ಚಿತ್ರದುರ್ಗ :
ಮುರುಘಾಮಠ ಯಾವತ್ತೂ ಒಳ್ಳೆಯ ಕೆಲಸ ಕಾರ್ಯಗಳ ಜೊತೆ ನಿಲ್ಲುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀಮುರುಘಾಮಠವು ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಮುಂಭಾಗದಲ್ಲಿ ಬರಗಾಲ ಮತ್ತು ಬೇಸಿಗೆಯ ಹಿನ್ನೆಲೆಯಲ್ಲಿ ಆರಂಭಿಸಲಾದ ಉಚಿತ ಮಜ್ಜಿಗೆ ವಿತರಣೆ ಕೇಂದ್ರವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು
ಶ್ರೀಮಠವು ಮಾಡುವ ಸತ್ಕಾರ್ಯಗಳಿಗೆ ಇತರೆ ಸಂಘಸಂಸ್ಥೆಗಳು ಕೈಜೋಡಿಸಬೇಕು. ಚಿತ್ರದುರ್ಗ ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ಪ್ರದೇಶ. ಆದ್ದರಿಂದ ಸಾರ್ವಜನಿಕರಿಗೆ ಮಜ್ಜಿಗೆ ಕೇಂದ್ರ ಆರಂಭಿಸಲಾಗಿದ್ದು, ಮಳೆ ಬೀಳುವವರೆಗೆ ಇದು ಮುಂದುವರೆಯುತ್ತದೆ ಎಂದರು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ.ಈ. ಚಿತ್ರಶೇಖರ್, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಪಟೇಲ್ ಶಿವಕುಮಾರ್, ಶಂಕರಮೂರ್ತಿ ಸಿ., ಶ್ರೀಮತಿ ರುದ್ರಾಣಿ ಗಂಗಾಧರ್, ಶ್ರೀಮತಿ ಗಾಯತ್ರಿ ಶಿವರಾಂ, ಮಹಡಿ ಶಿವಮೂರ್ತಿ, ಶಾಲಾಕಾಲೇಜುಗಳ ಮುಖ್ಯಸ್ಥರು ಇದ್ದರು.
ಇಂದಿನ ಮಜ್ಜಿಗೆ ದಾಸೋಹವನ್ನು ಮಾವಿನಹಳ್ಳಿ ಬಸವೇಶ್ವರ ಟ್ರಸ್ಟ್‍ನವರು ನಡೆಸಿಕೊಟ್ಟರು. ಮುಂದಿನ ದಿನಗಳಲ್ಲಿ ವೀರಶೈವ ಸಮಾಜ – 15 ದಿನ, ಪಟೇಲ್ ಶಿವಕುಮಾರ್ – 3 ದಿನ, ಶಂಕರಮೂರ್ತಿ ಸಿ. – 3 ದಿನ, ಎಸ್.ಜೆ.ಎಂ. ಮಹಿಳಾ ಕಾಲೇಜು – 15 ದಿನ, ಬಸವೇಶ್ವರ ಆಸ್ಪತ್ರೆ – 15ದಿನ ಸೇರಿದಂತೆ ಕೆ.ಎಂ.ವೀರೇಶ್, ಚಿನ್ಮೂಲಾದ್ರಿ ರೋಟರಿ ಕ್ಲಬ್, ರುದ್ರಾಣಿ ಗಂಗಾಧರ್, ಮಹಡಿ ಶಿವಮೂರ್ತಿ, ಮುರುಗೇಶ್, ಡಾ| ಗೌರಮ್ಮ, ಪರಮೇಶ್, ಡಾ| ರಮೇಶ್, ಸಿ.ಎಂ. ಚಂದ್ರಪ್ಪ, ಎಸ್.ಜೆ.ಎಂ. ಪಾಲಿಟೆಕ್ನಿಕ್, ಎಸ್.ಜೆ.ಎಂ. ನರ್ಸಿಂಗ್ ಕಾಲೇಜ್, ಎಸ್.ಜೆ.ಎಂ.ಆರ್.ಸಿ., ಕೆನರಾ ಬ್ಯಾಂಕ್, ಎಸ್.ಜೆ.ಎಂ. ಐಟಿಐ ಮತ್ತು ಕೊಟ್ರೇಶ್ ತಲಾ ಒಂದು ದಿನದ ಮಜ್ಜಿಗೆ ವಿತರಣೆ ದಾಸೋಹ ನೆರವೇರಿಸಲಿದ್ದಾರೆ.
ಪ್ರತಿದಿನ 40ಲಿಂದ 50 ಲೀಟರ್ ಮೊಸರು ಬೇಕಾಗುತ್ತದೆ. 2500 ರಿಂದ 3000 ಸಾವಿರ ಜನರಿಗೆ ಮಜ್ಜಿಗೆ ವಿತರಿಸುವ ಯೋಜನೆಯಿದ್ದು ದಾಸೋಹ ಮಾಡಲಿಚ್ಛಿಸುವ ಆಸಕ್ತ ಸಂಘ-ಸಂಸ್ಥೆಗಳು ಎಸ್.ಜೆ.ಎಂ. ಕ್ರೆ.ಕೋ.ಸೊ. ಬ್ಯಾಂಕ್ ಖಾತೆ (ನಂ. 3699)ಗೆ ಒಂದು ದಿನಕ್ಕೆ 3,000 ರೂ. ಪಾವತಿಸಿ ಮಜ್ಜಿಗೆ ದಾಸೋಹ ಸೇವೆಯನ್ನು ಮಾಡಬಹುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








