ನಿವೇಶನ ರಹಿತರಿಗೆ ನಿವೇಶನ ಹಂಚಿಕೆ : ಖರೀದಿಗೆ ಜಮೀನು ಗುರುತಿಸಿ : ವಿನೋತ್ ಪ್ರಿಯಾ

ಚಿತ್ರದುರ್ಗ :

    ಜಿಲ್ಲೆಯಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು ಜಮೀನು ಗುರುತಿಸಿ, ಖಾಸಗಿ ಜಮೀನು ಲಭ್ಯವಿದ್ದಲ್ಲಿ, ಆ ಕುರಿತ ವರದಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆ’ ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು ಜಮೀನು ಗುರುತಿಸಬೇಕು. ಸರ್ಕಾರಿ ಭೂಮಿ ಲಭ್ಯವಿದ್ದಲ್ಲಿ ಆಯಾ ತಹಸಿಲ್ದಾರ್‍ಗಳ ಮೂಲಕ ವರದಿ ಸಲ್ಲಿಸಬೇಕು. ಖಾಸಗಿ ಜಮೀನು ಲಭ್ಯವಿದ್ದಲ್ಲಿ, ಜಮೀನು ನೀಡಬಯಸು ವವರಿಂದ ಒಪ್ಪಿಗೆ ಪತ್ರ ಪಡೆದು, ವರದಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

     ಈಗಾಗಲಿ ನೀಡಿರುವ ಜಮೀನಿನ ಬಗ್ಗೆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಇ-ಸ್ವತ್ತು ಆದರೆ ಮಾತ್ರ ಜಮೀನು ನೀಡಲಾಗುತ್ತದೆ. ನಕ್ಷೆ ವೀಕ್ಷಿಸಿ ಪ್ರತಿ ಜಮೀನಿನಲ್ಲೂ ದಾರಿ ನಿಗದಿಪಡಿಸಿ, ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಬಿಪಿಎಲ್ ಕಾರ್ಡ್‍ದಾರರು ಸರ್ಕಾರ ವಿಧಿಸಿರುವ ಮಾನದಂಡಗಳಿಗೆ ಬದ್ಧರಾಗಿರಬೇಕು. ಹೊಸದಾಗಿ ಸರ್ಕಾರಿ ನೌಕರಿ ಪಡೆಯುವ ಅಭ್ಯರ್ಥಿಗಳ ಕುಟುಂಬದ ಬಿಪಿಎಲ್ ಕಾರ್ಡ್‍ಗಳನ್ನು, ಅಭ್ಯರ್ಥಿಗಳ ಜಾತಿ ಸಿಂಧುತ್ವ ಮಾಡುವ ಸಮಯದಲ್ಲಿ ಎಪಿಎಲ್ ಕಾರ್ಡ್‍ಗಳನ್ನಾಗಿ ಪರಿವರ್ತಿಸಬೇಕು. ತಹಶೀಲ್ದಾರ್ ಸರ್ಕಾರದ ಇನ್ನೊಂದು ಮುಖವಿದ್ದಂತೆ.

     ಎಲ್ಲಾ ಅಧಿಕಾರವಿದ್ದು, ಕಾರ್ಡ್ ರದ್ದತಿ ಕಾರ್ಯ ಸಹ ಮಾಡುವ ಅಧಿಕಾರವಿದೆ ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ, ಬಿಪಿಎಲ್ ಕಾರ್ಡ್‍ಗಳನ್ನು ಪರಿಶೀಲಿಸಬೇಕು. ಕುಟುಂಬದ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ, ನಿಯಮಕ್ಕೆ ವಿರುದ್ಧವಾಗಿರುವ ಬಿಪಿಎಲ್ ಕಾರ್ಡ್‍ಗಳನ್ನು ರದ್ದುಗೊಳಿಸುವ ಕಾರ್ಯ ಶೀಘ್ರಗತಿಯಲ್ಲಿ ಮುಗಿಯಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲೆಯಲ್ಲಿ 32 ಕೆರೆಗಳ ಒತ್ತುವರಿ ತೆರವು ಕಾರ್ಯ ಮುಗಿದಿದ್ದು, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅವರು ಕೆರೆಗಳ ವ್ಯಾಪ್ತಿಯನ್ನು ಗುರುತಿಸುವ ಕಾರ್ಯ ಪೂರ್ಣಗೊಳಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ವಿಲೇವಾರಿಗಾಗಿ ಜಾಗ ಗುರುತಿಸಿರುವ ಬಗ್ಗೆ ಒಂದು ವಾರದೊಳಗಾಗಿ ಮಾಹಿತಿ ನೀಡಬೇಕು ಎಂದರು.

    ಆಯುಷ್ ಇಲಾಖಾ ಅಧಿಕಾರಿ ಡಾ. ವಿಶ್ವನಾಥ್ ಅವರು, ನಗರದ 5 ರಿಂದ 10 ಕಿ.ಮೀ ವಿಸ್ತೀರ್ಣದೊಳಗೆ ಆಯುಷ್ ಆಯುರ್ವೇದಿಕ್ 100 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ನಿರ್ಮಿಸಲು 1 ರಿಂದ 2 ಎಕರೆ ಜಮೀನು ಅವಶ್ಯಕತೆಯಿದೆ. ಈಗಾಗಲೆ ಭೂಮಿ ಗುರುತಿಸಿದ್ದು, ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.

     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂಧನ್, ಡಿಡಿಪಿಐ ರವಿಶಂಕರ್‍ರೆಡ್ಡಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶಶಿಧರ್, ತಹಸಿಲ್ದಾರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link