ರೈತರ ಭೂಮಿ ಮಂಜೂರಾತಿಗೆ ಯತ್ನಿಸಲಿ

ತುರುವೇಕೆರೆ

    ರೈತರನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಂಡು ಪ್ರತಿಭಟನೆ ಮಾಡಲು ಹೊರಟಿರುವ ಕ್ರಮ ಖಂಡನೀಯ ಎಂದು ತಾಲ್ಲೂಕು ರೈತ ಸಂಘದ ಅಧಕ್ಷ ಶ್ರೀನಿವಾಸಗೌಡ ಆರೋಪಿಸಿದರು.

     ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ರೈತರನ್ನು ಕೇವಲ ಓಟಿನ ಆಸೆಗಾಗಿ ಮನ ಒಲಿಸುವ ತಂತ್ರಕ್ಕೆ ಮುಂದಾಗಿದ್ದಾರೆ. ನಿಜವಾಗಿಯೂ ಬದ್ದತೆಯಿದ್ದಿದ್ದರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರು ಶಾಸಕರಾದ ಸಂದರ್ಭದಲ್ಲಿಯೇ ಗುಡ್ಡೇನಹಳ್ಳಿ ರೈತರಿಗೆ ಭೂಮಿ ಮಂಜೂರು ಮಾಡಿಸಿ, ನ್ಯಾಯ ಒದಗಿಸಬಹುದಿತ್ತು. ಆದರೆ ಪಾದಯಾತ್ರೆ, ಪ್ರತಿಭಟನೆ ಎಂದು ತಾಲ್ಲೂಕಿನಲ್ಲಿ ಅರಾಜಕತೆ ಸೃಷ್ಟಿ ಮಾಡಲು ಹೊರಟಿರುವುದದು ಸರಿಯಲ್ಲ ಎಂದರು.

    ಹಾಲಿ ಶಾಸಕ ಮಸಾಲ ಜಯರಾಮ್ ಅವರು ನಾಟಕೀಯ ಬೆಳವಣಿಗೆಯಲ್ಲಿ ಗುಡ್ಡೇನಹಳ್ಳಿ ಗ್ರಾಮಕ್ಕೆ ತೆರಳಿ ತೆಂಗಿನ ಸಸಿಗಳನ್ನು ಕಟ್ಟುವ ಮೂಲಕ ರೈತರ ಮನವೊಲಿಕೆಗೆ ಮುಂದಾಗಿದ್ದಾರೆ. ರೈತರು ರಾಜಕಾರಣಿಗಳ ಮಾತಿಗೆ ಕಿವಿಗೊಡದೆ ಭೂಮಿಯನ್ನು ಮಂಜೂರು ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಡೊಂಕಿಹಳ್ಳಿ ರಾಮಣ್ಣ, ರೈತ ಸಂಘದ ಪದಾಧಿಕಾರಿಗಳಾದ ರಹಮತ್, ನಾಗಣ್ಣ, ತಾಳ್ಕೆರೆ ಗಿರಿಯಪ್ಪ, ಶಿವನಂಜಪ್ಪ, ನರಸಿಂಹಮೂರ್ತಿ, ಪುರುಷೋತ್ತಮ್, ಶೇಖರ್, ನಾಗರಾಜು ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap