ಮಡಿವಾಳ ಮಹಾ ಸಮ್ಮೇಳನ ಸಿದ್ದತೆ ವೀಕ್ಷಣೆ

ಚಿತ್ರದುರ್ಗ:

          ದಾವಣಗೆರೆ ರಸ್ತೆಯಲ್ಲಿರುವ ಜಗದ್ಗುರು ಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಜ.6 ರಂದು ನಡೆಯಲಿರುವ ಬಸವಮಾಚಿದೇವ ಮಹಾಸ್ವಾಮಿಗಳವರ ಪಟ್ಟಾಧಿಕಾರ ಮಹೋತ್ಸವ ಹಾಗೂ ಮಡಿವಾಳ ಜನಾಂಗದ ಜಾಗೃತಿ ಮಹಾಸಮ್ಮೇಳನದ ಸಿದ್ದತೆಯನ್ನು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಶುಕ್ರವಾರ ವೀಕ್ಷಿಸಿದರು.

           ಮಡಿವಾಳ ಜನಾಂಗದ ಜಾಗೃತಿ ಮಹಾಸಮ್ಮೇಳನಕ್ಕಾಗಿ ಸಿದ್ದಪಡಿಸಲಾಗುತ್ತಿರುವ ಬೃಹತ್ ಪೆಂಡಾಲ್ ವೀಕ್ಷಿಸಿದ ಶರಣರು ದಾಸೋಹಕ್ಕೆ ಸಂಗ್ರಹಿಸಿರುವ ಆಹಾರ ಧಾನ್ಯಗಳ ಕೊಠಡಿಗೂ ತೆರಳಿ ಅಲ್ಲಿನ ತಯಾರಿಗಳನ್ನು ಕಂಡು ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಾಗ್ರತೆ ವಹಿಸುವಂತೆ ಬಸವಮಾಚಿದೇವ ಮಹಾಸ್ವಾಮಿಗಳಿಗೆ ತಿಳಿಸಿದರು.ಕಳೆದ ನಾಲ್ಕೈದು ದಿನಗಳಿಂದಲೂ ರಭಸವಾಗಿ ಗಾಳಿ ಬೀಸುತ್ತಿರುವುದರಿಂದ ವೇದಿಕೆ ಹಾಗೂ ಶಾಮಿಯಾನ ಭದ್ರವಾಗಿರಲಿ ಎಂದು ಶರಣರು ಅಲ್ಲಿನ ವ್ಯವಸ್ಥಾಕರಿಗೆ ಸೂಚಿಸಿದರು.

          ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಟಿ.ರಮೇಶ್, ಮಡಿವಾಳ ಜನಾಂಗದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಿಜಯಲಕ್ಷಿ ಅಂಜಿನಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಇನ್ನಿತರೆ ಕಿರಿಯ ಸ್ವಾಮೀಜಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link