ಚಾಕೊಲೇಟ್ ಬಾಕ್ಸ್ ನಲ್ಲಿ ಹರಿದಾಡಿದ ಹುಳು: ಬೇಕರಿಯವರಿಂದ ಉಡಾಫೆ ಉತ್ತರ..!!

ಮಧುಗಿರಿ:

       ಬೇಕರಿಯಲ್ಲಿ ಮಕ್ಕಳಿಗೆಂದು ಚಾಕಲೆಟ್ ಡಬ್ಬಿ ಖರೀದಿಸಿ ಮನೆಗೆ ಬಂದು ಮಗುವಿಗೆ ನೀಡಲೆಂದು ಚಾಕ್ ಲೆಟ್ ಬಾಕ್ಸ್ ನ್ನು ಓಪನ್ ಮಾಡಿದರೆ ಡಬ್ಬಿಯಿಂದ ಹತ್ತಾರು ಬಿಳಿ ಹುಳುಗಳು ಕೈ ಮೇಲೆ ಹರಿಯಲಾರಂಭಿಸಿದ್ದನ್ನು ನೋಡಿ ಖರೀದಿಸಿದ ವ್ಯಕ್ತಿ ಗಾಬರಿಗೊಂಡಿದ್ದಾರೆ.

        ಪಟ್ಟಣದ ತುಮಕೂರು ರಸ್ತೆಯ ಸಮೀಪವಿರುವ ಬೇಕ್ ಲ್ಯಾಂಡ್ ಬೇಕರಿಯಲ್ಲಿ ಗ್ರಾಹಕ ಕಿಶೋರ್ ತನ್ನ ಸ್ನೇಹಿತನ ಮಗನಿಗಾಗಿ ಕ್ಯಾಡ್ ಬರೀಸ್ ಕಂಪನಿಗೆ ಸೇರಿದ ಡೈರಿ ಮಿಲ್ಕ್‍ನ ಲೀಕಾಬೆಲ್ಸ್‍ಗೆ 40 ರೂ ಕೊಟ್ಟು 8 901233 033235 ಸಂಖ್ಯೆಯ ಚಾಕ್ ಲೇಟ್‍ನ್ನು ಖರೀದಿಸಿದ್ದಾರೆ. ನಂತರ ಮನೆಗೆ ಬಂದು ಇನ್ನೂ ಅವಧಿ ಮೀರದ ಉತ್ಪನ್ನದ ಬಾಕ್ಸ್‍ನ್ನು ತೆಗೆದರೆ ಅದರಲ್ಲಿ ಸಣ್ಣ ಸಣ್ಣ ಹುಳುಗಳು ಲೀಲಾಜಾಲವಾಗಿ ಹರಿದಾಡುತ್ತಿರುವುದು ಕಂಡು ಬಂದಿದೆ.

        ಈ ಸಂಭಂಧ ಹುಳು ತುಂಬಿರುವ ಬಾಕ್ಸ್ ಸಮೇತ ಬೇಕರಿಯ ಮಾಲೀಕರಿಗೆ ನೀಡಿ ವಿಚಾರಿಸಿದರೆ ಇದನ್ನು ನಾನು ತಯಾರು ಮಾಡುವುದಿಲ್ಲ ನಿಮ್ಮ ಹಾಗೆ ನಾನು ಸಹ ದುಡ್ಡುಕೊಟ್ಟು ಶಂಕರ್ ಟಾಕೀಸ್ ರಸ್ತೆಯಲ್ಲಿರುವ ಅನ್ನಪೂರ್ಣ ಏಜೆಸ್ಸಿಯವರಿಂದ ಖರೀದಿಸಿದ್ದೇನೆ ನಿಮ್ಮ ಈ ಸಮಸ್ಯೆಯನ್ನು ನನಗೆ ನೀಡಿರುವ ಏಜೆನ್ಸಿಯವರ ಬಳಿ ಹೇಳಿಕೊಳ್ಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ.

        ಈ ಬಗ್ಗೆ ಬೇಕರಿಗೆ ಸರಬರಾಜು ಮಾಡಿದ ಏಜೆನ್ಸಿಯವರನ್ನು ವಿಚಾರಿಸಿದರೆ ಈ ರೀತಿಯ ಹಲವಾರು ಸಮಸ್ಯೆಗಳು ನಮ್ಮ ಗಮನಕ್ಕೆ ಗ್ರಾಹಕರು ತಂದಿದ್ದು ಸಂಭಂಧಿಸಿದ ಕಂಪನಿಯ ಗಮನಕ್ಕೆ ತರಲಾಗುವುದೆಂದು ಇದರಲ್ಲಿ ನಮ್ಮ ಯಾವುದೇ ಜವಾಬ್ದಾರಿ ಇಲ್ಲವೆಂದು ಅವರ ಮೇಲೆ ಇವರು ಮೇಲೆ ಅವರು ಹೇಳಿಕೊಳ್ಳುತ್ತಾ ಗ್ರಾಹಕರ ಬೇಡಿಕೆಗೆ ಬೆಲೆ ನೀಡುತ್ತಿಲ್ಲ.

         ಪಟ್ಟಣದ ಕೆಲ ಬೇಕರಿಗಳಲ್ಲಿ ಇದೇ ರೀತಿಯ ಹಲವು ಸಿಹಿ ಹಾಗೂ ಮತ್ತಿತರ ಉತ್ಪನ್ನಗಳನ್ನು ಮಾರಾಟವಾಗುತ್ತಿರುವುದು ಸಾಮಾನ್ಯವಾಗಿದ್ದು ಸಾಮಾನ್ಯ ಗ್ರಾಹಕನ ಜೇಬಿಗೆ ಕತ್ತರಿ ಜೊತೆಗೆ ತಮ್ಮ ಮುದ್ದು ಮಕ್ಕಳ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಈಂತಹ ಘಟನೆಗಳ ಬಗ್ಗೆ ಸಂಭಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಇಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.

          ಚಾಕ್ ಲೇಟ್ ತಿನ್ನುವ ಆಸೆಯಿಂದ ಮುಗ್ಧ ಮನಸ್ಸಿನ ಮಕ್ಕಳು ಬರದಲ್ಲಿ ಈ ರೀತಿಯ ಹುಳು ಮಿಶ್ರಿತ ಸೇವನೆ ಮಾಡಿ ಎಷ್ಟು ಹುಳುಗಳನ್ನು ತಮ್ಮ ಹೊಟ್ಟೆಯಲ್ಲಿ ಶೇಖರಣೆ ಮಾಡಿಕೊಂಡಿದ್ದಾರೊ ತಿಳಿಯದಾಗಿದೆ. ಎಲ್ಲವನ್ನು ಎಲ್ಲದರಲ್ಲೂ ಮಾಮಲೂ ವಿಷಯವಾಗಿ ತೆಗೆದುಕೊಂಡಿರುವ ಸಂಭಂಧಿಸಿದ ಅಧಿಕಾರಿಗಳು ಯಾರೇ ಆದರೂ ಮುಂದಾದರೂ ಈ ರೀತಿಯ ಶೇಖರಿಸಿದ ಉತ್ಪನ್ನಗಳ ಬಗ್ಗೆ ಗಮನ ಹರಿಸಿ ಮಕ್ಕಳು ಆಸ್ಪತ್ರೆಯ ಪಾಲಾಗದಂತೆ ಎಚ್ಚರ ವಹಿಸ ಬೇಕಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link