6 ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ಸಾಧನೆ ಅತ್ಯಂತ ಕಳಪೆ : ಬಿ ಎಸ್ ವೈ

ಬೆಂಗಳೂರು

          ರಾಜ್ಯದ ಸಮ್ಮಿಶ್ರ ಸರ್ಕಾರದ 6 ತಿಂಗಳ ಸಾಧನೆ ಕಳಪೆಯಾಗಿದ್ದು, ಪ್ರಗತಿ ಕುಂಠಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಇಂದಿಲ್ಲಿ ಟೀಕಿಸಿದ್ದಾರೆ.

        ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಗತಿ ಕುಂಠಿತವಾಗಿದೆ. ಬಜೆಟ್‍ನಲ್ಲಿ ಒದಗಿಸಲಾಗಿದ್ದ ಅನುದಾನದ ಪೈಕಿ ಶೇ. 39ರಷ್ಟು ಅನುದಾನ ಮಾತ್ರ ಬಳಕೆಯಾಗಿದೆ. ಇದರಲ್ಲಿ ಯೋಜನಾ ವೆಚ್ಚ ಎಷ್ಟು, ಯೋಜನೇತರ ವೆಚ್ಚ ಎಷ್ಟು ಎಂಬ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

         ಹಣಕಾಸಿನ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದರೂ ಇದುವರೆಗೂ ಹಣಕಾಸಿನ ಹೊಣೆ ಹೊತ್ತ ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಿಲ್ಲ ಎಂದು ದೂರಿದರು.

          ಬರ ನಿರ್ವಹಣಾ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ರೈತರನ್ನು ಗೂಂಡಾಗಳೆಂದು ಕರೆದು ಮಹಿಳೆಯರ ಬಗ್ಗೆಯೂ ಅಪಮಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಯಾವುದರ ಬಗ್ಗೆಯೂ ವಿಶ್ವಾಸವಿಲ್ಲ. ಸುಳ್ಳು ಭರವಸೆ ನೀಡುವುದರಲ್ಲೇ ಕಾಲಕಳೆಯುತ್ತಿದ್ದಾರೆ ಎಂದು ಹರಿಹಾಯ್ದರು.

        ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿಲ್ಲ. ಅಮೃತ್ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ಸ್ವಚ್ಛ ಭಾರತ್ ಹೀಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಬರುವ ಯೋಜನೆಗಳಲ್ಲೂ ಅನುದಾನ ಸದ್ಬಳಕೆಯಾಗಿಲ್ಲ ಎಂದವರು ಟೀಕಿಸಿದರು.

        ರೈತರಿಗೆ ಬಹಳ ಮುಖ್ಯವಾದ ಸೂಕ್ಷ್ಮ ನೀರಾವರಿ, ಆರ್ಕೆವಿವೈನಲ್ಲಿ ಕಳಪೆ ಸಾಧನೆ ಇದೆ. ಕೌಶಲ್ಯಾಭಿವೃದ್ಧಿ ಅನುದಾನವನ್ನೂ ಸರಿಯಾಗಿ ಬಳಸಿಲ್ಲ. ಅಂಗನವಾಡಿ ಮೂಲಸೌಕರ್ಯಕ್ಕೆ ಒದಗಿಸಿರುವ 118 ಕೋಟಿ ರೂ.ಖರ್ಚೆ ಆಗಿಲ್ಲ. ಸ್ತ್ರೀಶಕ್ತಿ ಮತ್ತು ವಿಕಲಚೇತನರ ನೆರವು ಯೋಜನೆಗಳಲ್ಲೂ ಕಳಪೆ ಸಾಧನೆಯಾಗಿದೆ ಎಂದು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು.

        ರಾಜ್ಯದ ಕಳೆದ 6 ತಿಂಗಳಲ್ಲಿ ಸರ್ಕಾರ ಕಳಪೆ ಸಾಧನೆ ಮಾಡಿದೆ. ಪ್ರಮುಖ ಇಲಾಖೆಗಳಾದ ಸಣ್ಣ ನೀರಾವರಿ ಇಲಾಖೆಯಲ್ಲಿ ಶೇ. 29, ಹಿಂದುಳಿದ ವರ್ಗಗಳಲ್ಲಿ ಶೇ. 26, ಸಮಾಜ ಕಲ್ಯಾಣ ಇಲಾಖೆ ಶೇ. 24, ಲೋಕೋಪೆÇೀಯೋಗಿ ಇಲಾಖೆ ಶೇ. 24, ಪರಿಶಿಷ್ಟ ವರ್ಗಗಳ ಇಲಾಖೆ ಶೇ. 17, ಕಂದಾಯ ಇಲಾಖೆ ಶೇ. 15, ಈ ರೀತಿ ಕಳಪೆ ಸಾಧನೆಯಾಗಿದೆ. ಪರಿಶಿಷ್ಟ ಜಾತಿ, ವರ್ಗ ಗಿರಿಜನರ ಉಪಯೋಜನೆಯಡಿಯೂ ಪ್ರಗತಿ ನಿರಾಶಾದಾಯಕವಾಗಿದೆ ಎಂದರು.       

        ಪರಿಶಿಷ್ಟ ಜಾತಿ, ವರ್ಗದ ಯೋಜನೆಗಳ ಜಾರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೂನ್ಯ ಸಾಧನೆ ಮಾಡಿದ್ದರೆ, ಗಿರಿಜನರ ಉಪಯೋಜನೆಯಡಿ ವಾಣಿಜ್ಯ ಕೈಗಾರಿಕಾ ಇಲಾಖೆ ಶೇ. 1ರಷ್ಟು ಸಾಧನೆ ಮಾಡಿದೆ. ಎಲ್ಲ ಇಲಾಖೆಗಳ ಹಣೆಬರಹ ಇದೇ ರೀತಿ ಇದೆ ಎಂದು ಅವರು ಹೇಳಿದರು.

       ಬೆಳಗಾವಿಯಲ್ಲಿ ಮುಂದಿನ ತಿಂಗಳ 10 ರಿಂದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲೂ ಈ ವಿಚಾರ ಪ್ರಸ್ತಾಪಿಸುತ್ತೇವೆ, ರೈತರ ಸಮಸ್ಯೆಗಳು ಪರಿಹಾರವಾಗಿಲ್ಲ, ಸಾಲಮನ್ನಾದ ಹಣ ಸಹಕಾರಿ ಬ್ಯಾಂಕುಗಳಿಗೆ ತಲುಪಿಲ್ಲ. ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾದ ಹಣವೇ ಇನ್ನು ಬಾಕಿ ಇದೆ. ಸಹಕಾರಿ ಬ್ಯಾಂಕುಗಳಿಗೆ ಸುಮಾರು 500 ಕೋಟಿಯಷ್ಟು ಬಡ್ಡಿ ಬಾಕಿಯನ್ನು ಸರ್ಕಾರ ಉಳಿಸಿಕೊಂಡಿದೆ ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap