ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ : ಶ್ವೇತಾ ಪಿ.

ಹರಿಹರ:

       ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ಅವರಿಗೆ ಎಲ್ಲಾ ರೀತಿಯ ಜ್ಞಾನವನ್ನು ತಾಯಿಯೇ ನೀಡಬೇಕು, ಆಗ ಮಾತ್ರ ಮಕ್ಕಳು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಶ್ವೇತಾ ಪಿ. ಹೇಳಿದರು.

        ತಾಲೂಕಿನ ಎಳೆಹೊಳೆ ಗ್ರಾಮದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಜ್ಞಾನ ವಿಕಾಸ ಕೇಂದ್ರದ ಅದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಕತಿ ಸಂಸ್ಕಾರದ ಬಗ್ಗೆ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

         ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ, ಅವರಿಗೆ ಎಲ್ಲಾ ರೀತಿಯ ಜ್ಞಾನವನ್ನು ತಾಯಿಯೇ ನೀಡಬೇಕು, ಆಗ ಮಾತ್ರ ಮಕ್ಕಳು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ. ತಾಯಿ ಮಕ್ಕಳಿಗೆ ಶಿಸ್ತು, ಸಮ್ಯಮ, ಹಿರಿಯರಿಗೆ ಗೌರವ ಹಾಗೂ ತಾಳ್ಮೆಯ ಗುಣಗಳನ್ನು ತಾಯಿ ಕಲಿಸಿ ಬೆಳೆಸಬೇಕು. ಮೊದಲು ನಾವು ನಮ್ಮ ಸಂಸ್ಕøತಿಯನ್ನು ಕಲಿತರೆ ನಮ್ಮ ಮಕ್ಕಳು ಕಲಿಯುತ್ತಾರೆ ಎಂದು ತಾಯಂದಿರರಿಗೆ ಕಿವಿ ಮಾತನ್ನು ಹೇಳಿದರು.

        ಮೊದಲು ನಮ್ಮಲ್ಲಿ ಮನಸ್ಥೈರ್ಯ ಇರಬೇಕು. ನಮ್ಮ ಮಕ್ಕಳಿಗೆ ಒಳ್ಳೆಯ ಆಚಾರ ವಿಚಾರ ಕಲಿಸಬೇಕು. ತಾಯಿ ಮಕ್ಕಳ ಜೀವನ ಬಗ್ಗೆ ವಿಚಾರ ಮಾಡುತ್ತಾಳೆ. ಅದೇ ರೀತಿ ಮಕ್ಕಳು ಸಹ ಮುಂದೆ ತಮ್ಮ ತಂದೆ ತಾಯಿಗೆ ವಯಸ್ಸಾದ ನಂತರ ಅವರಿಗೆ ಗೌರವ ಮತ್ತು ಅವರ ಆರೋಗ್ಯವನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಳ್ಳಬೇಕು. ನಾವು ನಮ್ಮ ಜೀವನದಲ್ಲಿ ಇರುವುದನ್ನು ಬಿಟ್ಟು ಇಲ್ಲದನ್ನು ಬೇಡಬಾರದು. ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿಗುವಂತಹ ಮಾಹಿತಿಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶುಭ ಹಾರೈಸಿದರು.

       ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಜಿ. ರಾಮು ಅವರು ಮಾತನಾಡಿ, ತಾಯಿ ತಂದೆಯನ್ನು ಮೊದಲು ಪೂಜಿಸಬೇಕು. ಮಹಿಳೆಯರಲ್ಲಿ ಹೊಂದಾಣಿಕೆ ಹೆಚ್ಚು ಇರುತ್ತದೆ. ಗ್ರಾಮದಲ್ಲಿ ಇರುವ ಜನರಿಗೆ ಹೊಂದಾಣಿಕೆಗೂ ಪಟ್ಟಣದಲ್ಲಿರುವ ಜನರ ಹೊಂದಾಣಿಕೆಗೂ ಬಹಳ ವ್ಯತ್ಯಾಸ ಇದೆ. ಉತ್ತಮ ಸಂಸ್ಕತಿ ಮತ್ತು ಸಂಸ್ಕಾರದಲ್ಲಿ ಇರುವ ವ್ಯತ್ಯಾಸ. ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕತಿಯನ್ನು ಕಲಿಸಿ ಬೆಳೆಸಬೇಕು. ಮನುಷ್ಯ ಒಳ್ಳೆಯ ರೀತಿಯಲ್ಲಿ ಇದ್ದರೆ ಅವರನ್ನು ನೆನೆಯುತ್ತಾರೆ ಅದೇ ಕೆಟ್ಟವರಾದರೆ ನೆನೆಯುವುದಿಲ್ಲ. ಮನುಷ್ಯನ ಒಳ್ಳೆತನವನ್ನು ಅವನ ಮಾತಿನಲ್ಲಿಯೇ ತಿಳಿಯುತ್ತಾರೆ ಎಂದೂ ಹೇಳಿದರು.

        ಎಳೆಹೊಳೆಯ ಸ.ಹಿ.ಪ್ರಾ.ಶಾಲೆ ಶಿಕ್ಷಕರಾದ ಬಸವರಾಜ್ ಮಾತನಾಡಿ, ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ಭಾಗವಹಿಸುವುದರಿಂದ ತಾಯಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕತಿ ಮತ್ತು ಸಂಸ್ಕಾರ ಕಲಿಸುತ್ತಾರೆ. ತಾಯಂದಿರು ಮಕ್ಕಳ ಮುಂದೆ ಜೀವನದಲ್ಲಿ ಒಳ್ಳೆಯ ನಡೆತೆ, ಒಳ್ಳೆಯ ಸಂಸ್ಕತಿ ಕಲಿಸುತ್ತಾರೆ. ಇಂದು ಮಹಿಳೆಯರಿಗೆ ಸರಿಸಮವಾದ ಅಧಿಕಾರವನ್ನು ಕೊಡಬೇಕು. ಮಹಿಳೆಯರೂ ಸಹ ಅದೇ ರೀತಿಯಲ್ಲಿ ಬೆಳೆಯುತ್ತಿದ್ದಾರೆ ಎಂದು ಮಾಹಿತಿಯನ್ನು ನೀಡಿದರು.

         ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ರಾಘವೇಂದ್ರ ಬಿ. ಅವರು ಮಾತನಾಡಿ, ಹೆಣ್ಣೊಂದುಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ, ಮಕ್ಕಳಿಗೆ ಶಾಲೆಯಲ್ಲಿ ಸಿಗುವುದು ಪಾಠಶಾಲೆ, ಮನೆಯಲ್ಲಿ ಕಲಿಸುವುದು ಜೀವನ ಪಾಠ ಎಂದು ತಾಯಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಲದು ತಮ್ಮ ಮನೆಯಲ್ಲಿ ಒಳ್ಳೆಯ ಸಂಸ್ಕತಿ ಮತ್ತು ಸಂಸ್ಕಾರ ಕಲಿಸಬೇಕು. ಅವರ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿಕೊಡಬೇಕು. ಮಕ್ಕಳು ಶಾಲೆಗೆ ಹೋಗಿ ಒಳ್ಳೆಯ ಸಂಸ್ಕತಿಯ ಮಕ್ಕಳಾಗಿ ಬೆಳೆಯಬೇಕು ಎಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಜನಾಧಿಕಾರಿ ರಾಘವೇಂದ್ರ .ಬಿ, ಶ್ವೇತಾ.ಪಿ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜಿ.ರಾಮು, ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಬಸವರಾಜ್, ರೇಖಾ, ಪ್ರವೀಣ್ ಕುಮಾರ್ ಕೆ.ಎನ್.ಹಳ್ಳಿ, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿದಿಗಳು, ಕವಿತಾ, ಸಾವಿತ್ರಾ, ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap