ತಿಪಟೂರು : ಸಮಾಜಿಕ ಅಂತರ ಕಾಯ್ದುಕೊಳ್ಳಿ : ಎಸ್ ಪಿ

ತಿಪಟೂರು :

       ಕೋವಿಡ್-19 ರ ಬಗ್ಗೆ ಮುನ್ನೆಚ್ಚರಿಕೆ, ಸಾಮಾಜಿಕ ಅಂತರ ಕಾಯ್ದುಕೂಳ್ಳಿ, ಗುಂಪು ಗುಂಪಾಗಿ ಓಡಾಡಬೇಡಿ, ಆದಷ್ಟು ವಾಹನ ಬಳಕೆ ಕಡಿಮೆ ಮಾಡಿ ಎಂದು ತಿಪಟೂರಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಂಶಿ ಕೃಷ್ಣರವರು ಮುಸ್ಲಿಮರಲ್ಲಿ ಮನವಿ ಮಾಡಿದರು.

      ತಿಪಟೂರು ನಗರಕ್ಕೆ ಭೇಟಿ ನೀಡಿದ ಅವರು ಕೋವಿಡ್-19 ರ ಬಗ್ಗೆ ಮುನ್ನೆಚ್ಚರಿಕೆ ಇರಲಿ ಭಯ ಬೇಡ, ಗುಂಪಾಗಿ ಓಡಾಡಬೇಡಿ ಆದಷ್ಟು ವಾಹನ ಬಳಕೆ ಕಡಿಮೆ ಮಾಡಿ, ವೈರೆಸ್ ನ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳಿ, ಪೊಲೀಸ್ ಇಲಾಖೆಯೂಂದಿಗೆ ಸಹಕರಿಸಿ ಎಂದು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದರು.

     ಕರುನಾ ವೈರಸ್ ಸೋಂಕು ತಿಪಟೂರನ್ನು ಆವರಿಸಿದ್ದು ಆದಷ್ಟು ಎಚ್ಚರಿಕೆಯಿಂದ ಇರಿ ಯಾರಿಗಾದರೂ ಈ ರೋಗದ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿ ಚಿಕಿತ್ಸೆಯನ್ನು ಪಡೆಯಿರಿ ಎಂದು ಸಲಹೆ ನೀಡಿದರು. ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವುದು, ಅನಾವಶ್ಯಕವಾಗಿ ಹೊರಗೆ ಹೋಗದೆ ಇರುವುದರ ಬಗ್ಗೆ ಹೆಚ್ಚಿನ ಗಮನ ನೀಡಿ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap