ಚಿತ್ರದುರ್ಗ:
ಜೂನ್ 10 ರ ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ 53 ನೇ ಹುಟ್ಟುಹಬ್ಬದ ಅಂಗವಾಗಿ ಕೋಟೆ ನಾಡು, ಕಲ್ಲಿನಕೋಟೆ ಐತಿಹಾಸಿಕ ಚಿತ್ರದುರ್ಗದ ಕರವೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾಜಾನು ತಮ್ಮ ಸ್ವಂತ ಖರ್ಚಿನಿಂದ ಒಂದುವರೆ ಅಡಿ ಎತ್ತರದ ಟಿ.ಎ.ನಾರಾಯಣಗೌಡರ ಪ್ರತಿಮೆಯನ್ನು ಹುಟ್ಟುಹಬ್ಬದ ದಿನವಾದ ಸೋಮವಾರ ಬೆಂಗಳೂರಿನಲ್ಲಿ ಟಿ.ಎ.ನಾರಾಯಣಗೌಡರಿಗೆ ಕೊಡುಗೆಯಾಗಿ ನೀಡಿ ಜನ್ಮದಿನದ ಶುಭಾಷಯ ಕೋರುವರು.
ಟಿ.ಎ.ನಾರಾಯಣಗೌಡರಿಗೆ ಅವರ ಪ್ರತಿಮೆಯನ್ನು ನೀಡುವ ಮುನ್ನ ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿಗಳಿಗೆ ಟಿ.ಎ.ನಾರಾಯಣಗೌಡರ ಪ್ರತಿಮೆಯನ್ನು ತೋರಿಸಿ ರೇಣುಕಾಜಾನು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಲಿಂಗಾನಂದಸ್ವಾಮಿಗಳು ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಉಳಿವಿಗಾಗಿ ಹೋರಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರವರಿಗೆ ಚಿತ್ರದುರ್ಗದ ರೇಣುಕಾಜಾನು ಪ್ರತಿಮೆಯನ್ನು ನೀಡುತ್ತಿರುವುದು ಸಂತೋಷದ ಸಂಗತಿ. ಹೋರಾಟಗಾರರಿಗೆ ಪ್ರತಿಯೊಬ್ಬರ ಬೆಂಬಲ ಪ್ರೋತ್ಸಾಹವಿರಬೇಕು. ನೂರನೇ ಜನ್ಮದಿನವನ್ನು ಅವರು ಆಚರಿಸಿಕೊಳ್ಳುವಂತೆ ಭಗವಂತ ಅವರಿಗೆ ಆರೋಗ್ಯ, ಐಶ್ವರ್ಯ ನೀಡಲಿ ಎಂದು ಹಾರೈಸಿದರು.ಮಂಜುನಾಥ ಗುಪ್ತ, ನಂಜುಂಡಿ ಈ ಸಂದರ್ಭದಲ್ಲಿ ಹಾಜರಿದ್ದರು.