ಬೆಂಗಳೂರು
ಪ್ರೇಮಿಗಳ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಚಾಕುವಿನಿಂದ ಇರಿದುಕೊಂಡು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಠನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಪ್ರೇಮಿಯಾಗಿದ್ದ ಕಾನೂನು ವಿದ್ಯಾರ್ಥಿನಿಯ ಕತ್ತಿಗೆ ಚಾಕುವಿನಿಂದ ಇರಿದ ಪ್ರಿಯಕರ ಐಟಿ ಕಂಪನಿ ಉದ್ಯೋಗಿಯೊಬ್ಬ ತಾನು ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಚಾಕು ಇರಿತದಿಂದ ಕತ್ತಿಗೆ ಗಂಭೀರವಾಗಿ ಗಾಯಗೊಂಡಿರುವ ನ್ಯಾಷನಲ್ ಲಾ ಸ್ಕೂಲ್‌ನ ಕಾನೂನು ವಿದ್ಯಾರ್ಥಿನಿ ಪಾಲಗಾವ್ ಪೆನ್ಸಿಂಗ್ ಹಾಗೂ ಹೊಟ್ಟೆಗೆ ಚಾಕು ಇರಿದುಕೊಂಡಿದ್ದ ಐಟಿ ಉದ್ಯೋಗಿ ಹನ್ಸ್ ರಾಜ್ ಗೆ ಫೊರ್ಟೀಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಜಾರ್ಖಂಡ್ ಮೂಲದ ವಿದ್ಯಾರ್ಥಿನಿ ಪಾಲಗಾವ್ ಪೆನ್ಸಿಂಗ್ ಹಾಗೂ ದೆಹಲಿ ಮೂಲದ ಹನ್ಸರಾಜ್ ಜ್ಯೋತಿ ನಗರದ ಅಕ್ಕಪಕ್ಕದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.ಪರಿಚಯಸ್ತರಾಗಿದ್ದ ಇವರಿಬ್ಬರ ನಡುವೆ ಪ್ರೀತಿ ಉಂಟಾಗಿದ್ದು ಅದೇ ವಿಷಯವಾಗಿ ಬೆಳಿಗ್ಗೆ 11ರ ವೇಳೆ ನಡೆದ ಜಗಳದಲ್ಲಿ ಈ ಕೃತ್ಯ ನಡೆದಿದ್ದು ಇಬ್ಬರು ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ದಾಖಲಿಸಿರುವ ಚಂದ್ರಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಕಲ್ಲಪ್ಪ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








