ಕೊರೋನಾ ಸಂಚಾರಿ ಘಟಕಗಳಾಗಿರುವ ಮನೆ ಕೆಲಸದವರು..!

ಬೆಂಗಳೂರು

    ಮನೆ ಕೆಲಸಕ್ಕೆ ಬರುವವರು ಕೊರೋನಾ ವೈರಸ್ ಹರಡುವ ಪ್ರಮುಖ ಕೊಂಡಿಯಾಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಆರೋಗ್ಯ ಇಲಾಖೆಯ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಮನೆ ಕೆಲಸಕ್ಕೆ ಎಂದು ಬರುವವರು ಕೊರೋನಾ ಹರಡುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದಿವೆ.

    ಲಾಕ್ ಡೌನ್ ಘೋಷಣೆಯಾದ ನಂತರ ಕೆಲ ದಿನಗಳ ಕಾಲ ಮನೆ ಕೆಲಸದವರಿಗೆ ರಜೆ ನೀಡಿದ್ದ ರಾಜಧಾನಿ ಬೆಂಗಳೂರು ಮತ್ತಿತರ ಪ್ರದೇಶಗಳ ಉಳ್ಳವರು ಮತ್ತೆ ತರಾತುರಿಯಲ್ಲಿ ಮನೆ ಕೆಲಸದವರನ್ನು ಕರೆಸಿಕೊಳ್ಳುತ್ತಿದ್ದಾರೆ.ಮನೆ ಕೆಲಸ ಮಾಡುವವರೂ ಒಂದೇ ದಿನ ಹಲ ಮನೆಗಳಿಗೆ ಹೋಗಿ ಕೆಲಸ ಮಾಡಿ ಬರುತ್ತಿರುವುದು ಈಗ ಕೊರೋನಾ ಹಬ್ಬಲು ಸಹಾಯವಾಗುತ್ತಿದೆ.

    ಮನೆ ಕೆಲಸದವರಿಗೆ ಫುಡ್ ಕಿಟ್ ನೀಡುವುದೂ ಸೇರಿದಂತೆ ಹಲ ಸಹಾಯ ನೀಡಲು ಆಯಾ ಪ್ರದೇಶಗಳ ಜನಪ್ರತಿನಿಧಿಗಳು,ಸಂಘ ಸಂಸ್ಥೆಗಳು ತಯಾರಿದ್ದರೂ ಆಧುನಿಕ ಜೀವನ ಶೈಲಿಗೆ ಒಗ್ಗಿದವರು ಕೆಲಸದವರನ್ನು ದುಡಿಸಿಕೊಳ್ಳುವುದು ಅನಿವಾರ್ಯ ಎಂಬಂತೆ ವ್ಯವಹರಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.

    ಮನೆ ಕೆಲಸದವರೂ ಈಗ ಸಂಚಾರಿ ಕೊರೋನಾ ಘಟಕಗಳಂತಾಗಿದ್ದು ಮುಂದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಲಿದ್ದಾರೆ.ಹೀಗಾಗಿ ಮನೆ ಕೆಲಸಕ್ಕೆ ಎಂದು ನೇಮಕ ಮಾಡಿಕೊಳ್ಳುವವರು ಈ ವಿಷಯದಲ್ಲಿ ತತ್ಕಾಲಕ್ಕಾದರೂ ಸುಮ್ಮನಿರದಿದ್ದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಇಲಾಖೆಯ ಮುಖ್ಯಸ್ಥರಿಗೆ ಶಿಫಾರಸು ಮಾಡಿರುವುದಾಗಿ ಈ ಮೂಲಗಳು ಹೇಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link