ದಾವಣಗೆರೆ:
ಶ್ರೀಭಗವಾನ್ ಮಹಾವೀರ ಜನ್ಮ ಕಲ್ಯಾಣ ಆಚರಣೆಯ ಪ್ರಯುಕ್ತ ನಗರದಲ್ಲಿ ಬುಧವಾರ ಶ್ರೀಮಹಾವೀರ ಯುವ ಮಂಚ್ ಆಶ್ರಯದಲ್ಲಿ ಜೈನ ಸಮಾಜ ಬಾಂಧವರು ಬೃಹತ್ ಮೆರವಣಿಗೆ ನಡೆಸಿದರು.ನಗರದ ನರಸರಾಜ ರಸ್ತೆಯಲ್ಲಿರುವ ಶ್ರೀಪಾಶ್ರ್ವನಾಥ ಜಿನ ಮಂದಿರದಿಂದ ಆರಂಭವಾದ ಮೆರವಣಿಗೆಯು ದೇವನಗರಿಯ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ಮುಕ್ತಾಯವಾಯಿತು.ಸಂಜೆ ಮಹಾವೀರ ತೀರ್ಥಂಕರ ಬಾಲ ಲೀಲೋತ್ಸವ ಹಾಗೂ ನಾಮಕರಣದ ತೊಟ್ಟಿಲು ಕಾರ್ಯಕ್ರಮ ನೆರವೇರಿತು.