ದಾವಣಗೆರೆ:
ಬೆಂಗಳೂರಿನ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‍ನಲ್ಲಿ ನಡೆದ ಶಾಸಕರ ಮಾರಾಮಾರಿ ಪ್ರಕರಣದ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದ, ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಭಾರತೀಯ ಜನ ಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ರಾಷ್ಟ್ರಪತಿ, ಅಟಾರ್ನಿ ಜನರಲ್ ಆಫ್ ಇಂಡಿಯಾ ಹಾಗೂ ರಾಜ್ಯಪಾಲರಿಗೆ ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಹರೀಶ ಹಳ್ಳಿ ದೂರು ನೀಡಿದ್ದಾರೆ.
ರೆಸಾರ್ಟ್‍ನಲ್ಲಿ ನಡೆದ ಶಾಸಕರ ಗಲಾಟೆ, ಹಲ್ಲೆಯಂತಹ ಗಂಭೀರ ಪ್ರಕರಣದ ಬಗ್ಗೆ ಗೃಹ ಸಚಿವರಂತಹ ಜವಾಬ್ಧಾರಿಯುತ ಸ್ಥಾನದಲ್ಲಿರುವ ಎಂ.ಬಿ.ಪಾಟೀಲ್ ಸುಳ್ಳು ಹೇಳಿಕೆ ನೀಡುವ ಮೂಲಕ ಆನಂದ್ ಸಿಂಗ್ ಹಾಗೂ ಗಣೇಶ ಗಲಾಟೆಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ಹರೀಶ್ ಹಳ್ಳಿ ರಾಷ್ಟ್ರಪತಿ, ಅಟಾರ್ನಿ ಜನರಲ್ ಆಫ್ ಇಂಡಿಯಾ ಹಾಗೂ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಗೃಹ ಇಲಾಖೆಯಂತಹ ಜವಾಬ್ದಾರಿಯುತ ಖಾತೆ ವಹಿಸಿಕೊಂಡಿರುವ ಎಂ.ಬಿ.ಪಾಟೀಲ್‍ರ ಸಚಿವ ಸ್ಥಾನ, ಶಾಸಕತ್ವ ರದ್ದುಪಡಿಸುವ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಸಹ ದಾಖಲಿಸಬೇಕು. ಶಾಸಕರಾದ ಆನಂದ್ ಸಿಂಗ್ ಮೇಲೆ ಗಣೇಶ್ ಗಂಭೀರ ಹಲ್ಲೆ ಮಾಡಿದ್ದರೂ ಅದನ್ನು ನಿರಾಕರಿಸಿದ ಎಂ.ಬಿ.ಪಾಟೀಲ ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆ ನೀಡಿರುವುದು ಖಂಡನಾರ್ಹ ಎಂದು ದೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು ಈಗಲ್ಟನ್ ರೆಸಾರ್ಟ್‍ನಲ್ಲಿ ಶಾಸಕರಾದ ಆನಂದ್ ಸಿಂಗ್, ಗಣೇಶ್ ಗಲಾಟೆ ಸಂಬಂಧ ಜವಾಬ್ಧಾರಿಯುತ ಗೃಹ ಸಚಿವ ಖಾತೆ ನಿರ್ವಹಿಸುವ ಎಂ.ಬಿ.ಪಾಟೀಲ್ ಸುಳ್ಳು ಹೇಳಿಕೆ ನೀಡುವ ಮೂಲಕ ಗಲಾಟೆಯನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಮಾರಣಾಂತಿಕವಾಗಿ ಆನಂದ್‍ಸಿಂಗ್ ಮೇಲೆ ಗಣೇಶ್ ಹಲ್ಲೆ ಮಾಡಿ, ತೀವ್ರ ರಕ್ತಗಾಯಗೊಳಿಸಿದ್ದರೂ ಪ್ರಕರಣ ಮುಚ್ಚಿ ಹಾಕಲು ಆನಂದ್ ಸಿಂಗ್‍ಗೆ ಹೃದಯಾಘಾತವಾಗಿತ್ತು ಎಂಬುದಾಗಿ ಪಾಟೀಲ್ ಸುಳ್ಳು ಹೇಳಿಕೆ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ರೆಸಾರ್ಟ್‍ನಲ್ಲಿ ಅಂದು ಹರಿಹರ ಶಾಸಕ ಎಸ್.ರಾಮಪ್ಪ ತಾವೂ ಹಾಗೂ ಇತರೆ ಶಾಸಕರು ಗಲಾಟೆಯನ್ನು ಬಿಡಿಸದೇ ಹೋಗಿದ್ದರೆ ದೊಡ್ಡ ಅನಾಹುತವೇ ಸ್ಥಳದಲ್ಲಿ ನಡೆದಿರುತ್ತಿತ್ತು ಎಂಬುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಮತ್ತೊಬ್ಬ ಶಾಸಕ ಗಣೇಶ್
ರೆಸಾರ್ಟ್‍ನಿಂದ ತಪ್ಪಿಸಿಕೊಂಡು ಹೋಗಲು ಗೃಹ ಸಚಿವರೇ ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ತಕ್ಷಣವೇ ಎಂ.ಬಿ.ಪಾಟೀಲ್ ಅವರ ಸಚಿವ, ಶಾಸಕ ಸ್ಥಾನದ ಸದಸ್ಯತ್ವ ರದ್ಧುಗೊಳಿಸಬೇಕು ಎಂದು ಹರೀಶ್ ಹಳ್ಳಿ ಒತ್ತಾಯಿಸಿದ್ದಾರೆ.
ಶಾಸಕ ಸಿಂಗ್ ಮೇಲಿನ ಮಾರಣಾಂತಿಕ ಹಲ್ಲೆ ವಿಚಾರ ಮುಚ್ಚಿಟ್ಟು, ಆರೋಪಿ ಶಾಸಕನ ರಕ್ಷಣೆಗೆ ಸಚಿವ ಪಾಟೀಲ್ ಯತ್ನಿಸಿದ್ದು ಸರಿಯಲ್ಲ. ಆರೋಪಿ ಗಣೇಶ ತಪ್ಪಿಸಿಕೊಳ್ಳಲು ಗೃಹ ಸಚಿವ ಪಾಟೀಲ್ ಅವರೇ ನೇರ ಹೊಣೆಯೆಂದು ಉಲ್ಲೇಖಿಸಲಾಗಿದೆ. ಭಾರತೀಯ ಜನಪ್ರತಿನಿಧಿ ಕಾಯ್ದೆ 1951ರ ಉಪ ಕಾಯ್ದೆ 8/ಎ ಸಂಪೂರ್ಣ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್‍ಗೆ ಗೃಹ ಸಚಿವ ಸ್ಥಾನ, ಶಾಸಕತ್ವ ರದ್ದುಪಡಿಬೇಕು. ಪಾಟೀಲ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಮಾರಣಾಂತಿಕ ಹಲ್ಲೆ, ಕೊಲೆ ಯತ್ನಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿಸುವಂತೆಯೂ ರಾಷ್ಟ್ರಪತಿ ಅವರಲ್ಲಿ ಹರೀಶ ಹಳ್ಳಿ ಮನವಿ ಮಾಡಿದ್ದಾರೆ.