ಚಿತ್ರದುರ್ಗ
ಮಕ್ಕಳನ್ನ ಪೋಷಕರು ಸರಿಯಾಗಿ ಗಮನ ನೀಡಿ, ಹಾರೈಕೆ ಮಾಡಿದರೆ, ಮಕ್ಕಳ ಮನಸ್ಸು ದುಶ್ಛಟಗಳಿಗೆ, ಮಾದಕ ವಸ್ತುಗಳಿಗೆ ಬಲಿಯಾಗುವ ಸಂಭವ ಕಡಿಮೆಯಿರುತ್ತದೆ. ಸಮಾಜದಲ್ಲಿ ಉತ್ತಮ ಪ್ರಜೆಗಳ ಸಂಖ್ಯೆ ಹೆಚ್ಚಾಗಲು ಸಹಾಯಕವಾಗುತ್ತದೆ ಎಂದು ಡಾ|| ಕೆ.ಕೆ. ಕಾಮಾನಿ ತಿಳಿಸಿದರು.
ಅವರು ನಗರದ ಡಿ.ಸಿ. ವೃತ್ತದಲ್ಲಿ ವಿಜ್ಞಾನ ಕೇಂದ್ರ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ರೋಟರಿ ವಿದ್ಯಾಲಯ, ಪರಿಸರ ತಂಡ ಸಂಯುಕ್ತವಾಗಿ ಆಯೋಜಿದ್ದ, ಅಂತರ್ ರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಮತ್ತು ಅಂತಹ ವಸ್ತುಗಳ ಕಳ್ಳ ಸಾಗಣಿಕೆ ತಡೆ ದಿನಾಚರಣೆ ಬಗ್ಗೆ ಆಯೋಜಿಸಿದ್ದ ಜನ ಜಾಗೃತಿ ಜಾಥಾ ಕಾರ್ಯಕ್ರದಲ್ಲಿ ಮಾತನಾಡುತ್ತಿದ್ದರು.
ಪರಿಸರದ ನಿಯಮಗಳ ಪ್ರಕಾರ ಯಾವುದೇ ವಸ್ತುವನ್ನ ಪ್ರತಿ ಬಾರಿ ತೆಗೆದು ಕೊಂಡರೆ ಮಾತ್ರ ಬದುಕಬಲ್ಲೆ ಎಂದರೆ ಅದು ಚಟದ ರೂಪವೇ ಆಗಿರುತ್ತದೆ. ದುಶ್ಚಟಗಳು ಸಹ ಹಾಗೆ ಯುವ ಜನಾಂಗವನ್ನ ಹಿಡಿದಿಟ್ಟುಕೊಂಡು ಅವನನ್ನ ನಾಶಮಾಡುವವರೆಗೂ ಬಿಡದೇ ಕಾಡಿಸುತ್ತದೆ. ಅಂತಹ ವಸ್ತುಗಳಾದ ಮದ್ಯಪಾನ, ತಂಬಾಕು, ಮಾದಕ ಪದಾರ್ಥಗಳು ಜನರ ಕೈಯಿಂದ ಬಿಡಿಸುವ ಕೆಲಸವಾಗಬೇಕು. ವ್ಯಸನಿಗಳ ಪುನಃಶ್ಚೇತನದ ಕೆಲಸ ಹೆಚ್ಚಾಗಬೇಕು. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ನೆಡೆವಳಿಕೆ ಬಗ್ಗೆ ಕಾಳಜಿ ಹೊಂದಿರಬೇಕು. ಸರ್ಕಾರದ ಕಾನೂನುಗಳು ಇನ್ನೂ ಹೆಚ್ಚು ಬಿಗಿಯಾಗಿ, ಜನರ ಆರೋಗ್ಯದ ಬಗ್ಗೆ ಯಾರು ಸಹ ಚೆಲ್ಲಾಟವಾಡದಂತೆ ಕ್ರಮ ತೆಗೆದುಕೊಂಡರೆ, ಈ ಮಾದಕ ವಸ್ತುಗಳನ್ನ ಜನರ ಕೈಗೆ ಸಿದಗಂತೆ ತಡೆಯಬಹುದು ಎಂದರು.
ಪರಿಸರವಾದಿ ಡಾ|| ಹೆಚ್.ಕೆ.ಎಸ್. ಸ್ವಾಮಿ ಮಾತನಾಡಿ, ಯುವ ಜನಾಂಗದ ಮೇಲೆ ಒತ್ತಡ ಹೆಚ್ಚಾಗಿ ದುಶ್ಚಟಗಳ ದಾಸರಾಗುತ್ತಿದ್ದಾರೆ, ಸುಖ, ಸಂತೋಷ ಎರಡರಲ್ಲೂ ಮಾದಕ ವಸ್ತುಗಳು ಜನರ ಮೇಲೆ ಹಿಡಿತ ಸಾದಿಸುತ್ತಿವೆ. ಅವುಗಳನ್ನ ನಿಗ್ರಹಿಸುವ ಶಕ್ತಿ ಇಲ್ಲದವರು ದಾಸರಾಗಿ ಜೀವನ ಕಳೆದುಕೊಳ್ಳುತ್ತಾರೆ. ಮದ್ಯ, ತಂಬಾಕು, ಗುಟ್ಕ, ಮಾದಕ ವಸ್ತುಗಳಾದ ಮಾರ್ಫಿನ್, ಕೊಕೈನ್, ಮಾರಿಯೂನ ಮುಂತಾದ ವಸ್ತಗಳು ಜನರಿಗೆ ಸುಲಭವಾಗಿ ಸಿಗುವಂತಾಗಿದೆ. ಅದನ್ನ ನಾವು ತಡೆಯದಿದ್ದರೆ ನಮ್ಮ ಸಮಾಜವನ್ನ ನಾವು ರಕ್ಷಿಸಿಕೊಳ್ಳಲಾರೆವು ಎಂದರು.
ಆರ್ಥಿಕ ಅಭಿವೃದ್ಧಿಯ ಜೊತೆಗೆ ಇಂತಹ ವಸ್ತುಗಳು ಸಹ ಜನರ ಜೀವನದಲ್ಲಿ ಬಂದು ನಿಲ್ಲುತ್ತವೆ. ಒತ್ತಡದ ಕೆಲಸಗಳು ಹೆಚ್ಚಾಗಿ ಜನರ ಬದುಕು ಕಷ್ಟಕರವಾಗಿದೆ. ಕೆಳ ಹಂತದ ಕೆಲಸಗಾರನಿಂದ ಇಡಿದು ಮೇಲಿನ ಅಧಿಕಾರಿಗಳವರೆಗೂ ಮಾದಕ ವಸ್ತುಗಳು, ದುಶ್ಚಟಗಳು ಆವರಿಸಿವೆ. ಅವರ ಮನ ಪರಿವರ್ತನೆಗೆ ಜನ ಜಾಗೃತಿ ಕಾರ್ಯಕ್ರಮ ಹೆಚ್ಚಾಗಬೇಕು, ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಶಿಕ್ಷಣವೂ ಬೇಕು ಎಂದರು.
ರೋಟರಿ ಸಂಸ್ಥೆ ವ್ಯಸ್ಥಾಪಕರಾದ ಪಾಷಾ, ಸ.ಶಿ. ಉಮೇಶ್, ಸಂದ್ಯಾ, ನವೀನ, ವಿಜ್ಞಾನ ಕೇಂದ್ರದ ನವೀನ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಹ ಕಾರ್ಯದರ್ಶಿ ಮಹಂತೇಶ್, ಕಲ್ಲೇಶ್, ಕೆ.ಎಂ. ಗಣೇಶಯ್ಯ, ಸಹ ನಿರ್ದೇಶಕರು, ಶ್ರೀ ಶಶಿಧರ್, ಲಿಟ್ಲಕಿಡ್ಸ್, ಸರ್ಕಾರಿ ಬಾಲಕರ ಪದವಿ ಪೂರ್ವ ವಿದ್ಯಾರ್ಥಿಗಳು, ರೋಟರಿ ಸಂಸ್ಥೆ ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ಧ ಘೋಷಣೆಗಳನ್ನ ಕೂಗಿ, ಮಾನವ ಸರಪಳಿ ನಿರ್ಮಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.