ಕೊಟ್ಟೂರು:
ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಬಸವ ಮಾಚಿದೇವ ಮಹಾ ಸ್ವಾಮಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಜನವರಿ 5, 6ರಂದು ನಡೆಯಲಿರುವ ಮಾಚಿದೇವ ಮಹಾ ಸಂಸ್ಥಾನ ಮಠದ ಶಂಕುಸ್ಥಾಪನೆ ಹಾಗೂ ಶ್ರೀಬಸವ ಮಾಚಿದೇವ ಮಹಾ ಸ್ವಾಮಿಗಳ ಪಟ್ಟಾಧಿಕಾರದ ನಿಮಿತ್ತ ಸಮಾಜದವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೊಟ್ಟೂರಿಗೆ ಶುಕ್ರವಾರ ಆಗಮಿಸಿದ್ದರು
.
ಪಟ್ಟಣದ ಮಡಿವಾಳ ಮಾಚಿದೇವ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಸರ್ಕಾರ ಸಮಾಜದ ಅಭಿವೃದ್ದಿ ದೃಷ್ಟಿಯಿಂದ ಮಡಿವಾಳ ಅಭಿವೃದ್ದಿ ನಿಗಮ ಸ್ಥಾಪಿಸಬೆಕೇಂದು ಆಗ್ರಹಪಡಿಸಿದರು.
ಸರ್ಕಾರ ರಾಜ್ಯದಲ್ಲಿ ಅತಿ ಕಡಿಮೆ ಜನ ಸಂಖ್ಯೆ ಹೊಂದಿದ ಸಮಾಜವೆಂದು ಕಡೆಗಣಿಸಬಾರದು. ತಾಲೂಕು ಮಡಿವಾಳ ಸಮಾಜಕ್ಕೆ ಸಮುದಾಯವನ್ನು ಮಂಜೂರು ಮಾಡಬೇಕು ಎಂದು ಹೇಳೀದರು.
ಸಮಾಜದ ಮುಖಂಡ ಹಾರಾಳು ಅಶೋಕ, ಚಳಿಗಾಲದ ಅಧಿವೇಶನದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಆವರು, ಮಡಿವಾಳ ಸಮಾಜವನ್ನು ಎಸ್.ಸಿ. ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಹಿರಿಯರು ಎಲ್ಲಾರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








