ನೇರವಾಗಿ ಎ.ಐ.ಸಿ.ಸಿ.ಅಧ್ಯಕ್ಷ ರಾಹುಲ್‍ಗಾಂಧಿರವರನ್ನು ಸಂಪರ್ಕಿಸಬಹುದು ಎಂದು ಶಕ್ತಿ ಯೋಜನೆಯ ಮಹತ್ವ ತಿಳಿಸಿದರು.

     ಕೆ.ಪಿ.ಸಿ.ಸಿ.ಸೇವಾದಳದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಸಂಪತ್‍ಕುಮಾರ್, ಸೇವಾದಳದ ಜಿಲ್ಲಾಉಪಾಧ್ಯಕ್ಷ ಹಮೀಮ್ ವೇದಿಕೆಯಲ್ಲಿದ್ದರು.
ಜಿಲ್ಲಾ ಸೇವಾದಳದ ಮಹಿಳಾ ಸಂಘಟಕಿ ಇಂದ್ರ, ಚಿತ್ರದುರ್ಗ ಬ್ಲಾಕ್ ಅಧ್ಯಕ್ಷೆ ಹರ್ಷಿದಾಭಾನು, ಚಳ್ಳಕೆರೆ ಬ್ಲಾಕ್ ಅಧ್ಯಕ್ಷೆ ನೇತ್ರಾವತಿ, ಹಿರಿಯೂರು ಬ್ಲಾಕ್‍ನ ಮನ್ಸೂರ್‍ಭಾಷ, ಕಾರ್ಯದರ್ಶಿ ರೇಷ್ಮ, ಜಿಲ್ಲೆಯ ಎಲ್ಲಾ ಬ್ಲಾಕ್‍ನ ಪದಾಧಿಕಾರಿಗಳು ಶಕ್ತಿ ಸಭೆಯಲ್ಲಿ ಭಾಗವಹಿಸಿದ್ದರು.

ದ್ವಜಾರೋಹಣ ಕಾರ್ಯಕ್ರಮ

      ಜಿಲ್ಲಾ ಕಾಂಗ್ರೆಸ್ ಸೇವಾದಳದಿಂದ ಪ್ರತಿ ತಿಂಗಳ ಕಡೆ ಭಾನುವಾರವಾದ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

        ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿ ಶಿಸ್ತಿಗೆ ಹೆಸರುವಾಸಿಯಾಗಿರುವ ಸೇವಾದಳ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಧ್ವಜಾರೋಹಣ ನೆರವೇರಿಸಿಕೊಂಡು ಬರುತ್ತಿದೆ. ಇದರಿಂದ ಸೇವಾದಳದ ಕಾರ್ಯಕರ್ತರಲ್ಲಿ ಪಕ್ಷ ಸಂಘಟನೆ ಹಾಗೂ ಶಿಸ್ತು ಮೂಡುತ್ತದೆ ಎಂದು ಹೇಳಿದರು.

        ಜಿಲ್ಲಾ ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕ ಅಶ್ರಫ್‍ಆಲಿ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಸಂಪತ್‍ಕುಮಾರ್, ಜಿಲ್ಲಾ ಸೇವಾದಳದ ಉಪಾಧ್ಯಕ್ಷ ಸಾದತ್, ಮಹಿಳಾ ಸಂಘಟಕಿ ಇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಸೇವಾದಳದ ಸಂಘಟಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap