ಹುಳಿಯಾರು
ಹುಳಿಯಾರು ಪಟ್ಟಣದ ಭೀಮಮ್ಮನ ದೇವಾಲಯದ ಬಳಿ ಇಟ್ಟಿಗೆ ತುಂಬಿದ ಲಾರಿ ಅಪಘಾತಕ್ಕೀಡಾಗಿ ಕೂದಳೆಲೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ.ಶಿರಾ-ಹುಳಿಯಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ತುಂಬಿದ ಲಾರಿ ಪಟ್ಟಣದ ಕಡೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗುಂಡಿಗೆ ಉರುಳಿದೆ. ಒಂದಿಂಚು ಮುಂದೆ ಬಿದ್ದಿದ್ದರೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗುತ್ತಿತ್ತು.
ಅದು ಹೈವೋಲ್ಟೇಜ್ ಇರುವ ಲೈನ್ ಆಗಿರುವುದರಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶತ್ ಕಂಬದ ಸಮೀಪದ ಗುಂಡಿಗೆ ಬಿದ್ದಿದೆ. ಲಾರಿ ತಲೆಕೆಳಗಾಗಿ ಬಿದ್ದಿದ್ದು ಇಟ್ಟಿಗೆ ಚಲ್ಲಾಪಿಲ್ಲಿಯಾಗಿ ಬಿದಿದ್ದು ಚಾಲಕ, ಕ್ಲೀನರ್ ಅನಾಹುತದಿಂದ ಪಾರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ