ಮಹಾಘಟಬಂದನದ ಅನೇಕ ನಾಯಕರು ಕೃಷ್ಣನ ಜನ್ಮಸ್ಥಳಕ್ಕೆ – ಪ್ರಭಾಕರ

ತುಮಕೂರು:

       ಮಹಾಘಟಬಂಧನದ ಅನೇಕ ನಾಯಕರು ಲೋಕಸಭಾಚುನಾವಣೆ ಬಳಿಕ ಮಾನಸಿಕವಾಗಿ ಶ್ರೀ ಕೃಷ್ಣನ ಜನ್ಮಸ್ಥಳದಲ್ಲಿ ಖಾಯಂ ಸ್ಥಳ ನಿಗದಿ ಪಡಿಸಿಕೊಂಡಿದ್ದಾರೆ, ಯಾವರಾಜ್ಯದಲ್ಲಿಯಾವ ಸ್ಥಳ ಸೂಕ್ತ ಎಂಬ ಲೆಕ್ಕಾಚಾರದಲ್ಲಿ ಮಹಾಘಟಬಂಧನದ ಕೆಲ ನಾಯಕರುಇದ್ದಾರೆ, ಇನ್ನೂ ಕೆಲವರುಯಾವಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದುಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿಇದ್ದಾರೆಎಂದುಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಪ್ರಭಾಕರ ತಿಳಿಸಿದರು,

        ಇತ್ತೀಚಿಗೆ ಮಧುಗಿರಿತಾಲ್ಲೂಕು ದೊಡ್ಡದಾಳವಾಟಗ್ರಾಮದಲ್ಲಿಕಾರ್ಯಕರ್ತರಿಗೆ ಮತ್ತು ಮತದಾನ ಮಾಡಿದ ಮತದಾರ ಪ್ರಭುಗಳಿಗೆ ಧನ್ಯವಾದ ಸಮರ್ಪಣಾಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಭಾಕರ ಮಾತನಾಡಿದರು,

      ಸಂಖ್ಯಾ ಶಾಸ್ತ್ರದ ಪ್ರಕಾರದೇವೇಗೌಡರ ಸಂಖ್ಯೆ ಇಳಿಮುಖವೇ ಹೊರತುಏರಿಕೆ ಆಗುವ ಸಂಖ್ಯೆಯಲ್ಲಎಲ್ಲ ಅಧಿಕಾರಗಳನ್ನು ಅನುಭವಿಸಿರುವ ದೇವೇಗೌಡರರಾಜಕಾರಣದ ಪರ್ವಇನ್ನು ಮುಗಿದಅಧ್ಯಾಯಇನ್ನೂಏನಿದ್ದರೂದೇಶದಲ್ಲಿ ಮೋದಿ ಪರ್ವರಾಜ್ಯದಲ್ಲಿ ಬಿಜೆಪಿ ಪರ್ವಜಿಲ್ಲೆಯಲ್ಲಿಜಿ,ಎಸ್ ಬಸವರಾಜುಅವರ ಪರ್ವಎಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಪ್ರಭಾಕರ ವ್ಯಾಖ್ಯಾನಿಸಿದರು,

      ತುಮಕೂರು ಲೋಕಸಭೆದೇಶದಲ್ಲೇ ಸದ್ದು ಮಾಡಿದಕ್ಷೇತ್ರಇದರಲ್ಲಿ ನೀರಾವರಿ ಹೋರಾಟಗಾರರುಜಿಲ್ಲೆಯಅಭಿವೃದ್ದಿಗೆ ವೇಗ ನೀಡಿದಉತ್ಸಾಹಿ ನಾಯಕಜಿ,ಎಸ್ ಬಸವರಾಜುಅವರುಒಂದು ಲಕ್ಷ ಮತಗಳ ಅಂತದರಲ್ಲಿಗೆಲ್ಲುವುದು ಸೂರ್ಯಚಂದ್ರರುಇರುವಷ್ಟೇ ಸತ್ಯ ಪ್ರಭಾಕರ ವಿಶ್ವಾಸ ವ್ಯಕ್ತಪಡಿಸಿದರು,

      ಮೋದಿ ಅವರುಕಳೆದ 60 ವರ್ಷಗಳ ಕಾಂಗ್ರೇಸ್ ಪಕ್ಷದುರಾಡಳಿತದ ವಿರುದ್ದ ಹೋರಾಟ ಮಾಡಿದ್ದೂಅಲ್ಲದೆಕಾಂಗ್ರೇಸ್ ಪಕ್ಷ60 ವರ್ಷಗಳ ಕಾಲ ದೇಶವನ್ನು ಬಡತನದ ಕೂಪಕ್ಕೆ ತಳ್ಳಿದ್ದನ್ನು ಸರಿದಾರಿಗೆತರುವಲ್ಲಿ ಯಶಸ್ವಿಯಾಗಿರುವ ನರೇಂದ್ರಮೋದಿ ಅವರು ಮತ್ತೊಮ್ಮೆದೇಶದ ಪ್ರಧಾನಿ ಆಗುವುದನ್ನುತಪ್ಪಿಸಲುಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಭಾಕರ ವಿಶ್ವಾಸ ವ್ಯಕ್ತಪಡಿಸಿದರು,

       ಅಭಿವೃದ್ದಿಯ ಹೊಳೆಯನ್ನೇ ಹರಿಸಿದ್ದ ಕೆ,ಎನ್‍ರಾಜಣ್ಣಅವರನ್ನು ಕಳೆದುಕೊಂಡ ಕ್ಷೇತ್ರಅಕ್ಷರಶಃ ಬಡವಾಗಿದೆ, ಜನರ ಗೋಳು ಕೇಳುವವರೇ ಇಲ್ಲವಾಗಿದೆ, ಒಂದೇಒಂದುಕಚೇರಿಯಲ್ಲಿ ಕೆಲಸಗಳು ಆಗುತ್ತಿಲ್ಲ, ಹಾಲಿ ಶಾಸಕರ ಬಳಿ ಅಹವಾಲು ತೆಗೆದುಕೊಂಡು ಹೋದರೆ ಅಧಿಕಾರಿಗಳು ಇರುವುದೇ ಕೆಲಸ ಮಾಡಿಕೊಡಲುಇಲ್ಲಿಗೆಯಾಕೆ ಬರುವಿರಿಎಂದುಸಬೂಬು ಹೇಳುವಜನಪ್ರತಿನಿಧಿಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಅಗುತ್ತಿಲ್ಲಜನರೆಲ್ಲ ಬೇಸತ್ತಿದ್ದಾರೆಎಂದುಪ್ರಭಾಕರ ತಿಳಿಸಿದರು,

      ರಾಜ್ಯದಲ್ಲಿಆಂತರಿಕಕಚ್ಚಾಟದಿಂದರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಖಚಿತಇವೆರಡೂ ಪಕ್ಷಗಳ ನಾಯಕರು ಹಾವು ಮುಂಗಿಸಿ ತರಇದ್ದುಆಂತರಿಕ ಬೇಗುದಿ ತೀವ್ರವಾಗಿದೆ, ಲೋಕಸಭೆ ಫಲಿತಾಂಶದ ನಂತರಎಷ್ಟು ಗಂಟೆಗಳ ಸರ್ಕಾರಎಂದು ಕೇಳುವ ಸ್ಥಿತಿ ನಿರ್ಮಾಣಆಗಲಿದೆ, ಸರ್ಕಾರ ಪತನವಾಗುವುದಂತುಖಚಿತಎಂದು ಪ್ರಭಾಕರ ತಿಳಿಸಿದರು,

      ದೇಶದಲ್ಲಿ ಸ್ವಯಂಪ್ರೇರಿತರಾಗಿದೇಶಕ್ಕಾಗಿ ಮೊದಿಗೆ ಮತ ನೀಡುತ್ತಿರುವ ಉದಾಹರಣೆಗಳು ಇವೆ, ಇತ್ತೀಚಿಗೆ ನಾನು ಬಳ್ಳಾರಿ ಲೋಕಸಭಾಕ್ಷೇತ್ರದಲ್ಲಿ ಕೆಲಸ ಮಾಡಲು ಹೋದಾಗ ಸ್ವಯಂಪ್ರೇರಿತರಾಗಿಕರಪತ್ರ ಕೇಳಿ ಬಿಜೆಪಿ ಕ್ರಮಾಂಕ ಎಷ್ಟು? ಸ್ವಾಮಿ ನಾವೆಲ್ಲ ಬಿಜೆಪಿಗೆ ಮತ ನೀಡುತ್ತೇವೆಎಂದು ಕೇಳಿದ್ದು ಕಣ್ಣಾರೆಕಂಡೆಇದೇ ವಾತವಾರಣಇಡೀದೇಶದಲ್ಲಿಇದೆಎಂದು ಪ್ರಭಾಕರ ತಿಳಿಸಿದರು,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link