ಸಾಕಷ್ಟು ನಿರೀಕ್ಷೆ ಮತ್ತುಕುತೂಹಲದ 2020-21ರ ರಾಜ್ಯಬಜೆಟ್

      ಮುಖ್ಯಮಂತ್ರಿ ಬಿ ಎಸ್‍ ಯಡಿಯೂರಪ್ಪ ಅವರ ಮೊದಲ 2020-21 ರ ಮುಂಗಡ ಪತ್ರದಲ್ಲಿ ಅಪಾರ ಕೊಡುಗೆಗಳನ್ನು ನೀಡುವವರು ಎಂಬ ವಿಶ್ವಾಸಜನರಲ್ಲಿ ಮೂಡಿದೆ.ಈ ನಡುವೆಯೇ ಹಿಂದಿನ ವರ್ಷಗಳ ಬಜೆಟ್‍ನಲ್ಲಿ ಘೋಷಣೆಯಾಗಿದ್ದ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಈ ಸವಾಲುಗಳ ನಡುವೆಯೇ ಒಂದು ಕಡೆ ಹೊಸ ಯೋಜನೆಗಳು ರಾಜ್ಯಕ್ಕೆ ಬರಲಿವೆಯೇ?ಅಥವಾ ಹಿಂದೆ ಘೋಷಿಸಿರುವ ಯೋಜನೆಗಳು ಈ ಬಾರಿಯಾದರೂ ಅನುಷ್ಠಾನ ಗೊಳ್ಳಬಹುದೆ?ಎಂಬ ಕಾತುರಜನರ ಮನದಲ್ಲಿದೆ.

      ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡುವಅನುದಾನ ಮತ್ತುತೆರಿಗೆ ಸಂಗ್ರಹದ ಹಂಚಿಕೆಪ್ರಮಾಣದಲ್ಲೂ ಕುಸಿತ ಆಗಿರುವುದನ್ನು ಮುಖ್ಯಮಂತ್ರಿಗಳು 2020-21ರ ಮುಂಗಡಪತ್ರದಲ್ಲಿ ಹೇಗೆ ಸರಿದೂಗಿಸುತ್ತಾರೆಎಂಬುದನ್ನುಕಾದು ನೋಡಬೇಕಿದೆ.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯೋಜನೆಯಾದ ಸಾಲ ಮನ್ನಾಕಾರ್ಯಕ್ರಮಕ್ಕೆ ಹಿಂದಿನ ಸರ್ಕಾರದಅನುದಾನವು ಬಿಡುಗಡೆಯಾಗಿಲ್ಲದಿರುವುದು ಈಗಿನ ಸರ್ಕಾರಕ್ಕೆಒಂದು ಸವಾಲಾಗಿ ಪರಿಣಮಿಸಬಹುದು.

    ಸರ್ಕಾರದ ವೆಚ್ಚ ಮತ್ತುಆದಾಯವನ್ನುತೆಗೆದುಕೊಂಡರೆಜನಪ್ರಿಯ ಯೋಜನೆಗಳಾದ ಅನ್ನಭಾಗ್ಯಯೋಜನೆ, ಇಂದಿರಾ ಕ್ಯಾಂಟೀನ್‍ ಇತರೆ ಜನಪ್ರಿಯ ಕಾರ್ಯಕ್ರಮಗಳಿಗೆ ಅನುದಾನಕಡಿಮೆ ಮಾಡುವ ಸಂಭವಇರುತ್ತದೆ.ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಸರ್ಕಾರದ ಹಣಕಾಸು ಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ಸರ್ಕಾರಕ್ಕೆ ಬರಬೇಕಾದ ಜಿ.ಎಸ್. ಟಿ.ಅನುದಾನವುಕೇಂದ್ರ ಸರ್ಕಾರದಿಂದಇನ್ನೂ ಬಿಡುಗಡೆಯಾಗದಿರುವುದು ಸರ್ಕಾರಕ್ಕೆತಲೆನೋವಾಗಿ ಪರಿಣಮಿಸಿದೆ.

     ಇತ್ತೀಚಿನ ವರದಿಗಳ ಪ್ರಕಾರಎಲ್ಲಾ ಇಲಾಖೆಗಳ ಅನುದಾನದಲ್ಲಿ ಶೇ.20ರಷ್ಟು ಅನುದಾನವನ್ನು ಕಡಿತಗೊಳಿಸಿ ಸರ್ಕಾರದ ಹಣಕಾಸು ಸ್ಥಿತಿಯನ್ನು ಸರಿಯಾದದಾರಿಗೆತರುವ ಸಂಭವವಿದೆ. ಹೀಗಾಗಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವ ಕಡೆಗೆ ಗಮನಹರಿಸಿದೇ ಇರಬಹುದು.ರಾಜ್ಯದರೈತರಆದಾಯವನ್ನು ಹೆಚ್ಚಿಸುವ ಸಲುವಾಗಿ ಕೃಷಿಗೆ ಹೇಗೆ ಉತ್ತೇಜವನ್ನು ನೀಡುತ್ತಾರೆ ಎಂದು ರಾಜ್ಯದ ಜನ ನಿರೀಕ್ಷಿಸಿದ್ದಾರೆ.

     ಸರ್ಕಾರಿ ನೌಕರರ ವೇತನವುಇತ್ತೀಚಿಗೆ ಸರಿಯಾದ ಸಮಯದಲ್ಲಿ ಪಾವತಿಯಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವು ದರಿಂದ ಸರ್ಕಾರವು ಖಜಾನೆ-2 ಹಾಗೂ ಖಜಾನಾಧಿಕಾರಿಗಳಿಗೆ ನೀಡುವ ನಿರ್ದೇಶನದ ಬಗ್ಗೆ ವೇತನದಾರರ ನಿರೀಕ್ಷೆಈ ಬಾರಿಯಮುಂಗಡಪತ್ರದಲ್ಲಿ ಹೆಚ್ಚಿದೆ.

   ಇತ್ತೀಚಿಗೆ ಕೇಂದ್ರ ಸರ್ಕಾರವು ಅಧಿಸೂಚಿಸಿದ ಮಹದಾಯಿಯೋಜನೆಗೆ ಈ ಬಜೆಟ್‍ನಲ್ಲಿ ಎಷ್ಟು ಅನುದಾನವನ್ನು ಮೀಸಲಿಡುತ್ತಾರೆ ಎಂಬ ನಿರೀಕ್ಷೆಉತ್ತರಕರ್ನಾಟಕದಜನರಲ್ಲಿದೆ.ಇನ್ನೂಅತಿ ಹೆಚ್ಚು ಮುಖ್ಯವಾದ ವಿಷಯ ಪ್ರವಾಹ ಸಂತ್ರಸ್ತರ ಪರಿಸ್ಥಿತಿಗೆ ಸರ್ಕಾರವು ಸರಿಯಾದ ಸಮಯಕ್ಕೆ ನೆರವು ನೀಡಿಲ್ಲವೆಂಬ ಆರೋಪಕ್ಕೆ ಮುಖ್ಯಮಂತ್ರಿಗಳು ಈ ಬಜೆಟ್‍ನಲ್ಲಿ ನೆರವನ್ನು ನೀಡುವ ನಿರೀಕ್ಷೆ ಉತ್ತರ ಕರ್ನಾಟಕದ ಜನರಲ್ಲಿದೆ.

     ಇತ್ತೀಚಿನ ವರದಿಗಳ ಪ್ರಕಾರರಾಜ್ಯದ ಸಾಲ ಪ್ರಮಾಣ ಹೆಚ್ಚುತಲಿದ್ದುಅದಕ್ಕೆತಕ್ಕಂತೆಆದಾಯ ನಿರೀಕ್ಷೆಯಂತೆ ಸರ್ಕಾರಕ್ಕೆ ಸಂದಾಯವಾಗುತ್ತಿಲ್ಲ. ಎಲ್ಲಾ ಸರ್ಕಾರದಅನುಪಯುಕ್ತ ವೆಚ್ಚಗಳನ್ನು ಕಡಿತಗೊಳಿಸಿದರೆ ಸರ್ಕಾರದಆದಾಯಗಣನೀಯ ಪ್ರಮಾಣದಲ್ಲಿಏರಬಹುದೆಂಬ ನಿರೀಕ್ಷೆಜನಸಾಮಾನ್ಯರದ್ದು.ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನಉತ್ತೇಜನ ನೀಡುವ ನಿರೀಕ್ಷೆ ರಾಜ್ಯದ ರೈತ ಸಮುದಾಯದಲ್ಲಿದೆ.ಇದಕ್ಕಾಗಿ ಈ ಬಾರಿಯ ಬಜೆಟ್‍ನಲ್ಲಿ ಏನು ನೀಡಬಹುದು ಎಂಬ ಕುತೂಹಲವಿದೆ.

   ಬೆಂಗಳೂರಿನ ಮೂಲಭೂತ ಸೌಕರ್ಯ ಹಾಗೂ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲುಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸಾಫ್ಟ್‍ವೇರ್ ಕಂಪೆನಿಗಳ ಆಶಾವಾದ ಈ ಬಜೆಟ್‍ನಲ್ಲಿ ನಿರೀಕ್ಷೆ ಮಾಡಲಾಗಿದೆ.ವಿಶ್ವ ಹೂಡಿಕೆದಾರರ ಸಮ್ಮೇಳನ ಬೆಂಗಳೂರಿನಲ್ಲಿ ನವೆಂಬರ್‍ನಲ್ಲಿ ನಡೆಯಲಿದ್ದು, ಈ ಬಗ್ಗೆ ಸರ್ಕಾರ ಮುಂಗಡಪತ್ರದಲ್ಲಿಯಾವ ಕ್ರಮಗಳನ್ನು ಪ್ರಕಟಿಸುತ್ತದೆಎಂಬುದನ್ನು ನಿರೀಕ್ಷೆ ಮಾಡಲಾಗುತ್ತಿದೆ.

    ತುಮಕೂರುಜಿಲ್ಲೆಯಜನರದೃಷ್ಟಿಯಲ್ಲಿತುಮಕೂರಿನಲ್ಲಿ ಸಚಿವ ಸಂಪುಟದಲ್ಲಿ ಪ್ರಭಾವಿ ಎನಿಸಿರುವ ಉಸ್ತುವಾರಿ ಸಚಿವರು ಹಾಗೂ ಸಂಸದರು ಮುಖ್ಯಮಂತ್ರಿಗಳಿಗೆ ಪರಮಾಪ್ತರಾಗಿರುವುದರಿಂದಜಿಲ್ಲೆಯ ಯೋಜನೆಗಳಾದ ಎತ್ತಿನ ಹೊಳೆ ಯೋಜನೆ, ಮಧುಗಿರಿ ಕಂದಾಯ ಜಿಲ್ಲೆಯಾಗಿ ಘೋಷಣೆ, ಹಲಸಿನ ಮೌಲ್ಯವರ್ಧನೆಗೆಉತ್ತೇಜನ, ಜಿಲ್ಲೆಯಲ್ಲಿವೈದ್ಯಕೀಯಕಾಲೇಜು ಸ್ಥಾಪನೆ, ವಸಂತ ನರಸಾಪುರದಲ್ಲಿ ಕೈಗಾರಿಕಾಅಭಿವೃದ್ಧಿಗೆ ಕ್ರಮಗಳು, ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ವಿಸ್ತರಣೆ, ತುಮಕೂರಿನಿಂದ ದಾವಣಗೆರೆ ಮತ್ತು ರಾಯದುರ್ಗಕ್ಕೆ ರೈಲ್ವೆ ವಿಸ್ತರಣಾ ಯೋಜನೆ, ಮಧುಗಿರಿ ಏಕಶಿಲಾ ಬೆಟ್ಟಕ್ಕೆರೋಪ್‍ವೇ, ಹೇಮಾವತಿ ನಾಲೆ, ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಗತ, ಜಿಲ್ಲೆಯ ಆದಾಯದ ಪ್ರಮುಖ ತೆಂಗು ಮತ್ತು ಕೊಬ್ಬರಿ ಬೆಳೆಗಾರರ ಅಭಿವೃದ್ಧಿಗೆ ಸರ್ಕಾರದ ಉತ್ತೇಜನ ಕ್ರಮಗಳು, ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್‍ಗೆ ಹಣಕಾಸಿನ ನೆರವು ಸೇರಿದಂತೆ ಮುಂತಾದ ಯೋಜನೆಗಳನ್ನು ತುಮಕೂರಿಗೆ ಸಿಗುತ್ತದೆ ಎಂಬ ವಿಶ್ವಾಸದಿಂದ ಜನತೆ ಕಾತುರದಿಂದ ನೋಡುತ್ತಿದ್ದಾರೆ.

   ರಾಜ್ಯದಲ್ಲಿ ಹೆದ್ದಾರಿ, ರೈಲ್ವೆ ಮಾರ್ಗ ಸ್ಥಾಪನೆಗೆ ಮಾತ್ರವಲ್ಲದೆಕೈಗಾರಿಕಾಘಟಕದ ಸ್ಥಾಪನೆ, ಕಡಿಮೆದರದ ವಸತಿಯೋಜನೆ ಸ್ಥಾಪನೆಗೆ ಭೂಸ್ವಾಧೀನ ಪ್ರಕ್ರಿಯೆಅತ್ಯಂತಕ್ಲಿಷ್ಟಕರವಾಗಿದೆ. ಕರ್ನಾಟಕದಲ್ಲಿ ಭೂಮಿಯ ಸರ್ವೇಕ್ಷಣೆ ಮತ್ತು ಭೂಮಾಲಿಕತ್ವದದೃಢೀಕರಣ ಪ್ರಕ್ರಿಯೆಯಲ್ಲಿ ಸುಧಾರಣೆಯಾಗಲೇಬೇಕು.ಭೂಮಿಯಜಾಗಗುರುತಿಸುವುದು, ಪರ್ಯಾಯ ಭೂಮಿ ನೀಡುವುದಕ್ಕೆ ಪಾರದರ್ಶಕತೆ ಇಂದಿನ ಅಗತ್ಯವಾಗಿದೆ.ಬಲವಂತದ ಭೂಸ್ವಾಧೀನ ಪ್ರಕ್ರಿಯೆಯಾವುದೇಕಾರಣಕ್ಕೂ ಮುಂದುವರೆಸಬಾರದು.ಇದರ ಬಗ್ಗೆ ಮುಂಗಡಪತ್ರದಲ್ಲಿಯಾವ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ನಮ್ಮೆಲ್ಲರಲ್ಲಿದೆ.ಒಟ್ಟಿನಲ್ಲಿ ಈ ಬಾರಿಯ ಮುಂಗಡಪತ್ರಅತ್ಯಂತಕುತೂಹಲ ಮತ್ತು ಸಾಕಷ್ಟು ನಿರೀಕ್ಷೆಗಳನ್ನು ಒಳಗೊಂಡಿದೆ ಎಂದರೆತಪ್ಪೇನಿಲ್ಲ.

ಪ್ರೊ. ಪರಮಶಿವಯ್ಯ ಪಿ
ಪ್ರಾಧ್ಯಾಪಕರು
ತುಮಕೂರು ವಿಶ್ವವಿದ್ಯಾನಿಲಯ
ಮೊ.9448533326

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link