ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಅನಿವಾರ್ಯ

ಚಿತ್ರದುರ್ಗ

    ಇಂದಿನ ದಿನದಲ್ಲಿ ಪರಿಸರದ ಕಾಳಜಿ ಕಡಿಮೆಯಾಗುತ್ತಿದೆ ಇದರಿಂದ ದೇಶದ ಮುಂದಿನ ಪ್ರಜೆಗಳಾದ ಮಕ್ಕಳಲ್ಲಿ ಇದರ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಸ್.ವೈ ವಟವಟಿ ತಿಳಿಸಿದರು.

    ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಲಾ ಚೈತನ್ಯ ಸೇವಾ ಸಂಸ್ಥೆ ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ-2019 ರ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಅಂತರ್ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

      ಮಕ್ಕಳು ಚಿತ್ರಕಲೆಯಲ್ಲಿ ಉತ್ತಮವಾಗಿ ವಾಯು ಮಾಲಿನ್ಯದ ಬಗ್ಗೆ ಚಿತ್ರಿಸಿದ್ದಾರೆ, ವಾಯು ಮಾಲಿನ್ಯವಾzರೆ ಏನು ಆಗುತ್ತದೆ ಎಂದು ಸಹಾ ತಿಳಿಸಿದ್ದಾರೆ, ಇದನ್ನು ತಡೆಗಟ್ಟಲು ಪರಿಸರದಿಂದ ಮಾತ್ರವೇ ಸಾಧ್ಯವಾಗಿದೆ ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಅವುಗಳು ಬೆಳೆಯುವಂತೆ ಮಾಡಿದರೆ ನಮಗೆ ಅನುಕೂಲ ಇದೆ ಎಂದ ಅವರು ಮಕ್ಕಳನ್ನು ಈ ದಿಸೆಯಲ್ಲಿ ಜಾಗೃತಿಯನ್ನು ಮೂಡಿಸಿದರೆ ಮುಂದಿನ ದಿನಮಾನದಲ್ಲಿ ಪರಿಸರ ಹೆಚ್ಚಾಗಬಹುದಾಗಿದೆ ಎಂದು ತಿಳಿಸಿದರು.

    ರಜೆಗಾಗಿ ಹಲವಾರು ಜನತೆ ನೀರು ಹಾಗೂ ಉತ್ತಮವಾದ ಪರಿಸರ ಇರುವ ಸ್ಥಳಗಳಿಗೆ ಭೇಟಿಯನ್ನು ನೀಡಿ ಅನಂದವನ್ನು ಹೊಂದುತ್ತಾರೆ ಆದರೆ ನಾವು ಅಲ್ಲಿಗೆ ಹೋಗಿ ಅನಂದವನ್ನು ಅನುಭವಿಸುವ ಬದಲು ನಮ್ಮ ಸುತ್ತಾ-ಮುತ್ತಲ್ಲಿನ ಪರಿಸದರಲ್ಲಿಯೇ ಈ ರೀತಿಯಾದ ವಾತಾವರಣವನ್ನು ನಿರ್ಮಾಣ ಮಾಡುವ ಕಾರ್ಯವನ್ನು ಮಾಡಬೇಕಿದೆ. ಚಿತ್ರದುರ್ಗ ಜಿಲ್ಲೆ ಬರಗಾಲ ಪೀಡಿತ ಪ್ರದೇಶವಾಗಿದೆ, ಮಳೆ ಎನ್ನುವುದು ಮರಿಚೀಕೆಯಾಗಿದೆ ಇದಕ್ಕೆ ಪರಿಸರ ಕಾರಣವಾಗಿದೆ, ಇಲ್ಲಿ ಉತ್ತಮವಾದ ಪರಿಸರ ನಿರ್ಮಾಣ ಮಾಡಿದರೆ ಮಳೆ ಬರುತ್ತದೆ ಇದರ ಅಂಗವಾಗಿ ಈ ರೀತಿಯಾದ ಕಾರ್ಯಕ್ರಮಗಳನ್ನು ಆಯೋಜನ ಮಾಡುವುದರ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಲಾಗುತ್ತಿದೆ ಎಂದು ನ್ಯಾಯಾಧೀಶರಾದ ವಟವಟಿ ತಿಳಿಸಿದರು.

       ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಪರಿಸರ ಅಧಿಕಾರಿ ಸಿ.ಡಿ. ಕುಮಾರ್ ಬಹುಮಾನ ವಿತರಣೆ ಮಾಡಿದರು. ಪರಿಸರ ತಜ್ಞ ಡಾ| ಹೆಚ್.ಕೆ. ಎಸ್ ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು, ಚಿತ್ರಕಲಾವಿದ ನಾಗರಾಜ್ ಬೇದ್ರೆ, ಉಪನ್ಯಾಸಕರಾದ ಕೆ.ಕೆ.ಕಮಾನಿ, ಪರಿಸರ ಅಧಿಕಾರಿ ಮುರುಳಿಧರ್ ಭಾಗವಹಿಸಿದ್ದರು. ವಿವಿಧೆಡೆಗಳಿಂದ 27 ಶಾಲೆಗಳಿಂದ ಸುಮಾರು 250 ವಿದ್ಯಾರ್ಥಿಗಳು ಈ ಚಿತ್ರಕಲಾ ಸ್ಫರ್ದೆಯಲ್ಲಿ ಭಾಗವಹಿಸಿದ್ದರು.

       ಪ್ರಾಥಮಿಕ ಶಾಲಾ ವಿಭಾಗದಲ್ಲಿ ಡಾನ್ ಬಾಸ್ಕೋದ 7ನೇ ತರಗತಿಯ ಕಿಶನ್ ಪ್ರಥಮ, ವಾಸವಿ ಶಾಲೆಯ ಆಕಾಶ ದ್ವಿತೀಯ, ಎಸ್.ಜೆ.ಎಂ. ಶಾಲೆಯ 5ನೇ ತರಗತಿಯ ಶ್ರಾವಣಿ ತೃತೀಯ, ಬಾಪೂಜಿ ಪಬ್ಲಿಕ್ ಶಾಲೆಯ ಹೇಮಂತ್ ನಾಯ್ಕ್, ಜ್ಞಾನ ಪೂರ್ವ ಶಾಲೆಯ ರಂಗೇಗೌಡ, ಗುರುಕುಲದ ಶ್ವೇತಾ, ಕುವೆಂಪು ಶಾಲೆಯ ಶಾಫೀಯಾ ಫೀದೂಸ್ ಹಾಗೂ ಸೈಯದ್ ಸಾಧಿಕ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

      ಪ್ರೌಢಶಾಲಾ ವಿಭಾಗದಲ್ಲಿ ಪಾಶ್ವನಾಥ್ ಶಾಲೆಯ ಕುಶಾಲ್ ಪ್ರಥಮ, ವಿದ್ಯಾ ವಿಕಾಸ ವಿದಾಸಂಸ್ಥೆಯ ನಾಗಾಅಮೃತ್ ದ್ವಿತೀಯ, ಜ್ಞಾನ ಪೂರ್ವ ಶಾಲೆಯ ಮೇಘಶ್ರೀ ತೃತೀಯ ಬಹುಮಾನ ಪಡೆದರೆ, ಕೆ,ಕೆ.ನ್ಯಾಷನಲ್ ಶಾಲೆಯ ಸುಕೃತ, ಜ್ಞಾನ ಭಾರತಿಯ ಸ್ನೇಹಾ, ಸಂತ ಜೋಸೆಫ್ ಕಾನ್ವೆಂಟ್‍ನ ಪ್ರೇರಣಾ, ನ್ಯಾಷನಲ್ ಪಬ್ಲಿಕ್ ಶಾಲೆಯ ಕಾರ್ತಿಕ, ಸರ್ಕಾರಿ ಪ್ರೌಡಶಾಲೆಯ ನೀತಿಶ್ ಕುಮಾರ್, ಬಾಪೂಜಿ ಬಾಲಕಿಯರ ಶಾಲೆಯ ದಿವ್ಯಶ್ರೀ ಹಾಗೂ ಪವನ್ ಕುಮಾರ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap